--Ads--

ಮಲ್ಲುಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದಸ್ಯರು ಪಡೆದುಕೊಳ್ಳಬೇಕು.

On: September 16, 2026 1:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಮಲ್ಲುಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದಸ್ಯರು ಪಡೆದುಕೊಳ್ಳಬೇಕು.

ತಾಂಡವಪುರ ಸೆಪ್ಟೆಂಬರ್ 16 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಲ್ಲುಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಮೂರನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತು

ವಾರ್ಷಿಕ ಮಹಾಸಭೆಯ ಉದ್ಘಾಟನೆ ಮತ್ತು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷೆ ಆರ್ ರೋಹಿಣಿ ಪುಟ್ಟರಾಜ ರವರು ನಮ್ಮ ಸಹಕಾರ ಸಂಘ ಈಗ ತಾನೇ ಅಂಬೆಗಳಾಗುತ್ತಾ ಸಾಗುತ್ತಾ ಬರುತ್ತಿದ್ದು ರೈತರು ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸಂಘದಲ್ಲಿ ಪಡೆದಂತ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ರೈತರು ಸಹಕಾರ ನೀಡಬೇಕು ಎಂದು ಹೇಳಿದರು

ಸಂಘದ ಉಪಾಧ್ಯಕ್ಷ ಎಂ ವಿಷ್ಣು ಪ್ರಸಾದ್ ರವರು ಮಾತನಾಡಿ ನಮ್ಮ ಸಂಘ ಸ್ಥಾಪನೆಯಾಗಿ ಇಲ್ಲಿಗೆ 3 ವರ್ಷ ಆಗಿದೆ ಆದ್ದರಿಂದ ಸಂಘದಲ್ಲಿ ಲಾಭಾಂಶ ಕಡಿಮೆ ಇದ್ದು ಉತ್ತಮ ಲಾಭ ನಮ್ಮ ಸಂಘಕ್ಕೆ ಬರಬೇಕಾದರೆ ಸಂಘವು ಇನ್ನೂ ಎರಡು ಮೂರು ವರ್ಷಗಳು ಬೇಕಾಗುತ್ತದೆ ಅಲ್ಲಿ ತನಕ ರೈತರು ಸಂಘದ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ರೈತರಲ್ಲಿ ಮನವಿ ಮಾಡಿದರು

ಅಲ್ಲದೆ ನಮ್ಮ ಸಂಘದ ಕಾರ್ಯ ಚಟುವಟಿಕೆಗಳು ಬಾಡಿಗೆಯ ಕಟ್ಟಡದಲ್ಲಿ ನಡೆಯುತ್ತಿದ್ದು ನಮ್ಮದೇ ಸಂಘದ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಸ್ವಂತ ಜಾಗವನ್ನ ಖರೀದಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಂಘದ ಕಟ್ಟಡಕ್ಕೆ ಅನುದಾನ ಪಡೆದು ಸಂಘದ ಕಟ್ಟಡವನ್ನು ನಿರ್ಮಿಸಿಕೊಂಡು ನಮ್ಮ ಸಂಘದ ಕಾರ್ಯ ಚಟುವಟಿಕೆಯನ್ನು ನಡೆಸಲು ಅನುಕೂಲವಾಗಲಿದ್ದು ಇದರಿಂದ ನಮ್ಮ ಸಂಘಕ್ಕೆ ಬಾಡಿಗೆ ಕೊಡುವ ಹಣ ಉಳಿತಾಯ ಆಗಲಿದೆ ಅಲ್ಲದೆ ನಮ್ಮ ಸಂಘದಿಂದ ರೈತರಿಗೆ ಹಾಗೂ ಮಹಿಳಾ ಸಂಘದ ಸದಸ್ಯರುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಹಾಗೂ ಹೈನುಗಾರಿಕೆಗೂ ಸಹ ಹೆಚ್ಚು ಹೊತ್ತು ನೀಡಲಾಗಿದೆ ಎಂದು ತಿಳಿಸಿದ ಅವರುವಾಣಿಜ್ಯ ಸಾಲ ಹಾಗೂ ಕೃಷಿ ಚಟುವಟಿಕೆಯಲ್ಲಿ ಮಾಡುವ ರೈತರಿಗೆ ಬಡ್ಡಿ ರಹಿತ ಸಾಲವನ್ನು ಸಹ ನೀಡಲಾಗುತ್ತದೆ ರೈತರು ಖಾಸಗಿ ಬ್ಯಾಂಕಿನ ಮೊರೆ ಹೋಗದೆ ನಮ್ಮ ಸಂಘದಲ್ಲಿ ಸಾಲವನ್ನು ಪಡೆದು ಸಕಾಲದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ರೈತ ಸಂಘದ ಮುಖಂಡ ನಂಜುಂಡಸ್ವಾಮಿ ಮಾತನಾಡಿ ನಮ್ಮ ಈ ಸಂಘಕ್ಕೆ ಸೇರುವ ಹಣಕಟ್ಟಿ ಸದಸ್ಯರಾಗಿರುವವರು ಯಾರು ಕೂಡ ತಮ್ಮ ಶೇರನ್ನು ವಾಪಸ್ ಪಡೆಯಬೇಡಿ ಏಕೆಂದರೆ ಸರ್ಕಾರದಿಂದ ಹಲವಾರು ಸೌಲಭ್ಯಗಳು ರೈತರಿಗೆ ದೊರೆಯುತ್ತವೆ ಜೊತೆಗೆ ರೈತರ ಕಷ್ಟಕ್ಕೆ ಒಳಗಾದಾಗ ಸರ್ಕಾರ ರೈತರ ನೆರವಿಕೆ ಬರುವ ಜೊತೆಗೆ ರೈತರು ಪಡೆದಂತಹ ಸಾಲವನ್ನು ಮನ್ನಾ ಮಾಡುವ ಸಾಧ್ಯತೆ ಇದೆ ಆದ್ದರಿಂದ ರೈತರು ಯಾರು ಕೂಡ ನಮಗೆ ಸಾಲ ಸಿಗಲಿಲ್ಲ ಎಂದು ಭಾವಿಸಿ ಸಂಘದ ಶೇರುಹಣವನ್ನು ವಾಪಸ್ ಪಡೆಯಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಂ ಸುರೇಶ್ ರವರು ಮಾತನಾಡಿ 2025 ಹಾಗೂ 26 ನೇ ಸಾಲಿನ ವಾರ್ಷಿಕ ಮುಂಗಡ ಬಜೆಟ್ ಅನ್ನು ಮಂಡಿಸಿ ನಾವು ಮುಂದಿನ ವರ್ಷದ ಒಳಗೆ ಸುಮಾರು ಮೂರು ಲಕ್ಷ ಲಾಭದ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಸಭೆಯಲ್ಲಿ ತಿಳಿಸಿದರು

ಇದೆ ರೈತರು ಮಾತನಾಡಿ ನಮ್ಮ ಸಂಘದ ಸದಸ್ಯರು ಯಾರಾದರೂ ಮರಣ ಹೊಂದಿದ್ದಾರೆ ಅವರಿಗೆ ಧನ ಸಹಾಯ ಮಾಡುವ ಮೂಲಕ ನೆರವಾಗಿ ಜೊತೆಗೆ ನಮ್ಮ ರೈತರ ಮಕ್ಕಳಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ಮಾಡಿ ಎಂದು ತಿಳಿಸಿದರು

ರೈತರ ಸಲಹೆಯನ್ನು ಸ್ವೀಕರಿಸಿದ ಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಮುಂದಿನ ದಿನಗಳಲ್ಲಿ ನಿಮ್ಮ ಈ ಬೇಡಿಕೆಗಳಿಗೆ ಸ್ಪಂದಿಸುವ ಜೊತೆಗೆ ಸಂಘದ ಬೆಳವಣಿಗೆ ಕೂಡ ಹೆಚ್ಚು ಒತ್ತು ನೀಡುತ್ತವೆ ಎಂದು ಭರವಸೆ ನೀಡಿದರು

ಸಭೆಯಲ್ಲಿ ಸಂಘದ ಅಧ್ಯಕ್ಷ ಆರ್ ರೋಹಿಣಿ ಪುಟ್ಟರಾಜು ಉಪಾಧ್ಯಕ್ಷ ಎಂ ಎಷ್ಟೋ ಪ್ರಸಾದ್ ನಿರ್ದೇಶಕರುಗಳಾದ ಎಂ ಶಿವಶಂಕರ್ ಸೋಮು ಶಿವಣ್ಣ ರವಿ ಜನಾರ್ಧನ್ ಚಿಕ್ಕ ಸ್ವಾಮಿ ಎಂ ಮಹೇಶ್ ಅಂಕಪ್ಪ ಲೋಕ ಲಕ್ಷ್ಮಿ ಗುರುಸಿದ್ಧೇಗೌಡ ಹಾಗೂ ಸಂಘದ ಕಾರ್ಯದರ್ಶಿ ಎಂ ಸುರೇಶ್ ಹಾಗೂ ಸಿಬ್ಬಂದಿ ವರ್ಗದವರು ರೈತರು ರೈತ ಮಹಿಳೆಯರು ಮಹಿಳೆ ಸಂಘದ ಸದಸ್ಯರುಗಳು ಸಭೆಯಲ್ಲಿ ಭಾಗಿಯಾಗಿದ್ದರು

— ಟೀಕೆ ಬಸವರಾಜು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ

ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ  ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಗೆ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬ ಆಚರಣೆ

ನಗರಲೆ ಹಾಲು ಉತ್ಪಾದಕರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ