--Ads--

ಭರತನಾಟ್ಯ ರಂಗಪ್ರವೇಶ

On: August 13, 2026 3:33 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಭರತನಾಟ್ಯ ರಂಗಪ್ರವೇಶ

ಬೆಂಗಳೂರು : ವಿದುಷಿ ಶ್ರೀಮತಿ ವೀಣಾ ಗಂಗಾಧರ್ ಅವರ ಶಿಷ್ಯೆ ಕು|| ಸ್ಫೂರ್ತಿ ಆರ್.ಎಸ್. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಆಗಸ್ಟ್ 15, ಶನಿವಾರ ಸಂಜೆ 5-00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಆರ್. ವಿ. ರಾಘವೇಂದ್ರ, ಶ್ರೀ ಎಸ್. ನಂಜುಂಡರಾವ್ ಹಾಗೂ ಗುರು ವಿದುಷಿ ಶ್ರೀಮತಿ ಸೀತಾ ಗುರುಪ್ರಸಾದ್ ಭಾಗವಹಿಸಲಿದ್ದಾರೆ.

ನಟ್ಟುವಾಂಗದಲ್ಲಿ ವಿದುಷಿ ಶ್ರೀಮತಿ ವೀಣಾ ಗಂಗಾಧರ್, ಗಾಯನದಲ್ಲಿ ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ವಿದ್ವಾನ್ ಶ್ರೀ ಜಿ. ಎಸ್. ನಾಗರಾಜ್, ಕೊಳಲಿನಲ್ಲಿ ವಿದ್ವಾನ್ ಶ್ರೀ ಸ್ಕಂದ ಕುಮಾರ್ ಹಾಗೂ ವಯೋಲಿನ್‌ನಲ್ಲಿ ವಿದ್ವಾನ್ ಶ್ರೀ ಅರ್ಜುನ್ ಎಂ. ದಿನ್ ಅವರು ಸಹಕರಿಸಲಿದ್ದಾರೆ.

ಭರತನಾಟ್ಯದ ಸಾಂಪ್ರದಾಯಿಕ ಸೊಬಗನ್ನು ಅನಾವರಣಗೊಳಿಸುವ ಈ ಶುಭ ಸಮಾರಂಭಕ್ಕೆ ಕಲಾಭಿಮಾನಿಗಳು ಆಗಮಿಸಿ ಕು. ಸ್ಪೂರ್ತಿ ಆರ್. ಎಸ್. ಅವರನ್ನು ಆಶೀರ್ವದಿಸುವಂತೆ ನಾಟ್ಯ ತರಂಗ ನೃತ್ಯಾಲಯದ ಸಂಸ್ಥಾಪಕಿ ಹಾಗೂ ನಿರ್ದೇಶಕಿ ವಿದುಷಿ ಶ್ರೀಮತಿ ವೀಣಾ ಗಂಗಾಧರ್ ಅವರು ವಿನಂತಿಸಿದ್ದಾರೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ