ವಿಜಯ ದರ್ಪಣ ನ್ಯೂಸ್………
ಗೋವಾದ ಹೆಮ್ಮೆಯ ಕನ್ನಡಿಗ
ಶ್ರೀ ಹನುಮಂತರೆಡ್ಡಿ ಶಿರೂರ್ ಬಿಚ್ಚುಲಿಯಂ ನ ಸಾಮ್ರಾಟ್ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆ …..

ಗೋವಾ ಮಹಾ ಜನತೆ ಗೋವಾದಲ್ಲಿ ವಾಸಿಸುವ ಕನ್ನಡಿಗರನ್ನು ಅಪ್ಪಿಕೊಂಡು ಮೊದಲ ಬಾರಿಗೆ ಗೋವಾ ಬಿಚ್ಚುಲಿಯನ್ನ ಸಾಮ್ರಾಟ್ ಕ್ಲಬ್ ಅಧ್ಯಕ್ಷರನ್ನಾಗಿ ಮಾಡಿ ಕನ್ನಡಿಗರನ್ನು ಸಹ ತಮ್ಮವರೆಂದು ಪರಿಗಣಿಸಿ ಕನ್ನಡಿಗರಿಗೆ ಗೌರವ ನೀಡುವ ಮೂಲಕ
ಮುಖ್ಯ ವಾಹಿನಿಯಲ್ಲಿ ಹೊಸ ಬಾಷ್ಯ ಬರೆದಿದ್ದಾರೆ…
ಈ ಹಿಂದೆ ಗೋವಾ ಮಹಾಜನತೆ ಕನ್ನಡಿಗರನ್ನ ಅಪ್ಪಿಕೊಂಡ ಉದಾಹರಣೆಗಳಿಲ್ಲ ಪ್ರತಿಯೊಂದುಕ್ಕೂ ಕನ್ನಡಿಗರನ್ನ ದೂರ ಇಡುತ್ತಿದ್ದರು.
ಇಂತಹ ಸುಸಂದರ್ಭದಲ್ಲಿ ಬಿಚ್ಚೋಲಿಯಂ ನ ಸಾಮ್ರಾಟ್ ಕ್ಲಬ್ಬಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಅಭಿನಂದನೀಯ ಮತ್ತು ಕನ್ನಡಿಗರಿಗೆ ಹೆಮ್ಮೆಯ ಮತ್ತು ಸಂತೋಷದ ವಿಷಯ.
ಈ ಹಿಂದೆ ಹನುಮಂತ ರೆಡ್ಡಿ ಅವರು ಕಳೆದ ಒಂದುವರೆ ದಶಕದಿಂದ ಗೋವಾದಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ಮಾಡುವ ಮೂಲಕ ಕನ್ನಡಿಗರನ್ನು ಒಗ್ಗೂಡಿಸಿ ಗೋವಾದಲ್ಲಿ ಕನ್ನಡ ಭವನ ದ ಪರಿಕಲ್ಪನೆಯನ್ನು ಮೂಡಿಸಿ ಎಂದು ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗುವ ಸಮಯ ಬಂದಿದೆ.
ಕನ್ನಡ ಭೂಮಿ ಕನ್ನಡ ಸಂಘದ ಅಧ್ಯಕ್ಷರಾಗಿ
ಅಖಿಲ ಗೋವಾ ಕನ್ನಡ ಮಹಾಸಂಗದ ರಾಜ್ಯ ಅಧ್ಯಕ್ಷರಾಗಿ ಕನ್ನಡಪರ ಸೇವೆಯನ್ನ ಮಾಡಿದವರು
ಸಮಾಜ ಸೇವೆ ಮತ್ತು ಕರೋನಾ ಸಂದರ್ಭದಲ್ಲಿ ಕನ್ನಡಿಗರಿಗೆ ಸಹಾಯ ಹಸ್ತ ನೀಡುವ ಮೂಲಕ ಕನ್ನಡಿಗರ ಸಹಕಾರಿಯಾಗಿ ಕೆಲಸ ಮಾಡಿದವ.ರು
2012-13 ಇಸ್ವಿಯಲ್ಲಿ ಹನುಮಂತ್ ರೆಡ್ಡಿ ಶಿರೂರ್ ಅವರು ಕರ್ಮ ಭೂಮಿ ಕನ್ನಡ ಸಂಘದ ಅಧ್ಯಕ್ಷರಾಗಿ ಆ ಸಂಸ್ಥೆಯ ಮೂಲಕ ಗೋವಾ ಕನ್ನಡಿಗರಲ್ಲಿ ಒಗ್ಗಟ್ಟನ್ನ ಮೂಡಿಸಲು ಪ್ರಯತ್ನ ಪಟ್ಟು ಯಶಸ್ವಿಯಾದವರು.
ಅವರು ಆಯೋಜಿಸುವ ಕನ್ನಡ ಸಾಂಸ್ಕೃತಿಕ ಸಮ್ಮೇಳನಕ್ಕೆ ಗೋವಾ ಮುಖ್ಯಮಂತ್ರಿ ಆದಿಯಾಗಿ ಅನೇಕ ಸಚಿವರು ಆಗಮಿಸಿ ಕನ್ನಡಿಗರು ಆಚರಿಸುವ ಕಾರ್ಯಕ್ರಮಗಳಲ್ಲಿ ಕನ್ನಡ ಭವನದ ಬಗ್ಗೆ ಮೊದಲ ಬಾರಿಗೆ ಹುಕ್ಕೇರಿ ಮಠಾಧೀಶರ ಮೂಲಕ ಮುಖ್ಯಮಂತ್ರಿಗಳಿಗೆ ನಿವೇದನೆ ಸಲ್ಲಿಸಿದ್ದು….
ಮುಖ್ಯಮಂತ್ರಿಗಳು ಸಹ ಮಠಾಧೀಶರ ಮಾತಿಗೆ ಮನ್ನಣೆ ನೀಡಿ ಗೋವಾದಲ್ಲಿ ಕನ್ನಡ ಭವನ ಕಟ್ಟಿಕೊಳ್ಳಬಹುದು ಸೂಕ್ತ ಪ್ರಸ್ತಾವನೆ ಬಂದರೆ ಪರಿಶೀಲಿಸುತ್ತೇನೆ ಎಂದು ಅಂದಿನ ಕಾರ್ಯಕ್ರಮದಲ್ಲಿ ಆಶ್ವಾಸನೆ ನೀಡಿದ್ದು ಇತಿಹಾಸ.
ಸತತವಾಗಿ ಎರಡು ವರ್ಷಗಳ ಕಾಲ ಗೋವಾದ ಬಿಚ್ಚುಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಾದ ಮುಖ್ಯಮಂತ್ರಿ ಆದಿಯಾಗಿ ಸಚಿವರು ಶಾಸಕರು ಕನ್ನಡ ಭವನ ನಿರ್ಮಾಣಕ್ಕೆ ಬೆಂಬಲಿಸುವುದಾಗಿ ಭಾಷಣಗಳಲ್ಲಿ ಹೇಳಿ ಕನ್ನಡಿಗರನ್ನ ಹುರಿದುಂಬಿಸುತ್ತಿದ್ದರು.
ನಂತರದ ದಿನಗಳಲ್ಲಿ ಉಳಿದ ಕನ್ನಡಪರ ಸಂಘಟನೆಗಳು ಈ ದಿಸೆಯಲ್ಲಿ ಪ್ರಯತ್ನ ಮಾಡಿದ್ದಾರೆ. ಮೊದಲಿಗೆ ಈ ವಿಚಾರ ಮುನ್ನಡೆಗೆ ತಂದವರು ಹನುಮಂತರೆಡ್ಡಿ ಶಿರೂರವರು ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ತತ್ವ ನಂಬಿದವರು ರೆಡ್ಡಿಯವರು ಅನೇಕರಿಗೆ ಅನೇಕ ಬಾರಿ ಸಹಾಯ ಹಸ್ತ ನೀಡಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಕರೋನಾ ಸಂದರ್ಭದಲ್ಲಿ ಗೋವಾ ಕನ್ನಡಿಗರಿಗೆ ಆರ್ಥಿಕವಾಗಿ ಸಹಾಯ ಮಾಡುವುದಲ್ಲದೆ ಕಲ್ಲಂಗುಟ್ ಮಪುಸ ಬಿಚೋಲಿಗಳಲ್ಲಿ ಉಚಿತ ರೇಷನ್ ನೀಡುವ ಕಾರ್ಯವನ್ನ ಮಾಡಿ ಪ್ರಚಾರವನ್ನು ಸಹ ಮಾಡಿಲ್ಲ… ಸುಮಾರು 200 ಗೋವಾ ಕನ್ನಡಿಗರನ್ನ ಒಂದೆಡೆ ವಸತಿ ಕಲ್ಪಿಸಿ ಅವರಿಗೆ ಊಟ ಉಪಹಾರ ಹಾಗೂ ಟಿವಿ ವ್ಯವಸ್ಥೆಯೊಂದಿಗೆ ಅವರು ಕರ್ನಾಟಕಕ್ಕೆ ಹೋಗುವವರೆಗೂ ಬಸ್ ವ್ಯವಸ್ಥೆ ಮಾಡಿ ಸಹಾಯ ಹಸ್ತ ನೀಡಿದ್ದಾರೆ.
ಸುಮಾರು 200 ಕ್ಕೆ ಹೆಚ್ಚು ಕನ್ನಡಿಗರನ್ನ ಅವರವರ ತವರಿಗೆ ಕಳಿಸಲು ಬಸ್ ವ್ಯವಸ್ಥೆ ಮಾಡಿ ಕಳಿಸಿಕೊಟ್ಟ ಕೀರ್ತಿ ಇವರದು ಬಿಚೋಲಿ ಕನ್ನಡಿಗರಿಗೆ ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಪ್ರವಾಸಿ ತಾಣಗಳ ಕುರಿತು ಪ್ರವಾಸವನ್ನ ಏರ್ಪಡಿಸುತ್ತಿದ್ದಾರೆ.
ನಿರಂತರವಾಗಿ ಕನ್ನಡ ರಾಜ್ಯೋತ್ಸವ ಕನ್ನಡ ಸಮ್ಮೇಳನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ.

ಯಾವುದೇ ಪ್ರಚಾರದ ಗಿಳಿಗೂ ಹೋಗದೆ ತಮ್ಮ ಪಾಡಿಗೆ ತಾವು ಕನ್ನಡ ಪರ ಸೇವೆಯನ್ನು ಮಾಡುತ್ತಿದ್ದಾರೆ.
ಬಿಚ್ಚೋಲಿಯಂ ಕರ್ಮಭೂಮಿ ಕನ್ನಡ ಸಂಘದ ಹನುಮಂತ್ ರೆಡ್ಡಿ ಶಿರೂರರವರು ಬಿಜಾಪುರ್ ತಾಳಿಕೋಟಿಗಳಿಂದ ಗೋವಾಕ್ಕೆ ಬಸ್ಸುಗಳ ವ್ಯವಸ್ಥೆಯನ್ನು ಮಾಡಲು ಹೋರಾಟ ಮಾಡಿದವರು.
ಕನ್ನಡ ಕಾರ್ಯಕ್ರಮಗಳಿಗೆ ಸ್ವತಃ ಬಿಟ್ಟೋಲಿಯಂ ಕನ್ನಡ ಸಂಘದಿಂದ ದೇಣಿಗೆ ಸಂಗ್ರಹಿಸಿ ಸ್ವಂತ ದುಡಿಮೆಯಲ್ಲಿ ಸಕ್ರಿಯರಾಗಿರುವ ಬಿಚೋಲಿಯಂ ಕನ್ನಡಿಗರಿಂದ ಸಹಾಯ ಪಡೆದು ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಕನ್ನಡಿಗರಿಗಾಗಿ ಮಾಡುತ್ತಿದ್ದಾರೆ
ಕನ್ನಡ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ ಇವರ ಕನ್ನಡಪರ ಸೇವೆಗಾಗಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಕದಂಬ ಪ್ರಶಸ್ತಿ, ಕರುನಾಡಭೂಷಣ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಹೊರನಾಡಿನ ಕನ್ನಡ ಪರ ಸಾಧನೆಗಾಗಿ ಸಂದಿವೆ
ಅಖಿಲ ಗೋವಾ ಕನ್ನಡ ಮಹಾ ಜನತೆಯ ಪರವಾಗಿ ಬಿಚ್ಚುಲಿಯಂ ಸಾಮ್ರಾಟ್ ಆಡಳಿತ ಮಂಡಳಿಗೆ ಬೆಂಗಳೂರಿನ ಕರ್ನಾಟಕ ಜಾಗೃತಿ ವೇದಿಕೆ ಅಭಿನಂದನೆಗಳುನ್ನು ಸಲ್ಲಿಸುತ್ತದೆ.
ಗೋವಾ ಮಹಾ ಜನತೆ ಮತ್ತು ಕನ್ನಡಿಗರ ಬಾಂಧವ್ಯ ಹೀಗೆ ಮುಂದುವರೆಯಲಿ ಗೋವಾದಲ್ಲಿ ಹೊಸ ಕ್ರಾಂತಿ ನಿರ್ಮಾಣವಾಗಲಿ ಎಂಬ ಸದಾಶಯ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಪದಾಧಿಕಾರಿಗಳು ಹಾರೈಸಿದರು.
“ಪಿತೃ ಕಲ್ಪ” ಪ್ರವಚನ

ಬೆಂಗಳೂರು : ಅಕ್ಷಯನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2ರ ವರೆಗೆ ಪ್ರತಿದಿನ ಸಂಜೆ 6-00ಕ್ಕೆ ಶ್ರೀ ಕಲ್ಲಾಪುರ ಪವಮಾನಾಚಾರ್ಯರಿಂದ “ಪಿತೃ ಕಲ್ಪ” ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ ; ಶ್ರೀ ಸುಬ್ರಹ್ಮಣ್ಯ ಮಠ, 5ನೇ ಅಡ್ಡರಸ್ತೆ, ಅಕ್ಷಯನಗರ, ಬೆಂಗಳೂರು






