--Ads--

ನಾರಾಯಣ ಗುರುಗಳು ಮತ್ತು ಅಂಬೇಡ್ಕರ್ ರವರು  ಮನುಕುಲಕ್ಕೆ ಅದ್ಭುತ ಆಲೋಚನೆಗಳನ್ನು ಕೊಟ್ಟ ಧೀಮಂತರು 

On: September 24, 2026 4:46 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ನಾರಾಯಣ ಗುರುಗಳು ಮತ್ತು ಅಂಬೇಡ್ಕರ್ ರವರು  ಮನುಕುಲಕ್ಕೆ ಅದ್ಭುತ ಆಲೋಚನೆಗಳನ್ನು ಕೊಟ್ಟ ಧೀಮಂತರು 

 

ನಾರಾಯಣ ಗುರುಗಳು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಂದೇ ಆಲೋಚನೆಯಲ್ಲಿ ಬದುಕಿದವರು ಅವರಿಬ್ಬರ ಕಾಲಘಟ್ಟ ಸ್ವಲ್ಪಮಟ್ಟಿನ ವ್ಯತ್ಯಾಸವಿದ್ದರೂ ಮನುಕುಲಕ್ಕೆ ಅದ್ಭುತ ಆಲೋಚನೆಗಳನ್ನು ಕೊಟ್ಟ ಧೀಮಂತ ವ್ಯಕ್ತಿಗಳು ಇವರು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ. ಎಸ್. ದ್ವಾರಕಾನಾಥ್ ನುಡಿದರು.

ಮಾಸ್ತಿ ಗ್ರಾಮದ ಕೆಪಿಎಸ್ ಶಾಲೆಯ ಆವರಣದಲ್ಲಿ ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ನ ಮೂಲಕ ಏರ್ಪಡಿಸಲಾಗಿದ್ದ ನಾರಾಯಣ ಗುರುಗಳ ಜಯಂತಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಶಾ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ವಿತರಣೆ ಸರ್ಕಾರಿ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಸ್ತಿ ಹೋಬಳಿ ವ್ಯಾಪ್ತಿಗೆ ಉಚಿತ ಶವ ಸಂರಕ್ಷಣ ಪೆಟ್ಟಿಗೆಯ ಲೋಕ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.

ಬಾಬಾ ಸಾಹೇಬರು ಶಿಕ್ಷಣ ಸಂಘಟನೆ ಹೋರಾಟ ಎಂದರೆ ನಾರಾಯಣ ಗುರುಗಳು ಶಿಕ್ಷಣದಿಂದ ಸಂಘಟನೆಯಿಂದ ಸ್ವತಂತ್ರರಾಗಿ ಎಂಬ ಧ್ಯೇಯ ವಾಕ್ಯ ನೀಡಿದ್ದರು.ಈ ಇಬ್ಬರ ಮನಸ್ಥಿತಿಗಳು ಮತ್ತು ಇದ್ದ ಪರಿಸ್ಥಿತಿಗಳು ಒಂದೇ ಆಗಿತ್ತು ಅಂತಹ ಇಬ್ಬರು ಒಂದೇ ಕಾಲಘಟ್ಟದಲ್ಲಿ ಬದುಕಿದ್ದರೆ ಬಹುಶಃ ಸಮಾಜ ಇನ್ನಷ್ಟು ಸುಧಾರಣೆಯಾಗುತ್ತಿತ್ತು ಎಂದು ಅವರು ನುಡಿದರು.

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ ನಾರಾಯಣ ಗುರುಗಳ ಆದರ್ಶ ಸಮಾಜದ ಪ್ರತಿವರ್ಗಕ್ಕೂ ಅನುಕರಣೆಯವಾಗಿದೆ ಅವರ ಪ್ರತಿ ಮಾತು ಅನುಸರಿಸಿದರೆ ಅದ್ಭುತವಾಗಿ ಬದುಕನ್ನು ಸಾಗಿಸಬಹುದು ಜೊತೆಗೆ ನಮ್ಮಂತಹ ಸಾಮಾನ್ಯರಿಗೂ ನಾರಾಯಣ ಗುರುಗಳ ಆಶೀರ್ವಾದದಿಂದಲೇ ಶಿಕ್ಷಣ ದೊರೆತಿದೆ ಅದನ್ನು ನಾವು ಉತ್ತಮ ಮಾರ್ಗದಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದರು.

ನಿವೃತ್ತ ಪೊಲೀಸ ಅಧಿಕಾರಿ ಬಿ.ಕೆ. ಶಿವರಾಮ್ ಮಾತನಾಡುತ್ತಾ ನಾರಾಯಣ ಗುರುಗಳ ಕಾಲಘಟ್ಟದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿ ಶಿಕ್ಷಣದ ಹಕ್ಕು ಇರಲಿಲ್ಲ ಜೊತೆಗೆ ಸ್ತನ ಕರ ನೀಡಬೇಕಿತ್ತು ಅಂತಹ ಸಂದರ್ಭದಲ್ಲಿ ನಾರಾಯಣ ಗುರುಗಳು ತಂದ ಸುಧಾರಣೆ ಈಗ ಮಹಿಳೆ ತನ್ನ ಪ್ರತಿಕ್ಷೇತ್ರದಲ್ಲೂ ಸಾಧನೆಗೈಯಲು ಸಾಧ್ಯವಾಯಿತು ಎಂದರು. ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಮಹಾಸ್ವಾಮಿಗಳು ಮಾತನಾಡುತ್ತಾ ಸಮಾಜದಲ್ಲಿ ಹುಟ್ಟಿದ ಮನುಷ್ಯ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಲೋಚಿಸಬೇಕು ಆ ದೃಷ್ಟಿಕೋನದಿಂದ ನಾರಾಯಣಗುರು ಸೇವಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮಾಸ್ತಿ ಟಿಸಿ ರಮೇಶ್ ರವರ ಸೇವೆ ಶ್ಲಾಘನೀಯ ಮತ್ತು ಅನುಕರಣೆಯ ಎಂದರು.
ಶಿವ ಶನೇಶ್ವರ ಕ್ಷೇತ್ರದ ಮಹಾಸ್ವಾಮಿಗಳಾದ ಮುನೇಶ್ವರ ಸ್ವಾಮಿಗಳು ಮಾತನಾಡುತ್ತಾ ಸಮಾಜ ಮುಖ್ಯವಾಗಿ ಆಲೋಚನೆ ಮಾಡುತ್ತಿರುವ ನಾರಾಯಣಗುರು ಸೇವಾ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಇಂತಹ ಕಾರ್ಯಗಳಿಗೆ ನಮ್ಮ ಸಂಸ್ಥೆಯು ಸದಾ ಬದ್ಧವಾಗಿದೆ ಆವಶ್ಯಕತೆ ಇದ್ದಲ್ಲಿ ಶಿಕ್ಷಣ ಆರೋಗ್ಯ ಮುಂತಾದ ಕಾರ್ಯಗಳಿಗೆ ನಮ್ಮ ಸಂಸ್ಥೆಯ ಸೇವೆಯನ್ನು ಪಡೆಯಬಹುದು ಎಂದರು.

ಜೆಪಿಎನ್ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ್ ರವರು ಮಾತನಾಡುತ್ತಾ ನಾಡಿನ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಪೂರಕ ಸೇವೆ ಮಾಡಿದವರು ಆರ್ ಎಲ್ ಜಾಲಪ್ಪನವರು ಆನಂತರ ಅನಂತರ ನಮ್ಮ ತಂದೆ ಜೆಪಿ ನಾರಾಯಣಸ್ವಾಮಿ ಶ್ರಮಿಸಿದ್ದಾರೆ ಅದೇ ಹಾದಿಯಲ್ಲಿ ಮಾಸ್ತಿ ಟಿ.ಸಿ. ರಮೇಶ್ ರವರು ಶ್ರಮಿಸುತ್ತಿರುವುದು ನಿಜಕ್ಕೂ ಅನುಕರಣೆಯ ಎಂದರು.

ಈ ಸಂದರ್ಭದಲ್ಲಿ ಬೇರೀಕೈ ನಾಗೇಶ್,ಸೈದಪ್ಪ ಗುತ್ತೇತಾರ್, ಶೆಟ್ಟಿಹಳ್ಳಿ ರಾಮಮೂರ್ತಿ, ಅಂಬರೀಷ್ , ಅಶೋಕ್ ಕುಮಾರ್, ಡಾ. ಚೇತನ್ ಕುಮಾರ್ ಜೆಸಿಬಿ ನಾಗರಾಜ್ ,ಸಪ್ದಾರ್ ಬೇಗ್ , ಹಾರಗದ್ದೆ ಮಂಜನಾಥ್, ಹಾರಗದ್ದೆ ಮುನಿಸ್ವಾಮಿ, ಅಕ್ಷಯ್ ಕುಮಾರ್, ರವಿಶಂಕರ್, ಜೊನ್ನಮುನಿಯಪ್ಪ ಮೊಟ್ಟೆ ನಾರಾಯಣಸ್ವಾಮಿ ಶ್ರೀನಿವಾಸ್ ಆರ್ ಸಿ ಚಾರಿಟೇಬಲ್ ಟ್ರಸ್ಟ್ ಆರ್ ಚಂದ್ರು , ಕರಿಸಂದ್ರ ಪ್ರವೀಣ್, ಕೋಲಾರ ಮುನಿರಾಜು, ರಾಮನಗರ ಗುರುಸ್ವಾಮಿ, ರತ್ನಮ್ಮ ಚಂದ್ರಪ್ಪ ಮಾಸ್ತಿ ವ್ಯಾಪ್ತಿಯ ಸಮುದಾಯದ ಎಲ್ಲಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

WhatsApp

Join Now

Telegram

Join Now

Instagram

Join Now