--Ads--

ಎಸ್ಐಆರ್ ಜಾಗೃತಿ ಕಾರ್ಯಕ್ರಮ

On: July 29, 2026 4:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಎಸ್ಐಆರ್ ಜಾಗೃತಿ ಕಾರ್ಯಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜು.29:

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)’ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ ಇಂದು ಜಿಲ್ಲಾ ಪಂಚಾಯತ್ ಸಿಇಒ ಡಾ ವಾಸಂತಿ ಅಮರ್ ಅವರ ನೇತೃತ್ವದಲ್ಲಿ ಫಾಕ್ಸ್ ಕಾನ್ ಕಂಪನಿ ವ್ಯಾಪ್ತಿ ಪ್ರದೇಶದಲ್ಲಿ ಕಾರ್ಮಿಕರ ಜೊತೆ ಸಮಾಲೋಚನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಜಾಗೃತಿ ಜಾಥಾಯಲ್ಲಿ ಕೈಗಾರಿಕಾ ಪ್ರದೇಶದ ಯುವ ಕಾರ್ಮಿಕರಿಗೆ ಎಸ್ಐಆರ್ ಅರ್ಜಿ ತುಂಬುವ ಬಗ್ಗೆ ವಿಡಿಯೋ ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶಕರು ಹಾಗೂ ಟಿಪಿಓ ರಮೇಶ್, ಜಿಲ್ಲಾ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

@@@@@@@@@@@@@@@@@@@@

ನಿಧಾನ ವಾರ್ತೆ

ತಾಂಡವಪುರ ಜುಲೈ 29 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ನಿವಾಸಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದ್ವಿತೀಯ ದರ್ಜೆಯ ಸಹಾಯಕ ಹಾಗೂ ಪರೀಕ್ಷಾಂಗ ವಿಭಾಗದ ನೌಕರ ಆರ್ ಬಸವರಾಜು ವಯಸ್ಸು 53 ನೆನ್ನೆ ರಾತ್ರಿ ಹೃದಯಗತದಿಂದ ತಾಂಡವಪುರ ಗ್ರಾಮದಲ್ಲಿ ನಿಧನ ಹೊಂದಿದರು.

ಇವರು ಮೂಲತಃ ಮೈಸೂರು ತಾಲ್ಲೂಕು ರಾಯನ ಹುಂಡಿ ಗ್ರಾಮದ ನಿವಾಸಿಯಾಗಿದ್ದು ಇವರು ತಾಂಡವಪುರ ಗ್ರಾಮಕ್ಕೆ ಸುಮಾರು 25 ವರ್ಷಗಳ ಹಿಂದೇನೆ ಬಂದು ಗ್ರಾಮದಲ್ಲಿ ಮನೆ ಮಾಡಿ ವಾಸವಾಗಿದ್ದರು ಇವರಿಗೆ ಪತ್ನಿ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದು ಇವರ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರ ಭೂಮಿಯಲ್ಲಿ ಇಂದು ನೆರವೇರಿಸಲಾಯಿತು.

ಇವರ ನಿಧನಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಮ್ಮ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ಬಿಪಿ ಮಹದೇವು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ ಗಿರೀಶ್ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಮೈಸೂರು ಜಿಲ್ಲಾ ಶಿಕ್ಷಕರ ಸಂಘದ ಕೆಂಚೇಗೌಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರೇವಮ್ಮ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕಾರ್ಯದರ್ಶಿ ಕೆಕೆ ಮರಯ್ಯ ಎಸ್ ಪುಟ್ಟರಾಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಿಬ್ಬಂದಿ ವರ್ಗದವರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು

 

 

WhatsApp

Join Now

Telegram

Join Now

Instagram

Join Now