--Ads--

” ಉಪ್ಪಾರಹಳ್ಳಿ ಶ್ರೀ ಕಾಟೇರಮ್ಮ ದೇವಾಲಯದಲ್ಲಿ ನೂತನ ಕನ್ನಡ ಚಲನಚಿತ್ರಕ್ಕೆ ಮುಹೂರ್ತ “

On: November 24, 2026 4:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

” ಉಪ್ಪಾರಹಳ್ಳಿ ಶ್ರೀ ಕಾಟೇರಮ್ಮ ದೇವಾಲಯದಲ್ಲಿ ನೂತನ ಕನ್ನಡ ಚಲನಚಿತ್ರಕ್ಕೆ ಮುಹೂರ್ತ “

ಹೊಸಕೋಟೆ ತಾಲೂಕಿನ ಯುವ ಪ್ರತಿಭೆಗಳ ಸಂಗಮದಲ್ಲಿ ಚಂಪಕ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೆ ಚಾಲನೆ

ತಾವರೆಕೆರೆ: ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಶ್ರೀ ಕಾಟೇರಮ್ಮ ದೇವಾಲಯದಲ್ಲಿ ಶ್ರೀ ಚಂಪಕ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ನೂತನ ಚಲನಚಿತ್ರದ ಮುಹೂರ್ತ ಕಾರ್ಯಕ್ರಮವು ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿತು.

ಹೊಸಕೋಟೆ ತಾಲೂಕಿನ ಯುವ ಪ್ರತಿಭೆಗಳ ತಂಡವನ್ನು ಒಳಗೊಂಡಿರುವ ಈ ಚಿತ್ರಕ್ಕೆ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರ ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುತ್ಸಂದ್ರ ಗ್ರಾಮದ ಆನಂದಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ತಮ್ಮಲ್ಲಿರುವ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂದಿನ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ. ಅದೇ ರೀತಿ ಈ ಚಿತ್ರದ ನಾಯಕ ನಟ ಪ್ರತಾಪ್ ಅವರು ನಮ್ಮ ಗ್ರಾಮದ ಉದಯೋನ್ಮುಖ ನಟರಾಗಿದ್ದು, ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಮುಂದಿನ ಕಲಾ ಪಯಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಹೊಸಕೋಟೆ ತಾಲೂಕಿನ ಮುಖಂಡರಾದ ಬಾಲಚಂದ್ರ ಮಾತನಾಡಿ, ಈ ಚಿತ್ರವು ಹೊಸ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ವಿಶೇಷವೆಂದರೆ ಚಿತ್ರದಲ್ಲಿ ಹೊಸಕೋಟೆ ತಾಲೂಕಿನ ಹಲವಾರು ಯುವ ಪ್ರತಿಭೆಗಳು ಭಾಗಿಯಾಗಿದ್ದು, ಚಿತ್ರದ ಚಿತ್ರೀಕರಣವೂ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯಲಿದೆ. ಈ ಮೂಲಕ ನಮ್ಮ ತಾಲೂಕಿನ ಕಲೆ, ಸಂಸ್ಕೃತಿ ಹಾಗೂ ಸ್ಥಳೀಯ ಪ್ರದೇಶಗಳು ರಾಜ್ಯದಾದ್ಯಂತ ಗುರುತಿಸಿಕೊಳ್ಳಲು ಅವಕಾಶ ದೊರೆಯಲಿದೆ. ಚಿತ್ರವು ಉತ್ತಮ ಯಶಸ್ಸು ಕಂಡು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾಯಕ ನಟ ಪ್ರತಾಪ್ ಮಾತನಾಡಿ, ನನ್ನ ಬಹುದಿನಗಳ ಕನಸು ಹಾಗೂ ಸತತ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ತಾಯಿ ಕಾಟೇರಮ್ಮ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ನಮ್ಮ ಚಿತ್ರತಂಡದೊಂದಿಗೆ ಸ್ಥಳೀಯ ಮುಖಂಡರು ಹಾಗೂ ಹಿತೈಷಿಗಳು ಕೈಜೋಡಿಸಿರುವುದು ಮತ್ತಷ್ಟು ಉತ್ಸಾಹ ತಂದಿದೆ. ನಾಯಕ ನಟನಾಗಿ ಅಭಿನಯಿಸಲು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿರುವ ಚಿತ್ರತಂಡಕ್ಕೆ ಧನ್ಯವಾದಗಳು. ನಮ್ಮ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹಾಗೂ ಸ್ಥಳೀಯ ಪ್ರದೇಶಗಳನ್ನು ರಾಜ್ಯ ಮತ್ತು ದೇಶದ ಮೂಲೆ ಮೂಲೆಗೂ ಪರಿಚಯಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಚಿತ್ರ ಯಶಸ್ವಿಯಾಗಿ ಮೂಡಿಬರಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಕ್ತಿಯಾರ್ ಪಾಷಾ ,ಸುನಿಲ್ ಕುಮಾರ್ ಭೀಮರಾಜ್ ,ವೆಂಕಟೇಗೌಡ ವೆಂಕಟರಾಮ, ನಾಗರಾಜ್ ,ಪುನೀತ್ ಯಾದವ್ ,ಶರತ್ ಯಾದವ್, ಭರತ್ ಯಾದವ್,ಚಲನಚಿತ್ರದ ನಿರ್ದೇಶಕರಾದ ಹಾರಿಕಾ HV ,ಚಿತ್ರದ ನಾಯಕ ನಟಿ ಸಾಕ್ಷಿ
ನಿರ್ಮಾಪಕ ಸುನೀಲ್ ಕುಮಾರ್ A
ಸಾರಿಕಾ ಹಿರಿಯ ನಟಿ ಗೀತಾ ಸೈ ಭಾರತ್ ಕಾಮಿಡಿ ಖಿಲಾಡಿ, ನೃತ್ಯ ನಿರ್ದೇಶಕರಾದ ರಂಜಿತ್ , ಶಿವು ಆರಾಧ್ಯ .
ವಿಶಾಲ್ ರಾಜ್ವಂಶಿ. ಅದಿತೀ. ಹರೀಶ್, ಪಯಾಜ್ ಕೋಡೈರೆಕ್ಟರ್. ರಾಕೇಶ್. ಹರ್ಷಿತ್ ಗೌಡ, ರವಿ, ನಂದೀಶ್.ರಕ್ಷಿತ್

WhatsApp

Join Now

Telegram

Join Now

Instagram

Join Now