ವಿಜಯ ದರ್ಪಣ ನ್ಯೂಸ್….
ಹೊಂಡಾ ಕಾರ್ಸ್ ಇಂಡಿಯಾದಿಂದ ಭಾರತದಲ್ಲಿ ಹೊಂಡಾ ಝಡ್.ಆರ್.-ವಿ ಇ:ಎಚ್.ಇ.ವಿ. ಬೆಲೆ ಮತ್ತು ಪೂರೈಕೆಗಳ ಪ್ರಕಟಣೆ

ಜಾಗತಿಕವಾಗಿ ಪ್ರಶಂಸೆ ಪಡೆದ ಹೈಬ್ರಿಡ್ ಎಸ್.ಯು.ವಿ.ಯು ಉತ್ಸಾಹಕರ ಕಾರ್ಯಕ್ಷಮತೆ, ಪ್ರೀಮಿಯಂ ಸೌಖ್ಯ ಮತ್ತು ಸುಧಾರಿತ ಹೈಬ್ರಿಡ್ ತಂತ್ರಜ್ಞಾನವನ್ನು ಭಾರತದ ಪ್ರೀಮಿಯಂ ಎಸ್.ಯು.ವಿ. ವಲಯಕ್ಕೆ ತಂದಿದೆ
ನವದೆಹಲಿ, ಜುಲೈ 25, 2026: ಭಾರತದ ಪ್ರಮುಖ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್.ಸಿ.ಐ.ಎಲ್) ಜಾಗತಿಕವಾಗಿ ಅಪಾರ ಮೆಚ್ಚುಗೆ ಪಡೆದ ತನ್ನ ಪ್ರೀಮಿಯಂ ಹೈಬ್ರಿಡ್ ಎಸ್.ಯು.ವಿ. ಆಲ್-ನ್ಯೂ ಹೊಂಡಾ ಝಡ್.ಆರ್.-ವಿ ಇ:ಎಚ್.ಇ.ವಿ.ಯ ಬೆಲೆ ಹಾಗೂ ಪೂರೈಕೆಗಳ ಪ್ರಾರಂಭವನ್ನು ಪ್ರಕಟಿಸಿದೆ.
ಈ ಮಾಡೆಲ್ ಅನ್ನು ಜಪಾನ್ ನಿಂದ ಕಂಪ್ಲೀಟ್ಲಿ ಬಿಲ್ಟ್ ಯೂನಿಟ್ ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಭಾರತದಲ್ಲಿ ಹೊಂಡಾದ ಹೊಸ ಫ್ಲ್ಯಾಗ್ ಶಿಪ್ ಎಸ್.ಯು.ವಿ. ಆಗಿ ಬಿಡುಗಡೆ ಮಾಡಲಾಗಿದೆ.
ಇದರ ಪ್ರಾರಂಭಿಕ ಶೋರೂಮ್ ಬೆಲೆ ₹ 47,99,000* ಲಕ್ಷ ಆಗಿದೆ (ಎಕ್ಸ್-ಶೋರೂಮ್, ದೆಹಲಿ).
ಆಲ್-ನ್ಯೂ ಝಡ್.ಆರ್.-ವಿ ಇ:ಎಚ್.ಇ.ವಿ.ಬಿಡುಗಡೆಯು ಭಾರತದಲ್ಲಿ ಹೊಂಡಾಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇದು ಜಾಗತಿಕವಾಗಿ ಯಶಸ್ಸು ಕಂಡ ತನ್ನ ಪ್ರೀಮಿಯಂ ಹೈಬ್ರಿಡ್ ಎಸ್.ಯು.ವಿ.ಗಳಲ್ಲಿ ಒಂದನ್ನು ಭಾರತೀಯ ಗ್ರಾಹಕರಿಗೆ ತಲುಪಿಸುತ್ತಿದೆ.
ಈ ಮಾಡೆಲ್ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರಿ ಯಶಸ್ಸನ್ನು ಪಡೆದಿದ್ದು, 2022ರ ನಂತರ ಒಟ್ಟು 8 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟವಾಗಿವೆ. ವಿಶಿಷ್ಟ ಹಾಗೂ ಉನ್ನತ ಮಟ್ಟದ ಎಸ್.ಯು.ವಿ. ಅನುಭವವನ್ನು ಬಯಸುವ ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾರುಕಟ್ಟೆಗೆ ತರಲಾಗಿದೆ.
ತನ್ನ ಆಕರ್ಷಕ ಮತ್ತು ಅತ್ಯಾಧುನಿಕ ಎಸ್.ಯು.ವಿ. ಶೈಲಿ, ರೋಮಾಂಚಕ ಕಾರ್ಯಕ್ಷಮತೆ, ಗಮನಾರ್ಹ ಇಂಧನ ಕ್ಷಮತೆ ಹಾಗೂ ಪ್ರೀಮಿಯಂ ವಿನ್ಯಾಸಕ್ಕಾಗಿ ಜಾಗತಿಕವಾಗಿ ಮಾನ್ಯತೆ ಪಡೆದಿರುವ ಝಡ್.ಆರ್.-ವಿ ಇ:ಎಚ್.ಇ.ವಿ.ಹೊಂಡಾದ ಸುಧಾರಿತ 2ಲೀ ಇ:ಎಚ್.ಇ.ವಿ. ಸ್ಪೋರ್ಟ್ಸ್ ಹೈಬ್ರಿಡ್ ಪವರ್‌ಟ್ರೇನ್ ನೊಂದಿಗೆ ಬರುತ್ತದೆ.
ಇದು ಪ್ರೀಮಿಯಂ ಎಸ್.ಯು.ವಿ. ವಿಭಾಗದಲ್ಲೇ ಅತ್ಯಂತ ಸುಧಾರಿತ ಮತ್ತು ಸ್ಪೋರ್ಟಿ ಹೈಬ್ರಿಡ್ ಎಸ್.ಯು.ವಿ.ಗಳಲ್ಲಿ ಒಂದಾಗಿದ್ದು, 184 ಪಿ.ಎಸ್. @5000 – 6000 ಆರ್.ಪಿ.ಎಂ. ಗರಿಷ್ಠ ಶಕ್ತಿ, 315 ಎನ್.ಎಂ @ 0 – 2000 ಆರ್.ಪಿ.ಎಂ. ಗರಿಷ್ಠ ಟಾರ್ಕ್, ಲೀ.ಗೆ 22.80* ಕಿ.ಮೀ ಅತ್ಯುತ್ತಮ ಇಂಧನ ಕ್ಷಮತೆ ಮತ್ತು ಕೇವಲ 7.9 ಸೆಕೆಂಡುಗಳಲ್ಲಿ 0-100 ಕಿ.ಮೀ/ಗಂಟೆಯ ವೇಗ ಪಡೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ.
ಈ ಬೆಲೆ ಪ್ರಕಟಣೆಯ ಕುರಿತು ಮಾತನಾಡಿದ ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ಉಪಾಧ್ಯಕ್ಷರಾದ ಶ್ರೀ ಕುನಾಲ್ ಬೆಹ್ಲ್, “ನಾವು ಆಲ್ ನ್ಯೂ ಹೊಂಡಾ ಝಡ್.ಆರ್.-ವಿ ಇ:ಎಚ್.ಇ.ವಿ ವಿತರಣೆಯನ್ನು ಪ್ರಾರಂಭಿಸುತ್ತಿದ್ದು ಇಂದು ಭಾರತದಲ್ಲಿ ಹೊಂಡಾದ ಪಯಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.
ಭಾರತದಲ್ಲಿನ ನಮ್ಮ ಸಾಲಿನಲ್ಲಿ ಫ್ಲ್ಯಾಗ್‌ಶಿಪ್ ಮಾಡೆಲ್ ಆಗಿ ಸ್ಥಾನ ಪಡೆದಿರುವ ಝಡ್.ಆರ್-ವಿ ಸದೃಢ ಹೈಬ್ರಿಡ್ ತಂತ್ರಜ್ಞಾನ, ವಿನ್ಯಾಸ, ಆರಾಮದಾಯಕತೆ ಮತ್ತು ಸುರಕ್ಷತೆಯಲ್ಲಿ ಹೊಂಡಾದ ಜಾಗತಿಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಗ್ರಾಹಕರಿಗೆ ಅತ್ಯಂತ ಅತ್ಯಾಧುನಿಕ ಹಾಗೂ ರೋಮಾಂಚಕ ಚಾಲನಾ ಅನುಭವವನ್ನು ನೀಡುತ್ತದೆ.
ಭಾರತೀಯ ಮಾರುಕಟ್ಟೆಗಾಗಿ ನಿಗದಿಪಡಿಸಲಾಗಿದ್ದ ಮೊದಲ ಎರಡು ಬ್ಯಾಚ್ ಗಳು ಈಗಾಗಲೇ ಬುಕ್ ಆಗಿದ್ದು, ಝಡ್.ಆರ್.-ವಿಯ ಮುಂಗಡ ಬುಕಿಂಗ್ ಗೆ ಸಿಕ್ಕಿರುವ ಉತ್ತೇಜಕರ ಪ್ರತಿಕ್ರಿಯೆಯು ನಮಗೆ ಸಂತೋಷ ತಂದಿದೆ. ನಮ್ಮ ಗ್ರಾಹಕರ ನಂಬಿಕೆ ಮತ್ತು ಉತ್ಸಾಹಕ್ಕೆ ನಾವು ಅಭಾರಿಯಾಗಿದ್ದೇವೆ.
ಈ ಆರ್ಡರ್‌ಗಳನ್ನು ಪೂರೈಸಲು ಪ್ರಾರಂಭಿಸುತ್ತಿದ್ದಂತೆ ಮತ್ತು ಇನ್ನೂ ಹೆಚ್ಚಿನ ಗ್ರಾಹಕರನ್ನು ಹೊಂಡಾ ಕುಟುಂಬಕ್ಕೆ ಸ್ವಾಗತಿಸಿ ಅತ್ಯುತ್ತಮ ಮಾಲೀಕತ್ವದ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ,” ಎಂದು ಹೇಳಿದರು.
ಆಲ್-ನ್ಯೂ ಹೊಂಡಾ ಝಡ್.ಆರ್.-ವಿ- ಹೈಬ್ರಿಡ್ ಅನಾವರಣ
ಭವ್ಯ ಪರಿಕಲ್ಪನೆ – ನಿಮ್ಮ ಸಾಮರ್ಥ್ಯ ಅನಾವರಣಗೊಳಿಸಿ
“ನಿಮ್ಮ ಸಾಮರ್ಥ್ಯ ಅನಾವರಣಗೊಳಿಸಿ” ಎಂಬ ಅದ್ಧೂರಿ ಪರಿಕಲ್ಪನೆಯ ಸುತ್ತಲೂ ನಿರ್ಮಿಸಲಾದ ‘ಆಲ್-ನ್ಯೂ ಝಡ್.ಆರ್.-ವಿ, ಸ್ವಾತಂತ್ರ್ಯ, ಆತ್ಮವಿಶ್ವಾಸ ಮತ್ತು ಚಾಲನೆಯ ಆನಂದವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಪರಿಕಲ್ಪನೆಯನ್ನು ಮೂರು ಪ್ರಮುಖ ಸ್ತಂಭಗಳ ಮೂಲಕ ವ್ಯಕ್ತಪಡಿಸಲಾಗಿದೆ:
• ಅದ್ಭುತ ಹೊರಾಂಗಣ ವಿನ್ಯಾಸ – ರಸ್ತೆಯಲ್ಲಿ ಭವ್ಯವಾಗಿ ಎದ್ದು ಕಾಣುವ ಗಂಭೀರ ಹಾಗೂ ದಿಟ್ಟ ಎಸ್.ಯುವಿ. ಶೈಲಿ
• ಅತ್ಯಾಧುನಿಕ ಒಳಾಂಗಣ – ಪ್ರೀಮಿಯಂ ವಿನ್ಯಾಸ ಮತ್ತು ಅತ್ಯುತ್ತಮ ಆರಾಮದಾಯಕತೆ
• ಚಾಲನೆಯ ಆನಂದ– ಎಸ್.ಯು.ವಿ.ಯ ಪ್ರಾಯೋಗಿಕತೆಯೊಂದಿಗೆ ಸೆಡಾನ್ ನಂತೆ ನಿರ್ವಹಣೆ
2ಲೀ ಇ:ಎಚ್.ಇ.ವಿ. ಸ್ಪೋರ್ಟ್ಸ್ ಹೈಬ್ರಿಡ್ ಪವರ್ಟ್ರೈನ್:
ಹೊಂಡಾ ಝಡ್.ಆರ್.-ವಿ.ಯು ಇ:ಎಚ್.ಇ.ವಿ ಸ್ಪೋರ್ಟ್ಸ್ ಹೈಬ್ರಿಡ್ ಸಿಸ್ಟಂನೊಂದಿಗೆ ಸನ್ನದ್ಧವಾಗದ್ದು 2.0-ಲೀಟರ್ ಡೈರೆಕ್ಟ್ ಇಂಜೆಕ್ಷನ್ ಅಟ್ಕಿನ್ಸನ್-ಸೈಕಲ್ ಎಂಜನ್ ಮತ್ತು ಸುಧಾರಿತ ಡ್ಯುಯಲ್-ಮೋಟರ್ ಹೈಬ್ರಿಡ್ ಸಿಸ್ಟಂ ಅನ್ನು ಇ-ಸಿವಿಟಿಯೊಂದಿಗೆ ಸಂಯೋಜಿಸಿದ್ದು ಸಂಯೋಜಿತ ಗರಿಷ್ಠ ಶಕ್ತಿ 184 ಪಿ.ಎಸ್.@5000-6000 ಆರ್.ಪಿ.ಎಂ., ಗರಿಷ್ಠ ಟಾರ್ಕ್ 315 ಎನ್.ಎಂ.@0-2000 ಆರ್.ಪಿ.ಎಂ. ಮತ್ತು ಲೀಟರ್ ಗೆ 22.8* ಕಿ.ಮೀ. ಅಸಾಧಾರಣ ಇಂಧನ ಕ್ಷಮತೆ ನೀಡುತ್ತದೆ.
ಇಂಟೆಲಿಜೆಂಟ್ ಹೈಬ್ರಿಡ್ ವ್ಯವಸ್ಥೆಯು ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಎಂಜಿನ್ ಡ್ರೈವ್ ಮೋಡ್ ಗಳ ನಡುವೆ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಬದಲಾಗುತ್ತದೆ. ಇದು ನಗರದ ರಸ್ತೆಗಳು, ಹೆದ್ದಾರಿಗಳು ಮತ್ತು ವೈವಿಧ್ಯಮಯ ಚಾಲನಾ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಇಂಧನ ಕ್ಷಮತೆಯನ್ನು ಖಚಿತಪಡಿಸುತ್ತದೆ.
ಅತ್ಯಾಧುನಿಕ ವಿನ್ಯಾಸ ಮತ್ತು ಪ್ರೀಮಿಯಂ ಸೌಖ್ಯ
ಝಡ್.ಆರ್.ವಿ.ಯ ಸುಂದರ ಹೊರಾಂಗಣ ವಿನ್ಯಾಸವು ಸ್ಪೋರ್ಟಿ ವಿನ್ಯಾಸದೊಂದಿಗೆ ಪ್ರೀಮಿಯಂ ಎಸ್.ಯು.ವಿ.ಯ ಗಂಭೀರ ನೋಟವನ್ನು ಸಂಯೋಜಿಸುತ್ತದೆ. ಪೂರ್ಣ-ಎಲ್.ಇ.ಡಿ ದೀಪಗಳು, 18-ಇಂಚಿನ ಅಲಾಯ್ ವೀಲ್ ಗಳು ಹಾಗೂ ಆಕರ್ಷಕ ಮುಂಭಾಗ ಮತ್ತು ಹಿಂಭಾಗದ ಶೈಲಿಯು ಇದರ ಅಂದವನ್ನು ಹೆಚ್ಚಿಸಿವೆ.
ಅಂತೆಯೇ, ಕಾರಿನ ಒಳಾಂಗಣವು ಉತ್ತಮ ಗುಣಮಟ್ಟದ ಸಾಮಗ್ರಿಗಳು, ಲೆದರ್ ಸೀಟುಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಚಾಲಕನಿಗೆ ಗರಿಷ್ಠ ಆರಾಮ ಹಾಗೂ ಸೌಕರ್ಯ ನೀಡುವಂತೆ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಕಾಕ್‌ಪಿಟ್ ನೊಂದಿಗೆ ಅತ್ಯುತ್ತಮವಾದ ಆಲ್-ಬ್ಲಾಕ್ ಪ್ರೀಮಿಯಂ ಲುಕ್ ನೀಡುತ್ತದೆ.
ಸುಧಾರಿತ ಕನೆಕ್ಟಿವಿಟಿ ಮತ್ತು ಪ್ರಾಯೋಗಿಕತೆ
ಈ ಎಸ್.ಯು.ವಿ.ಯು 22.8 ಸೆಂ.ಮೀ. (9-ಇಂಚು) ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ ಹೊಂದಿದ್ದು ವೈರ್ಲೆಟ್- ಆಪಲ್ ಕಾರ್ ಪ್ಲೇ®️ ಮತ್ತು ಆಂಡ್ರಾಯಿಡ್ ಆಟೊ™️, 25.9 ಸೆಂ.ಮೀ.(10.2 ಇಂಚು) ಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12 ಸ್ಪೀಕರ್ ಬಾಸ್ ಪ್ರೀಮಿಯಂ ಆಡಿಯೊ ಸಿಸ್ಟಂ ಮತ್ತು ವೈರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜಿಂಗ್ ಹೊಂದಿದೆ.
ಆಲ್-ನ್ಯೂ ಹೋಂಡಾ ಝಡ್.ಆರ್-ವಿ ದೈನಂದಿನ ಜೀವನಶೈಲಿಗೆ ಪೂರಕವಾಗುವಂತೆ ವಿನ್ಯಾಸಗೊಳಿಸಲಾದ ಜಾಣ್ಮೆಯ ಸಂಗ್ರಹ ಪರಿಹಾರಗಳೊಂದಿಗೆ ಪ್ರಾಯೋಗಿಕತೆಯನ್ನು ಸಂಯೋಜಿಸುತ್ತದೆ. ಈ ಕಾರಿನ ಕ್ಯಾಬಿನ್‌ನಲ್ಲಿ ಹಲವು ಸ್ಟೋರೇಜ್ ಟ್ರೇಗಳು ಮತ್ತು ಪಾಕೆಟ್‌ಗಳಿವೆ. ಅವುಗಳಲ್ಲಿ ದೊಡ್ಡ ಕಪ್ ಹೋಲ್ಡರ್‌ಗಳು, ವಿಶಾಲವಾದ ಡೋರ್ ಪಾಕೆಟ್‌ಗಳು ಸ್ಮಾರ್ಟ್ ಫೋನ್ ಗಳಿಗಾಗಿ ಸೆಂಟರ್ ಕನ್ಸೋಲ್ ಕೆಳಗೆ ಅನುಕೂಲಕರವಾದ ಟ್ರೇ, ಟ್ಯಾಬ್ಲೆಟ್ ಇಡಲು ಜಾಗವಿರುವ ಸೆಂಟರ್ ಕನ್ಸೋಲ್ ಬಾಕ್ಸ್, ಹಿಂಭಾಗದ ಪ್ರಯಾಣಿಕರ ಹೆಚ್ಚಿನ ಆರಾಮಕ್ಕಾಗಿ ಮಡಚಬಹುದಾದ ಆರ್ಮ್ ರೆಸ್ಟ್ ಕೂಡ ನೀಡಲಾಗಿದೆ.
ಹೆಚ್ಚಿನ ಬಳಕೆಯ ಅನುಕೂಲಕ್ಕಾಗಿ, ಝಡ್.ಆರ್.-ವಿ ಕಾರು 60:40 ಸ್ಪ್ಲಿಟ್-ಫೋಲ್ಡ್ ಹಿಂಭಾಗದ ಸೀಟುಗಳನ್ನು ಹೊಂದಿದ್ದು, ಎರಡನೇ ಸಾಲಿನ ಸೀಟುಗಳನ್ನು ಪೂರ್ತಿಯಾಗಿ ಫ್ಲ್ಯಾಟ್ ಮಾಡಿದಾಗ 1,313 ಲೀಟರ್‌ಗಳಷ್ಟು ದೊಡ್ಡ ಕಾರ್ಗೋ ಸ್ಥಳ ದೊರೆಯುತ್ತದೆ. ಲಗೇಜ್ ಜಾಗವನ್ನು ಸುಲಭವಾಗಿ ಹೊಂದಿಕೊಳ್ಳುವ ಸಂಗ್ರಹಣಾ ವ್ಯವಸ್ಥೆಗಳೊಂದಿಗೆ ಅತ್ಯಂತ ಯೋಜನಾಬದ್ಧವಾಗಿ ವಿನ್ಯಾಸಗೊಳಿಸಲಾಗಿದೆ.
ಇದರಲ್ಲಿ ಫೋಲ್ಡ್-ಫ್ಲ್ಯಾಟ್ ಸೀಟುಗಳು, ಲೋಡ್ ಪಾರ್ಟಿಶನ್, ವಾಪಸ್ ಎಳೆಯಬಹುದಾದ ಪಾರ್ಸೆಲ್ ಕವರ್ ಮತ್ತು ಅಂಡರ್-ಫ್ಲೋರ್ ಸ್ಟೋರೇಜ್ ಸೇರಿವೆ. ಅಗಲವಾದ ಮತ್ತು ತಳಮಟ್ಟದ ಬೂಟ್ ಓಪನಿಂಗ್, ಸಮತಲವಾದ ಕಾರ್ಗೋ ಫ್ಲೋರ್‌ನೊಂದಿಗೆ ಸೇರಿ ದೊಡ್ಡ ಅಥವಾ ಭಾರವಾದ ವಸ್ತುಗಳನ್ನು ಸುಲಭವಾಗಿ ಲೋಡ್ ಮತ್ತು ಅನ್‌ಲೋಡ್ ಮಾಡಲು ನೆರವಾಗುತ್ತದೆ.
ಸೌಕರ್ಯ ಮತ್ತು ಅನುಕೂಲತೆ
ಝಡ್.ಆರ್-ವಿ.ಯನ್ನು ಪ್ರತಿಯೊಂದು ಪ್ರಯಾಣವನ್ನು ಶ್ರಮವಿಲ್ಲದ, ಆರಾಮದಾಯಕ ಮತ್ತು ಪ್ರೀಮಿಯಂ ಆಗಿಸಲು ಅತ್ಯಂತ ಯೋಜನಾಬದ್ಧವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಎಸ್.ಯು.ವಿ.ಯಲ್ಲಿ ಮುಂಭಾಗದ ಸೀಟುಗಳ ಹೆಚ್ಚಿನ ಆರಾಮಕ್ಕಾಗಿ ಸ್ಮಾರ್ಟ್ ಕೀ ಫೋಬ್ ಗೆ ಲಿಂಕ್ ಆಗಿರುವ ಒನ್-ಟಚ್ ಮೆಮೊರಿ ಫಂಕ್ಷನ್ ಹೊಂದಿರುವ 8-ವೇ ಪವರ್-ಅಡ್ಜಸ್ಟಬಲ್ ಚಾಲಕನ ಸೀಟು ಮತ್ತು 4-ವೇ ಪವರ್-ಅಡ್ಜಸ್ಟಬಲ್ ಮುಂಭಾಗದ ಪ್ರಯಾಣಿಕರ ಸೀಟು ನೀಡಲಾಗಿದೆ.
ಅನುಕೂಲಕರ ವಿಶೇಷತೆಗಳಲ್ಲಿ ಬ್ಯಾಟರಿ ರಿಜನರೇಶನ್‌ಗಾಗಿ ಮೆಟಲ್ ಡಿಸೆಲರೇಶನ್ ಸೆಲೆಕ್ಟರ್ ಪ್ಯಾಡಲ್ ಶಿಫ್ಟರ್‌ಗಳು, ಕಿಕ್ ಗೆಸ್ಚರ್ ಆಪರೇಷನ್ ಮತ್ತು ವಾಕ್-ಅವೇ ಕ್ಲೋಸ್-ಅಂಡ್-ಲಾಕ್ ಫಂಕ್ಷನ್ ಹೊಂದಿರುವ ಹ್ಯಾಂಡ್ಸ್-ಫ್ರೀ ಪವರ್ ಟೇಲ್ ಗೇಟ್, ಆಟೋ ರಿವರ್ಸ್-ಟಿಲ್ಟ್ ಪ್ಯಾಸೆಂಜರ್-ಸೈಡ್ ಮಿರರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಸ್ಟಾರ್ಟ್ ಹೊಂದಿರುವ ಐಡಲ್ ಸ್ಟಾಪ್ ಸಿಸ್ಟಮ್. ಈ ಎಲ್ಲಾ ವಿಶೇಷತೆಗಳು ಒಟ್ಟಾಗಿ ದೈನಂದಿನ ಪ್ರಯಾಣ ಮತ್ತು ದೂರದ ಪ್ರಯಾಣಗಳೆರಡರಲ್ಲೂ ಆರಾಮ, ಅನುಕೂಲತೆ ಮತ್ತು ಸುಲಭ ಬಳಕೆಯನ್ನು ಹೆಚ್ಚಿಸುತ್ತವೆ.
ಹೊಂಡಾ ಸೆನ್ಸಿಂಗ್ ನಿಂದ ಸುಧಾರಿತ ಸುರಕ್ಷತೆ
ಆಲ್ ನ್ಯೂ ಝಡ್.ಆರ್-ವಿ ಕಾರು ಹೋಂಡಾದ ಮುಂದುವರಿದ ಚಾಲಕ ಸಹಾಯ ತಂತ್ರಜ್ಞಾನಗಳ ಪ್ಲಾಟ್ ಫಾರ್ಮ್ ಆದ ಹೋಂಡಾ ಸೆನ್ಸಿಂಗ್ ನಿಂದ ಸುಸಜ್ಜಿತವಾಗಿದೆ. ಇದರಲ್ಲಿ ಕೊಲಿಷನ್ ಮಿಟಿಗೇಶನ್ ಬ್ರೇಕಿಂಗ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್ ಮತ್ತು ರೋಡ್ ಡಿಪಾರ್ಚರ್ ಮಿಟಿಗೇಶನ್ ಸಿಸ್ಟಮ್ ಗಳು ಸೇರಿವೆ.
ಹೆಚ್ಚುವರಿ ಸುರಕ್ಷತಾ ವಿಶೇಷತೆಗಳಲ್ಲಿ 8 ಏರ್‌ಬ್ಯಾಗ್ ಗಳು, 360-ಡಿಗ್ರಿ ಕ್ಯಾಮೆರಾ, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳು ಹಾಗೂ ಹೋಂಡಾದ ಏಸ್™️ ಬಾಡಿ ಸ್ಟ್ರಕ್ಚರ್ ಸೇರಿವೆ; ಇವು ಕಾರಿನಲ್ಲಿರುವ ಪ್ರಯಾಣಿಕರಿಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತವೆ.
ಆಲ್-ನ್ಯೂ ಝಡ್.ಆರ್.-ವಿ ನಾಲ್ಕು ಪ್ರೀಮಿಯಂ ಬಣ್ಣಗಳಲ್ಲಿ ಲಭ್ಯವಿರುತ್ತದೆ – ಟ್ವಿಲೈಟ್ ಮಿಸ್ಟ್ ಬ್ಲಾಕ್ ಪರ್ಲ್, ಮಿಟಿಯೊರಾಯ್ಡ್ ಗ್ರೇ ಮೆಟಾಲಿಕ್, ಪ್ಲಾಟಿನಮ್ ವೈಟ್ ಪರ್ಲ್ ಮತ್ತು ಕ್ರಿಸ್ಟಲ್ ಬ್ಲಾಕ್ ಪರ್ಲ್.
ಸಂಪೂರ್ಣ ಮನಃಶಾಂತಿ
ಆಲ್-ನ್ಯೂ ಝಡ್.ಆರ್-ವಿ 3 ವರ್ಷ ಅನಿಯಮಿತ ಕಿಲೋಮೀಟರ್ ಸ್ಟಾಂಡರ್ಡ್ ವಾರೆಂಟಿ, 3 ವರ್ಷಗಳ ಪೂರಕ ಆರ್.ಎಸ್.ಎ., 7 ವರ್ಷಗಳವರೆಗೆ ವಿಸ್ತರಿಸಿದ ವಾರೆಂಟಿ ಮತ್ತು 10 ವರ್ಷಗಳು/120,000 ಕಿ.ಮೀ.ಗಳವರೆಗೆ ಎನಿಟೈಮ್ ವಾರೆಂಟ ಕವರೇಜ್ ನೀಡುತ್ತದೆ. ಲಿಥಿಯಂ-ಅಯಾನ್ ಬ್ಯಾಟರಿಯು 8 ವರ್ಷ/160,000 ಕಿ.ಮೀ. ವಾರೆಂಟಿ (ಯಾವುದು ಮೊದಲೇ ಅದು) ಮತ್ತು ಹೈಬ್ರಿಡ್ ಸಿಸ್ಟಂ 5 ವರ್ಷಗಳು/100,000 ಕಿ.ಮೀ. (ಯಾವುದು ಮೊದಲೋ ಅದು) ರಕ್ಷಣೆ ನೀಡುತ್ತದೆ.
ಎಲ್ಲ ಬಣ್ಣಗಳಿಗೂ ಬೆಲೆ ಅನ್ವಯಿಸುತ್ತದೆ
** ಸಿ.ಎಂ.ವಿ.ಆರ್.ನ 115ನೇ ನಿಯಮದಲ್ಲಿ ಪ್ರಮಾಣೀಕರಿಸಿದಂತೆ
Ω 10 ವರ್ಷ ಎನಿಟೈಮ್ ವಾರೆಂಟಿಯನ್ನು ಗರಿಷ್ಠ 10 ವರ್ಷಗಳು/1,20,000 ಕಿಲೋಮೀಟರ್ ವರೆಗೆ ಪ್ರತಿ ವರ್ಷ ನವೀಕರಿಸುವುದರೊಂದಿಗೆ ವಿಸ್ತರಿಸಬಹುದು ಕಾರು ಖರೀದಿಸಿದ ದಿನಾಂಕದಿಂದ ಅನ್ವಯಿಸುತ್ತದೆ










