--Ads--

ಕರ್ನಾಟದ‌ ಏಕೀಕರಣಕ್ಕೆ ಶ್ರಮಿಸಿದ ‌ಗಣ್ಯರ ನೆನೆಪಿನ ಸಂಭ್ರಮವೇ ರಾಜ್ಯೋತ್ಸವ:ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ)

On: November 10, 2026 1:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಕರ್ನಾಟದ‌ ಏಕೀಕರಣಕ್ಕೆ ಶ್ರಮಿಸಿದ ‌ಗಣ್ಯರ ನೆನೆಪಿನ ಸಂಭ್ರಮವೇ ರಾಜ್ಯೋತ್ಸವ:  ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ)

(ಬೆಂಗಳೂರು ಕೆಎಲ್ ಇ ಕಾಲೇಜಿನ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿ)

ಬೆಂಗಳೂರು : ಜನ್ಮ ಕೊಟ್ಟ ತಾಯಿ, ನಾವು ನಡೆದಾಡುವ, ಅನ್ನ ಕೊಡುವ ಭೂಮಿ ಎರಡೂ ನಾವ್ಯಾರೂ ಕಾಣದಿರುವ ಸ್ವರ್ಗಕ್ಕಿಂತ ಮಿಗಿಲು ಎಂದು ಕವಿ, ಚಿಂತಕ ಶೇಷಾದ್ರಿಪುರಂ ಕಾಲೇಜಿನ ಪ್ರಾಧ್ಯಾಪಕ ಡಾ.ರಾಮಲಿಂಗೇಶ್ವರ್ ಅಭಿಪ್ರಾಯಪಟ್ಟರು.

ಅವರು ರಾಜಾಜಿನಗರದ ಕೆ.ಎಲ್.ಇ. ವಿದ್ಯಾಸಂಸ್ಥೆಯ ನಿಜಲಿಂಗಪ್ಪ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 71 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಗಾಂಧಿ, ಅಂಬೇಡ್ಕರ್, ಬಸವಣ್ಣ, ಬುದ್ಧ ಈ ಎಲ್ಲಾ ಮಹಾತ್ಮರು. ಈ ಭೂಮಿಯ ಮೇಲೆ ಬದುಕಿದ್ದಾಗ ತಮ್ಮ ಇಡೀ ಜೀವನವನ್ನು ಈ ದೇಶದ ಅಭಿವೃದ್ಧಿಗೆ, ಸಮಾಜದ ಶ್ರೇಯಸ್ಸಿಗಾಗಿ ದುಡಿದು ಮಡಿದವರು, ಅವರ ಸೇವಾ ಮನೋಭಾವ ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು.

ಕನ್ನಡ ನಾಡಿನ ಉದಯಕ್ಕೆ ಕಾರಣರಾದ ಕುವೆಂಪು, ಬೇಂದ್ರೆ, ಬಿಎಂಶ್ರೀ, ಹುಯಿಲಗೋಳ ನಾರಾಯಣರಾಯರು, ಸಿದ್ಧಪ್ಪ ಕಂಬಳಿ, ಅನಕೃ ಇನ್ನೂ ಅನೇಕ ನಾಡಿನ ಹೋರಾಟಗಾರರ ಪರಿಶ್ರಮದಿಂದ ಇಂದು ರಾಜ್ಯ ಜಗತ್ತಿನಲ್ಲಿ ಹೆಸರು ಮಾಡಿರುತ್ತದೆ. ಅಂತಹ ಶ್ರಮಜೀವಿಗಳ ಬದುಕು, ಆದರ್ಶ ಸೇವೆಯನ್ನು ನೆನಪಿಸುವ ಹಬ್ಬವೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಆಚರಣೆ ಎಂದರು.

ತಂದೆ, ತಾಯಿ,ಗುರು‌‌ಹಿರಿಯರ ಮಾರ್ಗದರ್ಶನದಲ್ಲಿ ಈ ನಾಡಿಗಾಗಿ ‌ಸೇವೆ ಸಲ್ಲಿಸಬೇಕು, ಕನ್ನಡ ನಾಡಿನಲ್ಲಿ ಇರುವವರೆಲ್ಲ ಕನ್ನಡ ಭಾಷೆ ಓದಲಿ,ಬರೆಯಲಿ, ಕಲಿತು ಮಾತನಾಡಬೇಕು, ಎಲ್ಲಾ ಉದ್ದಿಮೆಗಳು ಕನ್ನಡಿಗರಿಗೆ ಉದ್ಯೋಗ ಕೊಡಬೇಕು, ಎಲ್ಲರೂ ಕನ್ನಡದಲ್ಲೇ ಹೆಸರು ಬರೆದು ಸಹಿ ಮಾಡಿ ವ್ಯವಹರಿಸಬೇಕು ಎಂದು‌ ತಮ್ಮ ನವಿರಾದ ತಿಳಿ ಹಾಸ್ಯದ ಮೂಲಕ
ಡಾ.ಎಸ್. ರಾಮಲಿಂಗೇಶ್ವರ್ ( ಸಿಸಿರಾ) ಆಗ್ರಹಿಸಿದರು.

ಹೆಸರಾಂತ ಜಾನಪದ ಗಾಯಕ ಡಾ.ಜೋಗಿಲ ಸಿದ್ದರಾಜು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದ ಮಹನೀಯರ ನೆನಪಿನೊಂದಿಗೆ ನಾವೆಲ್ಲ ಸುಖ, ಸಂತೋಷ, ನೆಮ್ಮದಿಯಾಗಿದ್ದೇವೆ. ಗ್ರಾಮೀಣ ಪ್ರದೇಶದ ಶ್ರೀಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಇಂದು‌ ಪ್ರಪಂಚದ 15 ದೇಶಗಳನ್ನು ಸುತ್ತಿ ಕನ್ನಡದ ಜಾನಪದವನ್ನು ಹಾಡಿನ ಮೂಲಕ ಪರಿಚಯಿಸುವ ಕೆಲಸ ಮಾಡಲು ನನಗೆ ವಿದ್ಯೆ, ಬುದ್ದಿ ನೀಡಿದ ಗುರುವೇ ಶ್ರೇಷ್ಠ ಎಂದು ಹೇಳಿ , ಗುರುವೇ ನಿನ್ನಾಟ ಬಲ್ಲವರಾರಾರು, ಬಾರಿಸಿ ಕನ್ನಡ ಡಿಂಡಿಮವ. ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸಿದರು.‌

ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.‌ಸುರೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು, ವೇದಿಕೆಯಲ್ಲಿ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜಮ್ಮ‌‌ ಸ್ವಾಗತಿಸಿದರು, ಪ್ರಾಧ್ಯಾಪಕಿ ಭುವನೇಶ್ವರಿ ಜಿ. ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿ ಶ್ರೀ ರಾಮ್ ಪ್ರಾರ್ಥನಾ ಗೀತೆ ಹಾಡಿದರೆ, ಪ್ರೊ . ವೆಂಕಟೇಶ್ ಮತ್ತು ಕು.ಗೌರಿ ಅತಿಥಿಗಳ ಪರಿಚಯ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

WhatsApp

Join Now

Telegram

Join Now

Instagram

Join Now