--Ads--

ಕೊಡಗಿನ ಜನರಿಗೆ ಮತ್ತು ಆಡಳಿತ ವ್ಯವಸ್ಥೆಗೆ ಕಠಿಣ ಎಚ್ಚರಿಕೆ

On: August 16, 2026 6:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ಕೊಡಗಿನ ಜನರಿಗೆ ಮತ್ತು ಆಡಳಿತ ವ್ಯವಸ್ಥೆಗೆ ಕಠಿಣ ಎಚ್ಚರಿಕೆ

ಮಡಿಕೇರಿ : ಇನ್ನು ಈ ವಿಚಾರವನ್ನು ಮೃದುವಾಗಿ ಹೇಳುವ ಅಗತ್ಯವಿಲ್ಲ. ವರ್ಷಗಳಿಂದ ಮಡಿಕೇರಿ ನಗರದ ಹಲವು ಪ್ರಮುಖ ರಸ್ತೆಗಳು ಹದಗೆಟ್ಟು ಬಿದ್ದಿವೆ. ಸಂಪಿಗೆ ಕಟ್ಟೆಯಿಂದ ಎ.ವಿ. ಶಾಲೆವರೆಗಿನ ರಸ್ತೆ ರಾಜಾಸೀಟ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ದುಸ್ಥಿತಿ ಎಲ್ಲರ ಕಣ್ಣ ಮುಂದಿದೆ.

ಈ ರಸ್ತೆಗಳ ಗುಂಡಿಗಳ ಬಗ್ಗೆ ಎಷ್ಟೋ ಬಾರಿ ಸುದ್ದಿ ಬಂದಿದೆ ಸಮಾಜ ಸೇವಕರು ಕನ್ನಡಪರ ಸಂಘಟನೆಗಳು ಅಭಿವೃದ್ಧಿ ಸಮಿತಿಗಳು ಹಾಗೂ ಸಾರ್ವಜನಿಕರು ನಿರಂತರವಾಗಿ ಧ್ವನಿ ಎತ್ತಿದ್ದಾರೆ ಮನವಿ ಮಾಡಿದ್ದಾರೆ ಪ್ರಶ್ನಿಸಿದ್ದಾರೆ. ಆದರೂ ವರ್ಷಗಟ್ಟಲೆ ಸಮಸ್ಯೆ ಹಾಗೆಯೇ ಸಮಸ್ಯೆಯಾಗಿ ಉಳಿದಿದೆ

ಆದರೆ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರು ಕೊಡಗಿಗೆ ಬರುತ್ತಾರೆ ಎಂಬ ಸುದ್ದಿ ಬರುತ್ತಿದ್ದಂತೆ ರಾಜಾಸೀಟ್ ರಸ್ತೆಯ ಗುಂಡಿಗಳನ್ನು ದಿಢೀರ್ ಮುಚ್ಚುವ ಕಾರ್ಯ ಆರಂಭವಾಗಿದೆ. ಇದು ಯಾವ ರೀತಿಯ ಆಡಳಿತ? ವರ್ಷಗಟ್ಟಲೆ ಜನರು ಓಡಾಡಿದಾಗ ಕಾಣದ ಗುಂಡಿಗಳು ಮುಖ್ಯಮಂತ್ರಿ ಬರುವ ಸುದ್ದಿ ಬಂದ ತಕ್ಷಣ ಅಧಿಕಾರಿಗಳಿಗೆ ಕಾಣಿಸಿತೇ?

ಭಾಗಮಂಡಲದ ರಸ್ತೆಯೂ ದಿಢೀರ್ ಸಿದ್ಧವಾಗುತ್ತದೆ ಗಣ್ಯರು ಸಂಚರಿಸುವ ಮಾರ್ಗಗಳಿಗೆ ದಿಢೀರ್ ಆದ್ಯತೆ ಸಿಗುತ್ತದೆ. ಹಾಗಾದರೆ ಸಾಮಾನ್ಯ ಜನರು ಪ್ರತಿದಿನ ಓಡಾಡುವ ರಸ್ತೆಗಳು ಯಾರಿಗಾಗಿ ಕಾಯಬೇಕು?
ಮುಖ್ಯಮಂತ್ರಿ ಒಂದು ದಿನ ಬರುತ್ತಾರೆ ಹೋಗುತ್ತಾರೆ. ಆದರೆ ಕೊಡಗಿನ ಜನರು 365 ದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ

ವಿಐಪಿ ಬಂದಾಗ ಮಾತ್ರ ಗುಂಡಿ ಕಾಣುವುದು ಜನರು ವರ್ಷಗಟ್ಟಲೆ ದೂರು ನೀಡಿದರೂ ಕಾಣದಿರುವುದುಇದು ಆಡಳಿತದ ಗಂಭೀರ ವೈಫಲ್ಯವಲ್ಲವೇ?ಜನರ ಕಣ್ಣಿಗೆ ತೇಪೆ ಹಾಕಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಭಾವಿಸಬೇಡಿ

ರಾಜಾಸೀಟ್ ರಸ್ತೆಯ ಗುಂಡಿಗಳನ್ನು ಇಂದು ಮುಚ್ಚಬಹುದು ಆದರೆ ವರ್ಷಗಳಿಂದ ಜನರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗಳಿಗೆ ಯಾರು ಉತ್ತರ ಕೊಡುತ್ತಾರೆ?

*ಯಕೇವಲ ಮುಖ್ಯಮಂತ್ರಿ ಬರುತ್ತಾರೆ ಎಂಬ ಕಾರಣಕ್ಕೆ ದಿಢೀರ್ ಕಾಮಗಾರಿ ನಡೆಸುವುದಾದರೆ ಜನರಿಗಾಗಿ ಶಾಶ್ವತ ಕಾಮಗಾರಿ ಯಾವಾಗ? ಇದು ವೈಯಕ್ತಿಕ ದಾಳಿ ಅಲ್ಲ, ಇದು ಜನರ ಹಕ್ಕಿನ ಪ್ರಶ್ನೆ , ತೇಪೆ ರಾಜಕಾರಣ ನಿಲ್ಲಬೇಕು, ಕಾಟಾಚಾರದ ಕಾಮಗಾರಿ ನಿಲ್ಲಬೇಕು,
ವಿಐಪಿಗಾಗಿ ಮಾತ್ರ ರಸ್ತೆ ಸಿದ್ಧಪಡಿಸುವ ಮನೋಭಾವ ನಿಲ್ಲಬೇಕು. ಜನರಿಗಾಗಿ ಶಾಶ್ವತ ರಸ್ತೆ ನಿರ್ಮಾಣವಾಗಬೇಕು.

ಗುಂಡಿಗಳನ್ನು ಮುಚ್ಚುವುದು ಸಾಕಾಗುವುದಿಲ್ಲ, ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಕೊಡಗಿನ ಜನರು ಇನ್ನು ಮೌನವಾಗಿರುವುದಿಲ್ಲ, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಇಂದು ದಿಢೀರ್ ಗುಂಡಿ ಮುಚ್ಚಬಹುದು, ಆದರೆ ಜನರ ಪ್ರಶ್ನೆಗಳಿಗೆ ದಿಢೀರ್ ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ ಸಮಯ ಬಂದಾಗ ಜನರೇ ಉತ್ತರ ನೀಡುತ್ತಾರೆ
✍️ ಎಂಎಂ ದಾವೂದ್

WhatsApp

Join Now

Telegram

Join Now

Instagram

Join Now