ವಿಜಯ ದರ್ಪಣ ನ್ಯೂಸ್….
ನಮ್ಮ ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಹಿಂದಿನ ಕಾಲದ ಆಡಳಿತ ಪದ್ಧತಿ ಶಾಸನಗಳಿಂದ ಅರಿಯಬಹುದು
: ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ನಮ್ಮ ಭವ್ಯ ಭಾರತ, ಕರುನಾಡಿನ ಕಥನ ಎಲ್ಲರಿಗೂ ತಿಳಿಯಬೇಕೆಂದರೆ ಇತಿಹಾವನ್ನು ಅರಿಯದೆ ಸಾಧ್ಯವಿಲ್ಲ ಎನ್ನುವ ಹಿರಿಯರ ಮಾತಿದೆ ನಾವು ನಮ್ಮ ಹಿರಿಯರ ಜೀವನ, ಸಂಸ್ಕಾರ, ಪರಂಪರೆ, ಸಂಸ್ಕೃತಿ, ಆಡಳಿತ ವ್ಯವಸ್ಥೆ ಸಾಮಾಜಿಕ ಪದ್ಧತಿ ಇನ್ನಿತರೆ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶಿಡ್ಲಘಟ್ಟ-500 ವರ್ಷದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲೂಕಿನ ಇತಿಹಾಸವನ್ನು ಎಲ್ಲಾ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ನಾಗರಿಕರು ಹಾಗು ರೈತರು ತಿಳಿದುಕೊಳ್ಳಬೇಕು, ತಾಲೂಕಿನ ಇತಿಹಾಸವನ್ನು ತಿಳಿಸಿಕೊಡುವ ಕೆಲಸ ಸಂಬಂಧಿಸಿದವರು ಮಾಡಬೇಕು ಈ ಕಾರ್ಯಕ್ಕೆ ಎಲ್ಲ ರೀತಿಯಲ್ಲೂ ನನ್ನ ಸಹಕಾರ ಇರಲಿದೆ ತಿಳಿ ಹೇಳಿದರು.
ನಗರ ಹಾಗೂ ತಾಲ್ಲೂಕಿನ ಇತಿಹಾಸವನ್ನು ಅರಿಯುವ ಮತ್ತು ಅದನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಇತಿಹಾಸ ಅಕಾಡೆಮಿ ಸದಸ್ಯರು ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ವೀರಗಲ್ಲು, ಶಾಸನ ಕಲ್ಲು ತಾಮ್ರ ತಟ್ಟೆಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದು ಇತಿಹಾಸವನ್ನು ದಾಖಲಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಇತಿಹಾಸ ಅಕಾದೆಮಿಯ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಮುಖ್ಯವಾಗಿ ವಿದ್ಯಾರ್ಥಿಗಳು, ಯುವಜನರಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಹಿಂದಿನ ಕಾಲದ ಆಡಳಿತ ಪದ್ಧತಿ, ಕರ ವಸೂಲಿ, ರಾಜಮಹಾರಾಜರು, ಸಾಮಂತರ ಬಗ್ಗೆ ಮುಖ್ಯವಾಗಿ ತಿಳಿಸುವ ಕೆಲಸ ಆಗಬೇಕು ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗಲಿದೆ ಎಂದು ನುಡಿದರು.
ಈ ವೇಳೆ ಶಿಡ್ಲಘಟ್ಟದ ಇತಿಹಾಸವನ್ನು ದಾಖಲಿಸಿರುವ ಕೈಪಿಡಿ ಭಿತ್ತಿಪತ್ರವನ್ನು ಶಾಸಕರಿಗೆ ನೀಡಿ ಅವರಿಂದ ಬಿಡುಗಡೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಇತಿಹಾಸ ಅಕಾಡೆಮಿ ಸದಸ್ಯರಾದ ಕೆ.ಧನಪಾಲ್, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಶಶಿಕುಮಾರ್ ನಾಯ್ಕ, ಸಾದಲಿ ನಾಗೇಶ್, ಭಕ್ತರಹಳ್ಳಿ ನಾಗೇಶ್, ಕೇಶವಮೂರ್ತಿ, ಭಾರ್ಗವ, ಬಾಲಚಂದ್ರಶೇಖರ್, ಅಶ್ವಿನಿ ಹಾಗು ಪುರುಷೋತ್ತಮ್,
ಜೆ.ವಿ.ವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.










