--Ads--

ಅಕ್ಷರ ಕಲಿಸಿದ ಆ ಕೈಗಳ ನೆನಪಿನಲ್ಲಿ

On: September 7, 2026 3:24 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಅಕ್ಷರ ಕಲಿಸಿದ ಆ ಕೈಗಳ ನೆನಪಿನಲ್ಲಿ

ಎಂ ಎಂ ದಾವೂದ್ 

ಶಿಕ್ಷಕರ ದಿನಾಚರಣೆಯಂದು ನನ್ನ ಬಾಲ್ಯದ ಮಡಿಕೇರಿಗೆ ಒಂದು ಭಾವುಕ ನಮನ

ಕೆಲವು ನೆನಪುಗಳಿಗೆ ವಯಸ್ಸಾಗುವುದಿಲ್ಲ
ಕಾಲ ಎಷ್ಟೇ ದೂರ ಸಾಗಿದರೂ ಅವು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ನಿನ್ನೆ ನಡೆದಂತೆ ಜೀವಂತವಾಗಿರುತ್ತವೆ

ನನಗೆ ಹಾಗೆ ನೆನಪಾಗುವುದು ಹಳೆಯ ಮಡಿಕೇರಿ ಹಿಂದೂಸ್ತಾನಿ ಶಾಲೆ

ನನ್ನ ಬಾಲ್ಯದ ವಿದ್ಯಾಭ್ಯಾಸದ ಮೊದಲ ಹೆಜ್ಜೆಗಳು ಮೂಡಿದ್ದು ಇದೇ ಶಾಲೆಯ ಅಂಗಳದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಆ ಶಾಲೆಯ ಗೋಡೆಗಳ ನಡುವೆ ಕಳೆದ ದಿನಗಳು ಇಂದು ನೆನಪಿನ ಪುಟಗಳನ್ನು ತಿರುವಿದಾಗ ಕಣ್ಣ ಮುಂದೆ ಒಂದೊಂದಾಗಿ ಮೂಡುತ್ತವೆ

ಅಂದು ನಮ್ಮ ಜಗತ್ತು ಬಹಳ ಚಿಕ್ಕದಾಗಿತ್ತು
ಶಾಲೆ ಶಿಕ್ಷಕರು ಗೆಳೆಯರು ಆಟದ ಮೈದಾನ ಇಷ್ಟೇ ನಮ್ಮ ಪ್ರಪಂಚ

*ಕಾಕಿ ಚಡ್ಡಿ ಕಾಕಿ ಶರ್ಟು
*ಅದೇ ನಮ್ಮ ಅಚ್ಚುಮೆಚ್ಚಿನ ಸಮವಸ್ತ್ರ
*ಕೈಯಲ್ಲಿ ಸ್ಲೇಟ್ ಕಡ್ಡಿ ಪೆನ್ಸಿಲ್
*ಅವೇ ನಮ್ಮ ಅಂದಿನ ಜ್ಞಾನದ ಆಯುಧಗಳು

ಇಂದು ಕೈಯಲ್ಲಿ ದುಬಾರಿ ಮೊಬೈಲ್‌ಗಳು ಕಂಪ್ಯೂಟರ್‌ಗಳು ಆಧುನಿಕ ಶಿಕ್ಷಣದ ಸಾಧನಗಳಿವೆ ಆದರೆ ಅಂದು ಒಂದು ಸ್ಲೇಟಿನ ಮೇಲೆ ಬರೆದ ಅಕ್ಷರದಲ್ಲಿದ್ದ ಸಂತೋಷವನ್ನು ಇಂದಿನ ಸಾವಿರ ಸಾಧನಗಳಲ್ಲೂ ಹುಡುಕಲು ಸಾಧ್ಯವಿಲ್ಲ

ನಮ್ಮನ್ನು ಅಕ್ಷರ ಲೋಕಕ್ಕೆ ಕರೆದೊಯ್ದ ಆ ಶಿಕ್ಷಕರಲ್ಲಿ ಹಲವರ ಹೆಸರುಗಳು ಇಂದು ನೆನಪಿನ ಅಂಗಳದಲ್ಲಿ ಮಸುಕಾಗಿವೆ. ಆದರೆ ಅವರ ಮುಖದ ಮಮತೆ ಮಾತ್ರ ಇನ್ನೂ ಸ್ಪಷ್ಟವಾಗಿದೆ

ನಮ್ಮ ಪ್ರೀತಿಯ ಇಂದಿರಾ ಟೀಚರ್ ಶೇಷಮ್ಮ ಟೀಚರ್ (ಕಾಲೇಘಾಟ್ ಚರಣ್ ಸರ್ ಅವರ ತಾಯಿ) ಮಾದಮ್ಮ ಟೀಚರ್  ಸರಸ್ವತಿ ಟೀಚರ್ ಮುಖ್ಯೋಪಾಧ್ಯಾಯರಾದ ಮೆಹರುನ್ನಿಸಾ ಟೀಚರ್

ಹಾಗೆಯೇ ನಮ್ಮನ್ನು ಪಾಠದ ಜೊತೆಗೆ ಆಟದಲ್ಲೂ ಬೆಳೆಸಿದ ಸೋಮಯ್ಯ ಸರ್ ಹರೀಶ್ ಸರ್

ಸೋಮಯ್ಯ ಸರ್ ನಮ್ಮನ್ನು ಕಬಡ್ಡಿ ಶಾಟ್‌ಪುಟ್ ಖೋ ಖೋ ಮುಂತಾದ ಕ್ರೀಡೆಗಳಲ್ಲಿ ಪ್ರೋತ್ಸಾಹಿಸುತ್ತಿದ್ದರು
ನಾವು ಮೈದಾನದಲ್ಲಿ ಗೆದ್ದಾಗ ಅವರ ಮುಖದಲ್ಲಿ ಕಾಣುತ್ತಿದ್ದ ಆ ಹೆಮ್ಮೆಯ ನಗು ಅದು ಬಹುಶಃ ನಮಗೆ ಸಿಕ್ಕ ಮೊದಲ ಪದಕಕ್ಕಿಂತಲೂ ದೊಡ್ಡ ಬಹುಮಾನ

ಅವರು ನಮಗೆ ಕೇವಲ ಪಾಠ ಕಲಿಸಲಿಲ್ಲ

ಬೀಳಬಾರದು ಎಂದು ಕಲಿಸಿದರು
ಬಿದ್ದರೆ ಮತ್ತೆ ಎದ್ದು ನಿಲ್ಲಬೇಕು ಎಂದು ಕಲಿಸಿದರು
ಸೋಲನ್ನು ಹೆದರಬಾರದು ಎಂದು ಕಲಿಸಿದರು
ಬದುಕಿನಲ್ಲಿ ಮುಂದೆ ಸಾಗಬೇಕು ಎಂದು ಕಲಿಸಿದರು

ಅದಕ್ಕಾಗಿಯೇ ಅಂದಿನ ಶಿಕ್ಷಕರು ನಮ್ಮ ನೆನಪಿನಲ್ಲಿ ಕೇವಲ ಟೀಚರ್ ಗಳಾಗಿ ಉಳಿದಿಲ್ಲ ನಮ್ಮ ಬಾಲ್ಯದ ತಾಯಂದಿರಾಗಿ ಉಳಿದಿದ್ದಾರೆ

ಶಾಲೆಯಲ್ಲಿ ಸಿಗುತ್ತಿದ್ದ ಆ ದಿನಗಳ ಗೋಧಿ ಉಪ್ಪಿಟ್

ಇಂದು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಎಷ್ಟೇ ರುಚಿಯಾದ ಊಟ ಮಾಡಿದರೂ ಅಂದಿನ ಶಾಲೆಯ ಆ ಉಪ್ಪಿಟ್ಟಿನ ರುಚಿ ಮತ್ತೆ ಸಿಗುವುದಿಲ್ಲ

ಅದು ಕೇವಲ ಉಪ್ಪಿಟ್ಟಾಗಿರಲಿಲ್ಲ

ಅದರೊಳಗೆ ಬಾಲ್ಯದ ಹಸಿವಿತ್ತು
ಶಾಲೆಯ ಸಂಭ್ರಮವಿತ್ತು
ಗೆಳೆಯರ ಜೊತೆ ಹಂಚಿಕೊಂಡ ಸಂತೋಷವಿತ್ತು
ಮತ್ತು ನಮ್ಮನ್ನು ಮಕ್ಕಳಂತೆ ನೋಡಿಕೊಂಡವರ ಪ್ರೀತಿಯಿತ್ತು

ಶಾರದಾ ಪೂಜೆ ಬಂದರೆ ನಮಗದು ಒಂದು ದೊಡ್ಡ ಹಬ್ಬವೇ ಸರಿ

ಶಾಲೆಯ ವಾತಾವರಣವೇ ಬದಲಾಗುತ್ತಿತ್ತು ಅಕ್ಷರದ ದೇವತೆಯ ಪೂಜೆ ಹಬ್ಬದ ಸಂಭ್ರಮ ಮಧ್ಯಾಹ್ನದ ನಂತರದ ರಜೆ ಆ ದಿನಕ್ಕಾಗಿ ನಾವು ಕಾಯುತ್ತಿದ್ದ ರೀತಿ ಇಂದಿಗೂ ನೆನಪಿದೆ

ಅಂದು ರಜೆ ಎಂದರೆ ಇಂದಿನಂತೆ ಪ್ರವಾಸವಲ್ಲ ಮೊಬೈಲ್ ಅಲ್ಲ ಮನರಂಜನೆಯ ಸಾಧನಗಳಲ್ಲ

*ಗೆಳೆಯರ ಜೊತೆ ಓಡಾಟ
*ಆಟ
*ನಗು
*ಪಿಕ್ ನಿಕ್
*ಮಣ್ಣಿನಲ್ಲಿ ಬಿದ್ದು ಎದ್ದು ಮತ್ತೆ ಓಡುವುದು

ಅದೇ ನಮ್ಮ ಬಾಲ್ಯದ ಐಶ್ವರ್ಯ

ಹಳೆಯ ಮಡಿಕೇರಿಯ ಆ ದಾರಿಗಳಲ್ಲಿ ನಡೆದ ನಮ್ಮ ಪುಟ್ಟ ಹೆಜ್ಜೆಗಳು ಇಂದು ದೊಡ್ಡವರಾಗಿವೆ ಮನಸ್ಸು ಮಾತ್ರ ಕೆಲವೊಮ್ಮೆ ಮತ್ತೆ ಆ ಶಾಲೆಯ ಅಂಗಳಕ್ಕೆ ಹೋಗಿಬಿಡುತ್ತದೆ

ಒಂದು ಕ್ಷಣ ಕಣ್ಣು ಮುಚ್ಚಿದರೆ

ಶಾಲೆಯ ಗಂಟೆ ಕೇಳಿಸುತ್ತದೆ
ಗೆಳೆಯರ ಕೂಗು ಕೇಳಿಸುತ್ತದೆ
ಶಿಕ್ಷಕರ ಧ್ವನಿ ಕೇಳಿಸುತ್ತದೆ
ಕೈಯಲ್ಲಿ ಸ್ಲೇಟ್ ಹಿಡಿದ ಪುಟ್ಟ , ಹುಡುಗನೊಬ್ಬ ಕಣ್ಣ ಮುಂದೆ ನಿಂತಂತೆ ಭಾಸವಾಗುತ್ತದೆ

ಅವನು ನಾನೇ

ಕಾಲ ಮಾತ್ರ ಬದಲಾಗಿದೆ.

ಆ ಪುಟ್ಟ ಹುಡುಗನಿಗೆ ಅಕ್ಷರ ಕಲಿಸಿದವರು ಇಂದು ಕೆಲವರು ನಮ್ಮ ನಡುವೆ ಇಲ್ಲ ಅವರನ್ನು ನೆನಪಿಸಿಕೊಂಡಾಗ ಮನಸ್ಸು ಭಾರವಾಗುತ್ತದೆ

ಹೇ ಭಗವಂತ
ನಮಗೆ ಅಕ್ಷರದ ಬೆಳಕು ನೀಡಿದ
ನಮ್ಮ ಬದುಕಿಗೆ ದಾರಿ ತೋರಿಸಿದ
ಇಂದು ನಮ್ಮ ನಡುವೆ ಇಲ್ಲದ ಆ ಎಲ್ಲ ದಿವಂಗತ ಗುರುಗಳ ಆತ್ಮಕ್ಕೆ ಚಿರಶಾಂತಿ ನೀಡು
ಅವರಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನ ನೀಡು

ಇಂದಿಗೂ ನಮ್ಮ ನಡುವೆ ಇರುವ ನನ್ನ ಪ್ರೀತಿಯ ಶಿಕ್ಷಕರಿಗೆ ಉತ್ತಮ ಆರೋಗ್ಯ ನೆಮ್ಮದಿ ಸಂತೋಷ ಮತ್ತು ದೀರ್ಘಾಯುಷ್ಯ ನೀಡು

ನನ್ನ ಜೀವನದಲ್ಲಿ ಧಾರ್ಮಿಕ ವಿದ್ಯೆಯ ಬೆಳಕು ಮೂಡಿಸಿದ ಪಂಡಿತರು ಗುರುಗಳು ಹಾಗೂ ಉಸ್ತಾದರುಗಳಿಗೂ ಈ ದಿನ ಹೃದಯಪೂರ್ವಕ ನಮನಗಳು

ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಬದುಕಿನ ಮೊದಲ ಅಕ್ಷರ ಬರೆದದ್ದು ಯಾವ ಕೈ ಎಂಬುದನ್ನು ಮರೆಯಬಾರದು

*ಮನೆಯವರು ನಮಗೆ ಬದುಕು ಕೊಟ್ಟರು
*ಗುರುಗಳು ಆ ಬದುಕಿಗೆ ದಿಕ್ಕು ಕೊಟ್ಟರು

ಆದ್ದರಿಂದಲೇ ಗುರುಗಳ ಸ್ಥಾನ.                    ಜೀವನದಲ್ಲಿ ಎಂದಿಗೂ ವಿಶೇಷ

*ಇಂದು ಶಿಕ್ಷಕರ ದಿನಾಚರಣೆ

*ಈ ದಿನ ಕೇವಲ ಶುಭಾಶಯ ಹೇಳುವ ದಿನವಲ್ಲ
*ನಮ್ಮ ಬಾಲ್ಯವನ್ನು ರೂಪಿಸಿದ ಆ ಮಮತೆಯ ಮುಖಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ದಿನ

*ಹಳೆಯ ಮಡಿಕೇರಿ
*ಹಿಂದೂಸ್ತಾನಿ ಶಾಲೆ
*ಕಾಕಿ ಚಡ್ಡಿ ಕಾಕಿ ಶರ್ಟು
*ಸ್ಲೇಟ್. ಕಡ್ಡಿ.ಪೆನ್ಸಿಲ್
*ಶಾರದಾ ಪೂಜೆಯ ಸಂಭ್ರಮ
*ಶಾಲೆಯ ಉಪ್ಪಿಟ್ಟಿನ ರುಚಿ*
*ಮೈದಾನದ ಕಬಡ್ಡಿ ,ಖೋ-ಖೋ.ಶಾರ್ಟ್ ಪುಟ್ ಎಸೆತ
*ಗೆಳೆಯರ ನಗು

ಇವೆಲ್ಲವೂ ಇಂದು ನೆನಪುಗಳಾಗಿವೆ

ಆ ನೆನಪುಗಳ ಮಧ್ಯೆ ನಿಂತಿರುವ ನಮ್ಮ ಶಿಕ್ಷಕರು ಮಾತ್ರ

ನಮ್ಮ ಬಾಲ್ಯದ ಆಕಾಶದಲ್ಲಿ ಎಂದಿಗೂ ಅಸ್ತಮಿಸದ ನಕ್ಷತ್ರಗಳು

ನನ್ನ ಅಚ್ಚುಮೆಚ್ಚಿನ ಎಲ್ಲಾ ಶಿಕ್ಷಕರಿಗೂ
ನನ್ನ ಬಾಲ್ಯದ ನೆನಪುಗಳಿಗೆ ಜೀವ ತುಂಬಿದ ಎಲ್ಲಾ ಗುರುಗಳಿಗೂ

ಶಿಕ್ಷಕರ ದಿನಾಚರಣೆಯ ಹೃದಯಪೂರ್ವಕ ಶುಭಾಶಯಗಳು.

ಗುರುಗಳ ಪಾದಗಳಿಗೆ ಶತಕೋಟಿ ನಮನಗಳು 🙏
✍️ ಎಂಎಂ ದಾವೂದ್
ಹಳೆ ವಿದ್ಯಾರ್ಥಿ, ಹಿಂದೂಸ್ತಾನಿ ಶಾಲೆ ಮಡಿಕೇರಿ

WhatsApp

Join Now

Telegram

Join Now

Instagram

Join Now