--Ads--

ಅಪಘಾತಗಳು ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆಯೇ ಜೀವ ರಕ್ಷಣೆ

On: September 17, 2026 11:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಅಪಘಾತಗಳು ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆಯೇ ಜೀವ ರಕ್ಷಣೆ

ದ್ವಿಚಕ್ರ ವಾಹನ ಸವಾರರಿಗೆ ಕೊಡಗು ಜನ ಅಭಿವೃದ್ಧಿ ಸಮಿತಿಯ ಮನವಿ

ಕುಶಾಲನಗರ, ಸೆ.17:
ಕುಶಾಲನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದ ಸುದ್ದಿ ಅತ್ಯಂತ ದುಃಖ ತಂದಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕಡೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ಮೃತರಾದ ಸುಬ್ರಮಣಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೊಡಗು ಜನ ಅಭಿವೃದ್ಧಿ ಸಮಿತಿ ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತದೆ

ಇಂತಹ ಘಟನೆಗಳು ನಡೆದಾಗ ಕೇವಲ ಟ್ರಾಫಿಕ್ ಪೊಲೀಸರು ಅಧಿಕಾರಿಗಳು ಅಥವಾ ರಸ್ತೆಯ ಸ್ಥಿತಿಯನ್ನು ಮಾತ್ರ ದೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ರಸ್ತೆ ಸುರಕ್ಷತೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಇದೆ .ನಮ್ಮ ಜೀವವನ್ನು ನಾವು ಕೂಡ ಕಾಪಾಡಿಕೊಳ್ಳಬೇಕು* .

ದ್ವಿಚಕ್ರ ವಾಹನ ಸವಾರರು ದಯವಿಟ್ಟು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ., ವೇಗವಾಗಿ ವಾಹನ ಚಲಾಯಿಸಬೇಡಿ.
* ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
* ತ್ರಿಬಲ್ ರೈಡಿಂಗ್ ಮಾಡಬೇಡಿ.
* ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ.      * ಅಪ್ರಾಪ್ತರು ಹಾಗೂ ಅನುಭವವಿಲ್ಲದವರು ವಾಹನ ಚಲಾಯಿಸುವುದನ್ನು ತಪ್ಪಿಸಿ.                               *ನಿಮ್ಮ ಹಿಂದೆ ಕುಳಿತಿರುವವರ ಸುರಕ್ಷತೆಯನ್ನ ನಿಮ್ಮ ಜವಾಬ್ದಾರಿಯೆಂದು ಭಾವಿಸಿ

ವಿಶೇಷವಾಗಿ ಕುಶಾಲನಗರದ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೆಲವರು ಹೆಲ್ಮೆಟ್ ಇಲ್ಲದೆ, ತ್ರಿಬಲ್ ರೈಡಿಂಗ್ ಮಾಡುತ್ತಿರುವ ಕುರಿತು ನಿನ್ನೆ ಕುಶಾಲನಗರದ ಟ್ರಾಫಿಕ್ ಅಧಿಕಾರಿ ಗೀತಾ ಮೇಡಂ ಅವರೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಧ್ಯಾಹ್ನದ ಸಮಯದಲ್ಲಿ ಸುಮಾರು ಒಂದು ಗಂಟೆ ಅವಧಿಯಲ್ಲಿ ಗಮನಕ್ಕೆ ಬಂದ ಕೆಲವು ದೃಶ್ಯಗಳನ್ನು ವಿಡಿಯೋ ಮೂಲಕ ದಾಖಲಿಸಿ, ಸಂಬಂಧಪಟ್ಟವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಾಹಿತಿ ನೀಡಲಾಗಿದೆ

ಇದು ಯಾರನ್ನೂ ದೂಷಿಸುವ ಉದ್ದೇಶವಲ್ಲ
ಒಬ್ಬ ವಿದ್ಯಾರ್ಥಿಯ ಜೀವ ಉಳಿಯಬೇಕು ಒಬ್ಬ ತಾಯಿಯ ಕಣ್ಣೀರು ನಿಲ್ಲಬೇಕು, ಒಬ್ಬ ತಂದೆ ತನ್ನ ಮಗನಿಗಾಗಿ ಆಸ್ಪತ್ರೆಯ ಬಾಗಿಲಲ್ಲಿ ಕಣ್ಣೀರಿಡುವ ಪರಿಸ್ಥಿತಿ ಬರಬಾರದು ಎಂಬ ಮಾನವೀಯ ಕಾಳಜಿಯಿಂದ ಈ ಮನವಿ

ರಸ್ತೆಯಲ್ಲಿ ಒಂದು ಕ್ಷಣದ ಅಜಾಗರೂಕತೆ ಒಂದು ಕುಟುಂಬದ ಇಡೀ ಜೀವನವನ್ನೇ ಬದಲಾಯಿಸಬಹುದು.
ಆದ್ದರಿಂದ ಯುವಕರು ವಿಶೇಷವಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು

ಹೆಲ್ಮೆಟ್ ನಿಮ್ಮ ತಲೆಯನ್ನು ಮಾತ್ರವಲ್ಲ ನಿಮ್ಮ ಮನೆಯವರ ಭವಿಷ್ಯವನ್ನೂ ಕಾಪಾಡುತ್ತದೆ..ಅಪಘಾತ ಸಂಭವಿಸಿದ ನಂತರ ಪರಿಹಾರ ಹುಡುಕುವುದಕ್ಕಿಂತ ಅಪಘಾತವೇ ಸಂಭವಿಸದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ

ಕೊಡಗು ಜನ ಅಭಿವೃದ್ಧಿ ಸಮಿತಿಯ ಮನವಿ:
🙏 *ದಯವಿಟ್ಟು ನಿಮ್ಮ ಜೀವವನ್ನು ನೀವೇ ಕಾಪಾಡಿಕೊಳ್ಳಿ*
🙏 *ನಿಮ್ಮ ಮನೆಯವರ ಕಣ್ಣೀರನ್ನು ನೆನಪಿಸಿಕೊಳ್ಳಿ*
🙏 *ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಮನೆ ಸೇರಿ.*

ಎಂ.ಎಂ. ದಾವುದ್
ಸಂಸ್ಥಾಪಕರು
ಕೊಡಗು ಜನ ಅಭಿವೃದ್ಧಿ ಸಮಿತಿ
9945375180

WhatsApp

Join Now

Telegram

Join Now

Instagram

Join Now