--Ads--

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ನಾಲ್ಕು ಟಿಂಬರ್ ಲಾರಿಗಳ ವಿರುದ್ಧ ಕುಶಾಲನಗರ ಪೊಲೀಸರ ದಿಟ್ಟ ಕಾರ್ಯಾಚರಣೆ

On: September 26, 2026 4:08 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ನಾಲ್ಕು ಟಿಂಬರ್ ಲಾರಿಗಳ ವಿರುದ್ಧ ಕುಶಾಲನಗರ ಪೊಲೀಸರ ದಿಟ್ಟ ಕಾರ್ಯಾಚರಣೆ

ಅಧಿಕಾರಿಗಳೇ ನೀವು ನಿಮ್ಮ ಕೆಲಸ ಮಾಡಿ… ಕೊಡಗಿನ ಜನ ನಿಮ್ಮ ಜೊತೆ ಇದ್ದಾರೆ

ಕುಶಾಲನಗರ : ಕೊಡಗಿನ ರಸ್ತೆಗಳಲ್ಲಿ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಸಂದರ್ಭದಲ್ಲಿ ಕುಶಾಲನಗರ ಸಂಚಾರ ಪೊಲೀಸರು ನಡೆಸಿರುವ ನಾಲ್ಕು ಟಿಂಬರ್ ಲಾರಿಗಳ ವಿರುದ್ಧದ ದಿಟ್ಟ ಕಾರ್ಯಾಚರಣೆ ಸಾರ್ವಜನಿಕರ ಗಮನ ಸೆಳೆದಿದೆ

ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಗುಡ್ಡೆಹೊಸೂರು ಕಡೆಯಿಂದ ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ನಾಲ್ಕು ಟಿಂಬರ್ ಲಾರಿಗಳನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ

ಪೊಲೀಸರ ಪರಿಶೀಲನೆಯಂತೆ, ಅನುಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ತುಂಬಿರುವುದು ಹಾಗೂ ವಾಹನದ ಹಿಂಭಾಗದಲ್ಲಿ ನಿಯಮ ಮೀರಿ ಹೆಚ್ಚುವರಿ ಉದ್ದದ ಬಾಡಿ ಹೊಂದಿರುವುದು ಸೇರಿದಂತೆ ನಿಯಮ ಉಲ್ಲಂಘನೆಯ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ನಾಲ್ಕು ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ

ಇತ್ತೀಚಿನ ದಿನಗಳಲ್ಲಿ ಗುಡ್ಡೆಹೊಸೂರು–ಆನೆಕಾಡು ಭಾಗದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಇಂತಹ ಭಾರೀ ವಾಹನಗಳ ಸಂಚಾರದ ಬಗ್ಗೆ ಅಧಿಕಾರಿಗಳು ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ಇಲ್ಲಿ ಒಂದು ಅತ್ಯಂತ ಗಂಭೀರ ಪ್ರಶ್ನೆ ಇದೆ ಸಾಮಾನ್ಯ ನಾಗರಿಕನ ಬೈಕ್‌ಗೆ ಹೆಲ್ಮೆಟ್ ಇಲ್ಲದಿದ್ದರೆ ಕಾನೂನು ತಕ್ಷಣ ನೆನಪಾಗುತ್ತದೆ

ಆಟೋ ಚಾಲಕ ನಿಯಮ ಉಲ್ಲಂಘಿಸಿದರೆ ಕ್ರಮವಾಗುತ್ತದೆ

ಹಾಗಾದರೆ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡಬಹುದಾದ ರೀತಿಯಲ್ಲಿ ನಿಯಮ ಮೀರಿ ಸಾಗುವ ಭಾರೀ ಟಿಂಬರ್ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ಮಾತ್ರ ರಾಜಕೀಯ ಪ್ರಭಾವ ಏಕೆ?

ಕಾನೂನು ಸಾಮಾನ್ಯನಿಗೆ ಒಂದು ಪ್ರಭಾವಿಗಳಿಗೆ ಮತ್ತೊಂದು ಆಗಬಾರದು, ರಾಜಕೀಯ ಪ್ರಭಾವದ ಬಗ್ಗೆ ಗಂಭೀರ ಪ್ರಶ್ನೆ

ನಾಲ್ಕು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಅವುಗಳನ್ನು ಬಿಡಿಸುವಂತೆ ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾಗಿದೆ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ

ಈ ಸಂಬಂಧ ನಮ್ಮ ಬಳಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ರಾಜಕೀಯವಾಗಿ ಪ್ರಭಾವ ಹೊಂದಿರುವ ವ್ಯಕ್ತಿಗಳಿಂದ ಅಧಿಕಾರಿಗಳನ್ನು ಸಂಪರ್ಕಿಸಿ ವಾಹನಗಳನ್ನು ಬಿಡಿಸುವಂತೆ ಒತ್ತಡ ಹೇರಲಾಗಿದೆ ಎಂಬ ಗಂಭೀರ ಆರೋಪವಿದೆ

ಈ ದಾಖಲೆಗಳು ಮತ್ತು ಸಂಬಂಧಿತ ಮಾಹಿತಿಯನ್ನು ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರುಪಡಿಸಲು ಕೊಡಗು ಜನ ಅಭಿವೃದ್ಧಿ ಸಮಿತಿ ಸಿದ್ಧವಾಗಿದೆ.

ಯಾವುದೇ ಪಕ್ಷವಾಗಲಿ, ಯಾವುದೇ ನಾಯಕನಾಗಲಿ,
ಯಾವುದೇ ಹುದ್ದೆಯಾಗಲಿ, ಯಾವುದೇ ರಾಜಕೀಯ ಪ್ರಭಾವವಾಗಲಿ, ಕಾನೂನು ತನ್ನ ಕೆಲಸ ಮಾಡುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ.ರಾಜಕೀಯಕ್ಕಿಂತ ಜನರ ಜೀವ ಮುಖ್ಯ

ಕೊಡಗಿನ ರಸ್ತೆಯಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಸುರಕ್ಷಿತವಾಗಿ ಮನೆ ತಲುಪಬೇಕು.ಇದು ನಮ್ಮ ಮೊದಲ ಆದ್ಯತೆ,ರಾಜಕೀಯ ಬರುತ್ತದೆ ಹೋಗುತ್ತದೆ,ಪಕ್ಷಗಳು ಬದಲಾಗುತ್ತವೆ, ಹುದ್ದೆಗಳು ಬದಲಾಗುತ್ತವೆ, ಕಳೆದುಕೊಂಡ ಜೀವ ಮರಳಿ ಬರುವುದಿಲ್ಲ.

ರಾಜಕೀಯಕ್ಕಿಂತ ಜನರ ಸುರಕ್ಷತೆ ಮುಖ್ಯ, ಪ್ರಭಾವಕ್ಕಿಂತ ಕಾನೂನು ಮುಖ್ಯ ರಾಜಕೀಯ ಶಕ್ತಿಗಿಂತ ಜನರ ಜೀವ ಮುಖ್ಯ ಹಾಗಾಗಿ ಅಧಿಕಾರಿಗಳು ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ.

ನೀವು ನಿಮ್ಮ ಕೆಲಸ ಮಾಡಿ*ವಾಹನ ಯಾರದ್ದು ಎಂದು ನೋಡಬೇಡಿ ಕಾನೂನು ಪಾಲನೆಯಾಗಿದೆಯೇ ಎಂದು ನೋಡಿ ಸಾಮಾನ್ಯ ವ್ಯಕ್ತಿಯ ವಾಹನವಾಗಲಿ, ವ್ಯಾಪಾರಿಯ ವಾಹನವಾಗಲಿ, ಪ್ರಭಾವಿ ವ್ಯಕ್ತಿಯ ವಾಹನವಾಗಲಿ,ರಾಜಕೀಯ ವ್ಯಕ್ತಿಗೆ ಸಂಬಂಧಿಸಿದ ವಾಹನವಾಗಲಿ ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ

ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬೇಡಿ.
ಯಾವುದೇ ಪ್ರಭಾವಕ್ಕೆ ಹೆದರಬೇಡಿ.ಯಾರ ಮುಖ ನೋಡಿಕೊಂಡು ಕಾನೂನು ಬದಲಿಸಬೇಡಿ ,ನೀವು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಕೊಡಗಿನ ಜನ ನಿಮ್ಮ ಹಿಂದೆ ಇದ್ದಾರೆ

🚔 ಪೊಲೀಸರ ಕೆಲಸ ಹೆಲ್ಮೆಟ್ ತಪಾಸಣೆಗೆ ಮಾತ್ರ ಸೀಮಿತವಲ್ಲ, ಸಣ್ಣ ವಾಹನಗಳನ್ನು ಹಿಡಿದು ದಂಡ ಹಾಕುವುದು ಮಾತ್ರ ಸಂಚಾರ ಪೊಲೀಸರ ಕೆಲಸವಲ್ಲ.

ಓವರ್‌ಲೋಡ್ ಟಿಂಬರ್ ಲಾರಿಗಳು ನಿಯಮ ಮೀರಿ ಹೆಚ್ಚುವರಿ ಬಾಡಿ ಹೊಂದಿರುವ ವಾಹನಗಳು ಅಪಾಯಕಾರಿ ರೀತಿಯಲ್ಲಿ ಭಾರ ಸಾಗಿಸುವ ವಾಹನಗಳು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಯಾವುದೇ ವಾಹನಗಳ ವಿರುದ್ಧವೂ ಕಾನೂನು ಕ್ರಮ ನಡೆಯಬೇಕು

ಇಂತಹ ಕಾರ್ಯಾಚರಣೆಗಳು ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಅಪಘಾತವಾದ ನಂತರ ಕಣ್ಣೀರು ಹಾಕುವುದಕ್ಕಿಂತ ಅಪಘಾತವಾಗುವ ಮುನ್ನ ಅಪಾಯವನ್ನು ತಡೆಯುವುದು ಉತ್ತಮ ಪೊಲೀಸ್ ಕಾರ್ಯ

ಕುಶಾಲನಗರ ಪೊಲೀಸ್ ತಂಡಕ್ಕೆ ಅಭಿನಂದನೆ

ಈ ಕಾರ್ಯಾಚರಣೆ ಕುಶಾಲನಗರ ಸರ್ಕಲ್ ಇನ್ಸ್‌ಪೆಕ್ಟರ್ ಪ್ರದೀಪ್ ಸರ್ ಅವರ ಮಾರ್ಗದರ್ಶನದಲ್ಲಿ ಟ್ರಾಫಿಕ್ ಪಿಎಸ್ಐ ಗೀತಾ ಮೇಡಂ ಹಾಗೂ ಪಿಎಸ್ಐ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದಿದ್ದು ಸಿಬ್ಬಂದಿಗಳಾದ ಮೋಹನ್ ಸತೀಶ್ ಚಾಲಕರಾದ ರವಿ. ಬಸವರಾಜ್. ಸೇರಿದಂತೆ ಪೊಲೀಸ್ ತಂಡ ಕಾರ್ಯಾಚರಣೆಯಲ್ಲಿ ಇದ್ದರು.

ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿರುವ ಗೀತಾ ಮೇಡಂ ಹಾಗೂ ಸಂಪೂರ್ಣ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅಧಿಕಾರಿಗಳೇ ನೀವು ಯಾರ ಹಿಂದೆ ನಿಲ್ಲಬೇಕು ಎಂಬುದನ್ನು ಯೋಚಿಸಬೇಡಿ ಕಾನೂನಿನ ಹಿಂದೆ ನಿಲ್ಲಿ, ಕಾನೂನಿನ ಪರವಾಗಿ ನಿಂತ ಅಧಿಕಾರಿಗಳ ಹಿಂದೆ ಕೊಡಗಿನ ಜನ ನಿಲ್ಲುತ್ತಾರೆ

ಆನೆಕಾಡು ಅಪಘಾತ ನಮಗೆ ಎಚ್ಚರಿಕೆಯ ಗಂಟೆ

ಇತ್ತೀಚಿನ ದಿನಗಳಲ್ಲಿ ಭೀಕರ ಅಪಘಾತಗಳು ನಮಗೆ ಒಂದು ಪಾಠ ಕಲಿಸಿವೆ. ಅಪಘಾತ ಸಂಭವಿಸಿದ ನಂತರ ಕಾರಣ ಹುಡುಕುವುದಕ್ಕಿಂತ ಅಪಘಾತ ಸಂಭವಿಸುವ ಮುನ್ನ ಅಪಾಯಕಾರಿ ವಾಹನಗಳನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯ.

ಇಂದು ಒಂದು ಅಪಾಯಕಾರಿ ವಾಹನವನ್ನು ತಡೆಯುವುದು ಎಂದರೆ ನಾಳೆ ಒಂದು ಕುಟುಂಬದ ಕಣ್ಣೀರನ್ನು ತಡೆಯುವುದಾಗಬಹುದು.

ಅಧಿಕಾರಿಗಳು ನೀವು ಯಾರಿಗೂ ಹೆದರಬೇಕಾಗಿಲ್ಲ
ನೀವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬೇಕಾಗಿಲ್ಲ.ನೀವು ನಿಮ್ಮ ಕರ್ತವ್ಯವನ್ನು ಕಾನೂನು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ವಹಿಸಿ.ನಿಮ್ಮ ಹಿಂದೆ ಕೊಡಗಿನ ಜನರಿದ್ದಾರೆ
ನಿಮ್ಮ ಹಿಂದೆ ಸಾರ್ವಜನಿಕರ ಬೆಂಬಲವಿದೆ
ನಿಮ್ಮ ಹಿಂದೆ ಕೊಡಗು ಜನಅಭಿವೃದ್ಧಿ ಸಮಿತಿ ಇದೆ

ಯಾರು ಕಾನೂನು ಉಲ್ಲಂಘಿಸಿದರೂ ಕ್ರಮವಾಗಲಿ
ಯಾರು ಕಾನೂನು ಪಾಲಿಸಿದರೂ ಗೌರವ ಸಿಗಲಿ ರಾಜಕೀಯಕ್ಕಿಂತ ಜನರ ಜೀವ ದೊಡ್ಡದು
ಪ್ರಭಾವಕ್ಕಿಂತ ಕಾನೂನು ದೊಡ್ಡದು ಯಾವುದೇ ವ್ಯಕ್ತಿಗಿಂತ ಕೊಡಗಿನ ಜನರ ಸುರಕ್ಷತೆ ದೊಡ್ಡದು

ಅಧಿಕಾರಿಗಳೇ ನೀವು ನಿಮ್ಮ ಕೆಲಸ ಮಾಡಿ,ಇದು
ಕೊಡಗಿನ ಜನರ ನಿಮ್ಮ ಅಶಯ.
✍🏽 ಎಂ ಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ
9945375180

WhatsApp

Join Now

Telegram

Join Now

Instagram

Join Now