--Ads--

ಮಳೆ ಇಲ್ಲ ಬೆಳೆ ತೆಗಿಬೇಡಿ 

On: July 8, 2026 9:15 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಮಳೆ ಇಲ್ಲ ಬೆಳೆ ತೆಗಿಬೇಡಿ 

ಇದು ನಮ್ಮ ಕರ್ನಾಟಕದ ಮುಖ್ಯ ಮಂತ್ರಿ  ಡಿ ಕೆ ಶಿವಕುಮಾರ್ ರವರು ಇತ್ತೀಚಿಗೆ ಪ್ರೆಸ್ ಮೀಟ್ ನಲ್ಲಿ ಹೇಳಿದ್ದು. ಈವಯ್ಯ ಹೇಳಿದ್ರು ಅಂತಾ ಬೆಳೆ ತೆಗಿದಿದ್ರೆ ಹೊಟ್ಟೆಗ್ ಏನ್ ತಣ್ಣೀರ್ಬಟ್ಟೆ ಹಾಕೋಳ್ಳದಾ ? ಬೆಳೆ ಇಲ್ಲಾ ಊಟ ಮಾಡ್ಬೇಡಿ ಅಂದ್ರೆ ಏನ್ ಮಾಡೋದು ? ಡಿಕೆಶಿ ಬಂದ್ರು ಮಳೆ ನಿಂತೋಯ್ತು ಬರಗಾಲ ಬಂತು ಅವರ ಕಾಲುಗುಣ ಸರಿ ಇಲ್ಲ ಅಂದವರಿಗೆ ಈಗ ಮುಂಗಾರು ಮಳೆ ಚೆನ್ನಾಗಿದೆ.

ಎಲ್ಲಾ ಕಡೆ ಜೋರು ಮಳೆ ಬರ್ತಿದೆ. ಕಾಲಗುಣ, ಕೈಗುಣ ಹೇಳ್ದೋರೆಲ್ಲಾ ಎಲ್ಲೋದ್ರು? ಎಲ್ಲಾ ಊರಿನಲ್ಲೂ ಅಸ್ಟೇಕೆ ಪಕ್ಕದ ಮಹಾರಾಷ್ಟ್ರದಲ್ಲೂ ಮಳೆ ಬೀಳುತ್ತಿದೆ. ಮರಗಳು, ಲೈಟ್ ಕಂಬಗಳು ಬೀಳುತ್ತಿವೆ. ಮನೆಗಳು ಉದುರುತ್ತಿವೆ. ಮನೆಗಳ ಒಳಗೆ ನೀರು ನುಗ್ಗುತ್ತಿದೆ. ಇನ್ನು ಎಷ್ಟು ಮಳೆ ಬೇಕು?

ಇಲ್ಲಿ ಯಾರೋ ಸರೋಜ ಎಂಬಾಕೆಯನ್ನು ಅರೆಸ್ಟ್ ಮಾಡಿದ್ದಾರೆ ಯಾಕೆ ? ಆಕೆ ಮಾಡಿದ ತಪ್ಪಾದರೂ ಏನು? ಬೇಬಿ ಕೇರ್ ಸೆಂಟರ್ ನ ಕರ್ಮ ಕಾಂಡವನ್ನು ವಿಡಿಯೋ ಮಾಡಿ ಹೊರ ಜಗತ್ತಿಗೆ ತೋರಿಸಿದ್ದೆ ತಪ್ಪಾ?
ಕಾರ್ಪೊರೇಟ್ ಸಂಸ್ಥೆಯನ್ನು ಎದುರು ಹಾಕಿಕೊಳ್ಳಲು ಪೊಲೀಸಿನವರಿಗೆ ಸ್ವಲ್ಪ ಕಷ್ಟವಾಗುತ್ತಿದೆಯೇ ? ಕಾರಣವೇನು ? ಆಕೆಯನ್ನು ದಸ್ಥಗಿರಿ ಮಾಡುವ ಪ್ರಮೇಯ ಏನು ? ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗವು ಸುಮ್ಮನಿರುವುದೇತಕ್ಕೆ?
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ಸಂತೋಷ್ ಕುಮಾರ್ ಸುಮ್ಮನಾಗಿರುವುದಾದರು ಯಾತಕ್ಕೆ?

ಇದು ಸ್ಪಷ್ಟವಾಗಿ ಮಕ್ಕಳ ಡೇ ಕೇರ್ ಸಂಸ್ಥೆಯವರು ಇವರೆಲ್ಲರನ್ನು ಸುಮ್ಮನಾಗಿಸಿದ್ದಾರೆ. ಇಲ್ಲವಾದರೆ ಸಿಸಿಟಿವಿ ಗಿಂತಲೂ ಮೊದಲೇ ಆ ಕೇರ್ ಸೆಂಟರ್ ನ ಮಾಜಿ ಉದ್ಯೋಗಿಯು ಮಹಿಳಾ ಕೇರ್ ಟೇಕರ್ ಗಳು ಪುಟ್ಟು ಪುಟ್ಟು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಈ ಸಮಾಜಕ್ಕೆ ತಿಳಿಸುತ್ತಿರಲಿಲ್ಲ.

ಈ ಭ್ರಷ್ಟ ವ್ಯವಸ್ಥೆಯಲ್ಲಿ ಆ ಸುಜಾತಳಿಗೆ ನ್ಯಾಯ ದೊರಕುವುದು ಕನ್ನಡಿಯೊಳಗಿನ ಗಂಟು.
.. ಬಿ ಆರ್ ನರಸಿಂಹ ಮೂರ್ತಿ
9448174932

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ-ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ  ಸಚಿವರಿಂದ  ನಮನಗಳು 

ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ

ವಿಕಾಸ ಸೌಧದಲ್ಲಿ  ನಡೆದ ಕೆ ಆರ್ ಎಸ್ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ 

ಅಪೋಲೋ ಹಾಸ್ಪಿಟಲ್ಸ್‌ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್‌ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ

ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ