ವಿಜಯ ದರ್ಪಣ ನ್ಯೂಸ್….
ಅಪೋಲೊ ಆಸ್ಪತ್ರೆಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ಕಾರ್ಡ್ ಬಿಡುಗಡೆ
ಪತ್ರಕರ್ತರ ಆರೋಗ್ಯ ಸೇವೆಗೆ ವಿಶೇಷ ಸೇವಾ ಸೌಲಭ್ಯ ಈ ಸೌಲಭ್ಯವನ್ನು ಪತ್ರಕರ್ತರು ಸಹ ಉಪಯೋಗ ಮಾಡಿಕೊಳ್ಳಿ ಸಚಿವ ನರೇಂದ್ರಸ್ವಾಮಿ
ತಾಂಡವಪುರ ನವಂಬರ್.24,
ಪತ್ರಕರ್ತರಿಗೆ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಪ್ರತಿಷ್ಠಿತ ಅಪೋಲೊ ಬಿಜಿಎಸ್ ಆಸ್ಪತ್ರೆಯಿಂದ ಪರಿಚಯಿಸಿರುವ ವಿಶೇಷ ಪ್ರಿವಿಲೇಜ್ ಆರೋಗ್ಯ ಕಾರ್ಡ್ ಅನ್ನು ಮಂಗಳವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಬಿಡುಗಡೆ ಮಾಡಲಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಅಪೋಲೊ ಬಿಜಿಎಸ್ ಆಸ್ಪತ್ರೆಯ ಸಹಯೋಗದಲ್ಲಿ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಅಪೋಲೊ ಆಸ್ಪತ್ರೆಯ ಹಿರಿಯ ಉಪಾಧ್ಯಕ್ಷ(RoK) ಭರತೀಶ್ ರೆಡ್ಡಿ ಅವರು, ಪತ್ರಕರ್ತರಿಗಾಗಿ ಪರಿಚಯಿಸಲಾಗಿರುವ ವಿಶೇಷ ಪ್ರಿವಿಲೇಜ್ ಹೆಲ್ತ್ ಕಾರ್ಡ್ ಬಿಡುಗಡೆಗೊಳಿಸಿದರು. ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ವಿಶೇಷ ಕಾರ್ಡ್ ಪರಿಚಯಿಸಿದ್ದು, ಇದರ ಮೂಲಕ ಆಸ್ಪತ್ರೆಯ ಆರೋಗ್ಯ ಸೇವೆಗಳ ಪ್ರಯೋಜನ ಪಡೆಯಬಹುದಾಗಿದೆ. ಪತ್ರಕರ್ತರಿಗೆ ಆರೋಗ್ಯ ಸೇವೆಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಸೌಲಭ್ಯ ಕಲ್ಪಿಸಿದೆ. ಎಂದು ಹೇಳಿದರು
ಬಿಎಲ್ಎಸ್ ತರಬೇತಿ:
ಕಾರ್ಯಕ್ರಮಕ್ಕೂ ಮುನ್ನ ಪತ್ರಕರ್ತರಿಗಾಗಿ ಬಿಎಲ್ಎಸ್ ತರಬೇತಿ ನೀಡಲಾಯಿತು. ಅಪೋಲೊ ಆಸ್ಪತ್ರೆಯ ತುರ್ತು ಔಷಧೀಯ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಬಿ. ಬಸವರಾದ್ದರ್ ಅವರು, ತುರ್ತು ಆರೋಗ್ಯ ಸಮಸ್ಯೆಗಳ ವೇಳೆ ಪ್ರಾಥಮಿಕ ಚಿಕಿತ್ಸೆ ನೀಡುವ ಜ್ಞಾನ ಅತ್ಯಂತ ಅವಶ್ಯಕವಾಗಿದೆ. ಅದರಲ್ಲೂ ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಸಕಾಲದಲ್ಲಿ ನೀಡುವ ಸಿಪಿಆರ್ ಸೇರಿದಂತೆ ಮೂಲಭೂತ ಜೀವರಕ್ಷಕ ಚಿಕಿತ್ಸಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಯೋಗಾತ್ಮ ಶ್ರೀಹರಿ ದ್ವಾರಕನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಸೇರಿದಂತೆ ಮುಂತಾದವರು ಹಾಜರಿದ್ದು
ಪತ್ರಕರ್ತರಿಗೆ ಗುಣಮಟ್ಟದ ಚಿಕಿತ್ಸೆ ಕಲ್ಪಿಸುವ ಸಲುವಾಗಿ ವಿಶೇಷ ಹೆಲ್ತ್ ಕಾರ್ಡ್ ಪರಿಚಯಿಸಲಾಗಿದೆ. ಎಲ್ಲಾ ಪತ್ರಕರ್ತರು ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.
ಎನ್.ಜಿ. ಭರತೀಶ್ ರೆಡ್ಡಿ,
ಹಿರಿಯ ಉಪಾಧ್ಯಕ್ಷ, ಅಪೋಲೊ ಆಸ್ಪತ್ರೆ(RoK).
ಪತ್ರಕರ್ತರ ಅನುಕೂಲಕ್ಕಾಗಿ ವಿಶೇಷ ಹೆಲ್ತ್ ಕಾರ್ಡ್ ಪರಿಚಯಿಸಿ, ಕಡಿಮೆ ದರದಲ್ಲಿ ಚಿಕಿತ್ಸಾ ಸೌಲಭ್ಯ ನೀಡುತ್ತಿರುವ ಅಪೋಲೋ ಆಸ್ಪತ್ರೆ ಕಾರ್ಯ ಶ್ಲಾಘನೀಯವಾಗಿದೆ. ಎಲ್ಲಾ ಪತ್ರಕರ್ತರು ಇದರ ಉಪಯೋಗ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನವಹಿಸಬೇಕಿದೆ.
ಪಿ.ಎಂ. ನರೇಂದ್ರ ಸ್ವಾಮಿ,
ಕೃಷಿ ಸಚಿವರು.

ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕ ಪತ್ರಕರ್ತರಿಗೆ ಅಪೋಲೋ ಆಸ್ಪತ್ರೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದಿಂದ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಿ. ಶಿವಪ್ರಸಾದ್, ಎಲ್.ಎಸ್. ಶ್ರೀಕಾಂತ್, ಎಂ.ಬಿ. ಪವನ್ ಮೂರ್ತಿ, ಮೋಹನ್ ಕಾಯಕ, ಅವಿನಾಶ್ ಜೈನಹಳ್ಳಿ, ಎಸ್.ಕೆ. ನಾಗೇಶ್, ನಾಗರಾಜ್ ನವೀಮನೆ, ಎಂ.ಮಹೇಶ್, ಎಂ. ಬೀರೇಶ್, ಕೆ.ಕೆ. ಕಾರ್ತಿಕ್ ಅವರುಗಳನ್ನು ಅಭಿನಂದಿಸಲಾಯಿತು












