--Ads--

ಕಷ್ಟಪಟ್ಟು ಇಷ್ಟಪಟ್ಟು ವ್ಯಾಸಂಗ ಮಾಡಿ ಮುಂದೆ ಬರಬೇಕು. ಪುನೀತ್ ಶಿವಕುಮಾರ್

On: August 2, 2026 6:10 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕಷ್ಟಪಟ್ಟು ಇಷ್ಟಪಟ್ಟು ವ್ಯಾಸಂಗ ಮಾಡಿ ಮುಂದೆ ಬರಬೇಕು. ಪುನೀತ್ ಶಿವಕುಮಾರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿರುವ ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಅಯೋಧ್ಯ ನಗರ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ಸಹಾಯಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ವಿಶ್ವನಾಥ್ ಅವರು ಮಾತನಾಡುತ್ತಾ ಮಹಂತಿನ ಧರ್ಮ ಸಂಸ್ಥೆ 1934ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು . ಈ ಕಟ್ಟಡವನ್ನು ನಿರ್ಮಿಸಲು ಕೀರ್ತಿಶೇಶ ರುದ್ರಪ್ಪಣ್ಣ ತಾತ ಸಾಹುಕಾರ್ ಚಿಕ್ಕವೀರಣ್ಣನವರು ಅಂಕ ತಟ್ಟಿ ನಂಜುಂಡಪ್ಪನವರು ಚಿಕ್ಕವೀರ ಶೆಟ್ಟಪ್ಪನವರು ಇನ್ನು ಮುಂತಾದ ಮಹಾನ್ ನಾಯಕರು ಚಂದ ಎತ್ತಿ ಕಟ್ಟಡವನ್ನು ನಿರ್ಮಿಸಿದರು.

ಸುಮಾರು 60 ವರ್ಷಗಳಿಂದ ಅಶಕ್ತರಿಗೆ ಸಹಾಯಧನ ನೀಡುತ್ತಾ ಬಂದಿರುತ್ತಾರೆ. ಕೋರಮಂಗಲ ರುದ್ರಪ್ಪನವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಕ್ಕಾಗಿ ತನ್ನ ಸ್ವಂತ ಕಟ್ಟಡಗಳೇ ಬಿಟ್ಟು ಕೊಟ್ಟಿರುತ್ತಾರೆ. ಅದೇ ರೀತಿ ಮೇಲೂರು ಪುಟ್ಟಯ್ಯನವರು ಮೇಲೂರಿನಲ್ಲಿ ಶ್ರೀ ವೀರಭದ್ರ ಸ್ವಾಮಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದರು .ನಾವುಗಳು ಅಧಿಕಾರಕ್ಕೆ ಬಂದಮೇಲೆ ಸಮಾಜಮುಖಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತಿದೆಂದು ಧರ್ಮ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ ವಿಶ್ವನಾಥ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎ.ಎಸ್ ವಿ ಏನ್ ವಿ ಸಂಘದ ರವೀಂದ್ರ ಅವರು ಮಾತನಾಡುತ್ತಾ ನಮ್ಮ ಜನಾಂಗಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ನಮ್ಮ ಜನಾಂಗವು ದಾನ ಧರ್ಮಕ್ಕೆ ಶ್ರೇಷ್ಠವಾಗಿದೆ. ಸಂಸ್ಥೆಯ ನೀಡಿದ ವಿದ್ಯಾರ್ಥಿ ವೇತನವನ್ನು ಒಳ್ಳೆ ರೀತಿಯಲ್ಲಿ ಉಪಯೋಗಿಸಬೇಕು . ನೀವು ಇಷ್ಟಪಟ್ಟು ಕಷ್ಟಪಟ್ಟು ಓದಬೇಕು, ಕಷ್ಟಪಟ್ಟು ಓದಿದರೆ ಎಂದೆಂದಿಗೂ ಫಲ ಸಿಗುತ್ತದೆ ಗ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚಾರ್ಟೆಡ್ ಅಕೌಂಟೆಂಟ್ ಬಿ ಚೇತನ್ ಮತ್ತು ಸಿಇಟಿ ಪ್ರಥಮ ರಾಂಕ್ ಪಡೆದ ಕುಮಾರಿ ಜಾಗೃತಿ ರವರಿಗೆ ಗೌರವ ಸಮರ್ಪಣೆ ನೀಡಿ ಗೌರವಿಸಲಾಯಿತು.

2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 85% ಅಧಿಕವಾಗಿ ಉತ್ತೀರ್ಣರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

2025 26 ನೇ ಸಾಲಿನ 5ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ವಿದ್ಯಾರ್ಥಿಯ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್ ಶಿವಕುಮಾರ್ ಮಾತನಾಡುತ್ತಾ ಮಕ್ಕಳು ವಿದ್ಯೆಯ ಜೊತೆಗೆ ಮಾತನಾಡುವ ವಾಕ್ಚತುರ್ಯ ಬೆಳೆಸಿಕೊಳ್ಳಬೇಕು. ನಾವು ನೀಡುವ ಅಲ್ಪ ಸಹಾಯವಾದರೂ ಅದನ್ನು ಅವಶ್ಯಕತೆವಿದಲ್ಲಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನೀವು ಒಳ್ಳೆಯ ಹುದ್ದೆ ಅಲಂಕರಿಸಿದ್ದಲ್ಲಿ ನೀವು ಸಹ ಮಕ್ಕಳಿಗೆ ಸಹಾಯಧನವನ್ನು ನೀಡಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಹರಿಹರ ದಾಸೋಹ ಸಮಿತಿಯ ಪದಾಧಿಕಾರಿಗಳಾದ ಎನ್ ರುದ್ರಮೂರ್ತಿ ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ. ಬಾಸ್ಕರ್ ಬಸವಣ್ಣ ದೇವಾಲಯ ಅಧ್ಯಕ್ಷ ಪಿ ಬಸವರಾಜು ನಗರ್ತ ಯುವಕ ಸಂಘದ ಮಾಜಿ ಗೌರವಾಧ್ಯಕ್ಷ ಪಿ ಮುರುಳಿಧರ್
ಮಹಂತಿನ ಮಠದ ಧರ್ಮ ಸಂಸ್ಥೆಯ ಖಜಂಚಿಗಳಾದ ಎ ಮಧು ನಿರ್ದೇಶಕರಾದ ವಿಜಯ ರಾಜ್ ಪಿ ಸಿ ಕೆ, ಜೆ ನಂಜಣ್ಣ, ಸಿ. ವಿನಯ್ ಕುಮಾರ್, ಎನ್ ಪ್ರವೀಣ್ ,
ವಿ ಬಸವರಾಜ್ ,ಸುರೇಶ್ ಬಾಬು, ಚಂಪಕವಲಿ ನಾಗರಾಜ್, ನಳಿನ ಮತ್ತು ಜನಾಂಗದ ಮುಖಂಡರು ಪೋಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now