ವಿಜಯ ದರ್ಪಣ ನ್ಯೂಸ್……
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಿದ ಆರ್.ಎಸ್.ಎಸ್.ಮತ್ತು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ

ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ದೇಶದಲ್ಲಿ ಆಡಳಿತ ನಡೆಸುತ್ತಿರುವ ದಲಿತ ವಿರೋಧಿ ಬಿಜೆಪಿ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಹಾಗೂ ದಲಿತ ನಾಯಕರನ್ನು ಅಪಮಾನಿಸಿರುವುದು ಅತ್ಯಂತ ಖಂಡನೀಯ ಕೂಡಲೇ ಪ್ರಜಾಪ್ರಭುತ್ವ ವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ
ಉತ್ತರಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿಯ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆರವರ ಭಾಷಣದ ನಂತರ ಶುದ್ದಿಕರಣ ಮಾಡುವುದರ ಮೂಲಕ ದಲಿತ ಸಮುದಾಯಕ್ಕೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ಸ್ಥಾನಕ್ಕೆ ಅಪಮಾನ ಗೊಳಿಸಿರುವ ಬಿಜೆಪಿಯ ಸಂಘಟನೆಯ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಬಿಜೆಪಿಯ ಉತ್ತರಖಂಡ ಸರ್ಕಾರವನ್ನು ವಜಾಗೊಳಿಸಬೇಕು, ದೇಶದ ಗೌರವನ್ವಿತ ರಾಷ್ಟ್ರಪತಿಗಳು ಬುಡಕಟ್ಟು ಜನಾಂಗದವರು ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ತಾವು ಕೂಡಲೇ ಬಿಜೆಪಿ ಸರ್ಕಾರದ ಈ ನೀತಿಗೆಟ್ಟ ಆಡಳಿತದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ದಲಿತರನ್ನು ಅಪಮಾನಿಸುವುದೇ ಬಿಜೆಪಿಯ ಒಂದಂಶದ ಕಾರ್ಯಕ್ರಮ ಹಾಗೂ ಸಂಘ ಪರಿವಾರದವರು ಮೊದಲಿನಿಂದಲೂ ದಲಿತರನ್ನ ಅಪಮಾನಿಸುತ್ತಾ ಬಂದಿದ್ದಾರೆ ಇಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ತಮ್ಮ ಕಣ್ಣಾರೆ ಇಂತಹ ಹೇಯ ಕೃತ್ಯಗಳನ್ನು ಕಂಡರೂ ಸಹ ಕ್ರಮ ಕೈಗೊಳ್ಳದೆ ವರ್ತಿಸಿರುತ್ತಿರುವುದು ಅಂಬೇಡ್ಕರ್ ರವರ ಸಂವಿಧಾನಕ್ಕೆ ಬಗೆದ ದ್ರೋಹವಾಗಿದೆ,
ಈ ಕೂಡಲೇ ದೇಶದ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಷಾ ದೇಶದ ದಲಿತರಲ್ಲಿ ಕ್ಷಮೆ ಕೋರಬೇಕು ಬುದ್ಧ ಬಸವ ಅಂಬೇಡ್ಕರ್ ಹಾಗೂ ಗಾಂಧಿ ಮಾರ್ಗದಲ್ಲಿ ಆರು ದಶಗಳ ಕಾಲ ರಾಷ್ಟ್ರದಲ್ಲಿ ಸೇವೆ ಮಾಡುತ್ತಾ ಬಂದಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆಜಿ ರವರಿಗೆ ಮಾಡಿರುವ ಅಪಮಾನ ಅದು ದೇಶದ ದಲಿತರಿಗೆ ಮಾಡಿದ ಅಪಮಾನ ಎಂದು ಪರಿಗಣಿಸಿ ಕೂಡಲೇ ಗೌರವಾನ್ವಿತ ರಾಷ್ಟ್ರಪತಿಗಳು ಭಾಗಿಯಾದವರನ್ನ ಹಾಗೂ ಸರ್ಕಾರವನ್ನು ವಜಾವಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನಾ ಸಂಧರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಮಲ್ಲೇಶ್, ಜಿ.ಪ್ರಕಾಶ್,ಹೇಮರಾಜ್,ಮುರುಳಿ ಉಮೇಶ್, ಪುಟ್ಟರಾಜು ಕುಶಾಲ್ ಹರುವೇಗೌಡ, ಲಕ್ಷ್ಮೀ ನಾರಾಯಣ, ಮಾಧವಹನೂರು, ನವೀನ್ ಸಾಯಿ, ಕಿಶೋರ್ , ಯದುಕುಮಾರ್, ಮಂಜುನಾಥ್, ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.










