--Ads--

ವಿಜಯಪುರದಲ್ಲಿ ವಿಜಯನಗರ ಶಾಸನದ ಮರುಓದು…

On: July 9, 2026 2:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಿಜಯಪುರದಲ್ಲಿ ವಿಜಯನಗರ ಶಾಸನದ ಮರುಓದು

ದೇವನಹಳ್ಳಿ ತಾಲ್ಲೂಕು ವಿಜಯಪುರ ಗ್ರಾಮದ ಮೂಡಲ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಿಲ್ಲಿರುವ ಶಾಸನವನ್ನು ಪ್ರೊ.ನರಸಿಂಹನ್ ಅವರ ಮಾರ್ಗದರ್ಶನದಲ್ಲಿ ಕೆ.ಧನಪಾಲ್, ಸುದರ್ಶನರೆಡ್ಡಿ ಡಿ.ಎನ್ ಹಾಗೂ ಅಪ್ಪೆಗೌಡನಹಳ್ಳಿ ತ್ಯಾಗರಾಜ್ ಅವರ ತಂಡವು ಮರು ಅಧ್ಯಯನ ನಡೆಸಿ ಶಾಸನದ ಕಾಲ ಹಾಗೂ ದಾನ ವಿವರವುಳ್ಳ ಮಾಹಿತಿಯನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ.

ಈ ಶಾಸನವನ್ನು ಬಿ.ಎಲ್ ರೈಸ್ ಅವರು ಎಪಿಗ್ರಾಫಿಯಾ ಕರ್ನಾಟಿಕ ಸಂಪುಟ 9 ದೇವನಹಳ್ಳಿ ಶಾಸನ ಸಂಖ್ಯೆ 29ರಲ್ಲಿ ದಾಖಲಿಸಿದ್ದರು ಆದರೆ ಪಾಠ, ಸಾರಾಂಶ ಇತರೆ ವಿವರಗಳು ಅಸ್ಪಷ್ಟವಾಗಿದ್ದವು ಹಾಗಾಗಿ ತಂಡವು ಸ್ಥಳಿಯರ ಸಹಕಾರ ಪಡೆದು ಹಾಳಾಗುತ್ತಿದ್ದ ಶಾಸನವನ್ನು ಸಂರಕ್ಷಿಸಿ ಅಧ್ಯಯನ ಮಾಡಿದೆ.

ಈ ಶಾಸನದಲ್ಲಿ ಶಕ ವರ್ಷದ ಉಲ್ಲೇಖ, ಸಾಮಂತಾಧಿಪತಿಯಾದ ಅಂಕಿಯನಾಯಕನ ಬದಲು ರಂಕೀಯನಾಯ್ಕ, ಅಂಬಡಕ್ಕಿನಾಡು ಎಂಬ ಬರಹದ ಬದಲು ಅಂಜಹನಾಡು, ಹಾಗೂ ದಾನದ ವಿವರಗಳನ್ನು ಸರಿಯಾಗಿ ದಾಖಲಿಸಿರಲಿಲ್ಲ ಇದರಿಂದ ಇತಿಹಾಸವನ್ನು ಸರಿಯಾಗಿ ದಾಖಲಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ತಂಡವು ಶಾಸನದ ಮರುಓದನ್ನು ಮಾಡಿ ಶಾಸನದ ಕಾಲವನ್ನು ಕ್ರಿ.ಶ 1412 ಹಾಗೂ ವಿಜಯನಗರ ದೊರೆ ಒಂದನೇ ದೇವರಾಯ ಆಳುತ್ತಿದ್ದ ಸಮಯದಲ್ಲಿ ಮಹಾಪ್ರಧಾನ ನಾಗಣ್ಣ ದಂಣ್ಣಾಯಕರು ಈ ಪ್ರದೇಶವನ್ನು ಆಳುತ್ತಿದ್ದರು ಆಗ ಸಾಮಂತನಾದ ಅಂಕೀಯನಾಯ್ಕನ ಮಗ ತಂಮೇಯನಾಯಕರು ಅಂಬಡಕ್ಕಿನಾಡಿನ ವಡಿಗೆಯಹಳ್ಳಿ (ಇಂದಿನ ವಿಜಯಪುರ) ಗ್ರಾಮದಲ್ಲಿ ಸಂತೆಯನ್ನು ಕಟ್ಟಿ ಅಂದರೆ ಸಂಥೆ ನಡೆಯಲು ಅವಕಾಶ ಮಾಡಿಕೊಟ್ಟು, ಗ್ರಾಮದ ಗಣೇಶ್ವರ ಮತ್ತು ಗವುರೇಶ್ವರ ದೇವರ ಪೂಜಾಕೈಂಕರ್ಯಗಳಿಗೆ ದಾನವನ್ನು ನೀಡಿದ್ದಾರೆ‌ .

ಇದೇ ಸಮಯದಲ್ಲಿ ಇಲ್ಲಿ‌ನ ನಾನಾದೇಶಿ, ಸಾಲುಮೂಲೆ, ವಡ್ಡವ್ಯವಹಾರಿಗಳಲ್ಲಿ ಪ್ರಮುಖ ವರ್ತಕರಾದ ಬಯಪ್ಪ, ದೇವಪ್ಪ, ನಕಿಸೆಟ್ಟಿ ಮುಂತಾದ ಸೆಟ್ಟಿ ವರ್ತಕರು ಸೇರಿಕೊಂಡು ಗವುರೇಶ್ವರ ದೇವರಿಗೆ ಸಂತೆಯ ಮಗಮೆ, ಇಂಗು, ಗಂಧ, ಕರ್ಪೂರ, ಕಸ್ತೂರಿ, ಮೆಣಸು, ಜವದಿ ಹೀಗೆ ಅನೇಕ ತೆರಿಗೆಗಳ ಸರ್ವಸ್ವಾಮ್ಯವನ್ನು ಬಿಟ್ಟುಕೊಟ್ಟಿರುವ ಅಮೂಲ್ಯ ಮಾಹಿತಿಯು ಈ ಶಾಸನದಿಂದ ಲಭ್ಯವಾಗುತ್ತದೆ. ಜೊತೆಗೆ ಈ ದಾನಕ್ಕೆ ಶ್ರೀಗವುರೇಶ್ವರ, ಗಣೇಶ್ವರ, ನಾಡಿನ ಪ್ರಮುಖರ ಸಾಕ್ಷಿಯಾಗಿ ದಾನ ನೀಡಲಾಗಿದ್ದು ಈ ಶಾಸನವನ್ನು ನಾಚೋಜ ಬರೆದ ಮಾಹಿತಿಯೂ ಲಭ್ಯವಾಗುತ್ತದೆ.

ಈ ಮರುಓದಿನಿಂದ ವಿಜಯಪುರ ಗ್ರಾಮದ ಆರ್ಥಿಕ, ಧಾರ್ಮಿಕ ಅಂಶಗಳು, ದೇವಾಲಯಗಳ ಉಲ್ಲೇಖ ಹಾಗೂ ಹಲವಾರು ವರ್ತಕರ ತಂಡವೇ ಇಲ್ಲಿತ್ತು ಎಂಬ ಮಹತ್ವದ ಅಂಶಗಳು ಬೆಳಕಿಗೆ ಬಂದಿದೆ ಎಂದು ಶಾಸನ ತಜ್ಞರಾದ ಪ್ರೊ. ಕೆ.ಆರ್ ನರಸಿಂಹನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಶಾಸನ ಅಧ್ಯಯನದಲ್ಲಿ ಸಂಶೋಧನಾರ್ಥಿ ಎಂ. ನರೇಂದ್ರ, ಶಶಿಕುಮಾರನಾಯ್ಕ ಹಾಗೂ ಸ್ಥಳೀಯರು ಇದ್ದಾರೆ.

WhatsApp

Join Now

Telegram

Join Now

Instagram

Join Now