--Ads--

ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

On: October 9, 2026 3:03 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ತಾಂಡವಪುರ ಅಕ್ಟೋಬರ್ 9 ದಕ್ಷಿಣ ಕಾಶಿ ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ಇಂದು ತಾಲ್ಲೂಕು ಪತ್ರಕರ್ತರ ಸಂಘ (ರಿ.) ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ನಡೆಯಿತು ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದಸುತ್ತೂರು ಜೆಎಸ್ಎಸ್ ವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್ ಮಹೇಶ್ ರವರು ಪ್ರಶಸ್ತಿ ಪುರಸ್ಕೃತ ಟಿ ಕೆ ಬಸವರಾಜ್ ರವರಿಗೆ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಿದರು

ಸಮಾರಂಭವನ್ನು ಶಾಸಕ ದರ್ಶನ್ ನಾರಾಯಣ್ ರವರು  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಶಸ್ತಿ ವಿಜೇತ ಗ್ರಾಮೀಣ ಪತ್ರಕರ್ತ ಟಿಕೆ ಬಸವರಾಜು ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಮಾತನಾಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಪತ್ರಿಕಾರಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸತ್ಯ, ನಿಷ್ಠೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಆಧಾರವಾಗಿಟ್ಟುಕೊಂಡು ಜನಜಾಗೃತಿ ಮೂಡಿಸುವ ಪತ್ರಕರ್ತರ ಸೇವೆ ಸಮಾಜದ ಪ್ರಗತಿಗೆ ಸದಾ ಪೂರಕವಾಗಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿ ಪೇಕ್ ಸುದ್ದಿಗಳಿಗೆ ಸುಳ್ಳು ಸುದ್ದಿಗಳ ಬಗ್ಗೆ ಪತ್ರಿಕ ಮಾಧ್ಯಮದವರು ಎಚ್ಚರವಹಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗಬೇಕು ಎಂದು ಸಲಹೆ ನೀಡಿದರು.

ಅವರು ಪತ್ರಕರ್ತರ ನಿಮ್ಮೆಲ್ಲ ಬೇಡಿಕೆಗಳನ್ನು ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಇದಕ್ಕೆ ಜಿಲ್ಲಾ ಸಂಘದ ಅಧ್ಯಕ್ಷರು ತಾಲೂಕು ಸಂಘದ ಅಧ್ಯಕ್ಷರು ಅವರ ಜೊತೆಗೂಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಾಗಿ ಭರವಸೆ ನೀಡಿದರು

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ಐತಿ ಚಂಡ ರಮೇಶ್ ಉತ್ತಪ್ಪ ರವರು ಇವತ್ತಿನ ದಿನಮಾನಗಳಲ್ಲಿ ಪತ್ರಿಕೆಗಳು ಸಾಕ್ಷಿಗಳಾಗಿ ಉಳಿಯುತ್ತವೆ. ಯೂಟ್ಯೂಬ್ ಸೋಶಿಯಲ್ ಮೀಡಿಯಾ ಇಂತಹ ವರದಿಗಳು ಸಾಕ್ಷಿಗಳಾಗಿರುವುದಿಲ್ಲ.

ಆದರೆ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವಂತಹ ಪ್ರಿಂಟ್ ಮಾಧ್ಯಮ ಪತ್ರಿಕೆಗಳು ಇಂದಿಗೂ ಸಹ ಸಾಕ್ಷಿಗಳಾಗುತ್ತವೆ ಆದ್ದರಿಂದ ಸಾರ್ವಜನಿಕರು ಓದುಗರು ಒಂದು ಪತ್ರಿಕೆಗೆ ಐದು ರೂಪಾಯಿ ಎಂದು ಪತ್ರಿಕೆಯನ್ನು ಕೊಂಡು ಓದುವುದು ದುಬಾರಿ ಅನ್ನುವುದು ಸರಿಯಲ್ಲ ಪತ್ರಿಕೆ ಬೆಲೆ ಐದು ರೂಪಾಯಿ ಇರಬಹುದು ಆದರೆ ಅದರ ಒಳಗಡೆ ಇರುವಂತಹ ಸುದ್ದಿಗಳು ಪ್ರಪಂಚದಲ್ಲಿ ನಡೆಯುವಂತ ಅಂಕು ಡೊಂಕುಗಳು ರಾಜಕೀಯ ವಿಶ್ಲೇಷಣೆಗಳು ಸಾರ್ವಜನಿಕರ ಸಮಸ್ಯೆಗಳನ್ನು ಒತ್ತುತ್ತಿರುವ ಪತ್ರಿಕೆಗಳನ್ನು ಕೊಂಡು ಹೋಗ ಮಾತ್ರ ಪತ್ರಿಕೆಯ ಜವಾಬ್ದಾರಿ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದ ಉತ್ತಪ್ಪ ರವರು ಗ್ರಾಮೀಣ ಭಾಗದ ಪತ್ರಕರ್ತರಿಗೆ ಇದರ ಜವಾಬ್ದಾರಿ ಹೆಚ್ಚಿದೆ ಅವರು ತುಂಬಾ ಕಷ್ಟಪಡುತ್ತಾರೆ ಅವರಿಗೆ ಯಾವುದೇ ರೀತಿಯ ಸಂಬಳವಾಗಲಿ ಮತ್ತ ಯಾವುದೇ ಸಿಗುವುದಿಲ್ಲ ಅವರು ಪತ್ರಿಕೆಯ ಕಮಿಷನ್ ಅನ್ನು ನಂಬಿ ಜೀವನ ನಡೆಸುತ್ತಿದ್ದಾರೆ ಆದರೆ ಇವತ್ತು ಪತ್ರಕರ್ತರಿಗೆ ನೆರವಾಗಲು ನಾವು ಸರ್ಕಾರಗಳನ್ನು ಕೇಳುವಂತಹ ಪರಿಸ್ಥಿತಿ ಬಂದಿದೆ ಇದನ್ನು ಮನಗಂಡು ಸರ್ಕಾರಗಳು ಪತ್ರಿಕರ್ತರಿಗೆ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್ ರವರು ಮಾತನಾಡಿ ಪತ್ರಕರ್ತರು ಸ್ವಾಭಿಮಾನಿಗಳು ಅವರು ಸ್ವಾವಲಂಬಿ ಜೀವನವನ್ನು ತುಂಬಾ ಕಷ್ಟದಿಂದ ನಡೆಸುತ್ತಾರೆ ನಾವು ಸತ್ಯ ನಿಷ್ಠೆಯಿಂದ ವರದಿಗಳನ್ನು ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುತ್ತಿರುವುದು ನಾವು ನೋಡುತ್ತಿದ್ದೇವೆ ಅದೇ ರೀತಿ ನಾವು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೇಲೆ ಮೈಸೂರು ಜಿಲ್ಲೆಯ ಪತ್ರಕರ್ತರಿಗೆ ಕಷ್ಟ ಬಂದಾಗ ಅವರಿಗೆ ನೆರವಾಗುವ ನಿಟ್ಟಿನಲ್ಲಿ ನಾವು ಸದಾ ಸಿದ್ದರಿದ್ದು ಆ ದಿಕ್ಕಿನಲ್ಲಿ ನಮ್ಮ ಜಿಲ್ಲಾ ಸಂಘದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹೆಚ್ಚು ಶ್ರಮವಹಿಸುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್ ಡಿ ರಂಗಸ್ವಾಮಿ ಅವರು ಮಾತನಾಡಿ ನಮ್ಮ ಗ್ರಾಮೀಣ ಭಾಗದ ಪತ್ರಕರ್ತರಿಗೆ ನಿವೇಶನದ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯೆ ಕೂಡ ಹೆಚ್ಚಿದ್ದು ಈ ಬಗ್ಗೆ ಈ ಭಾಗದ ಶಾಸಕರು ನಿವೇಶನ ಮತ್ತು ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು

ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ಐತಿ ಚಂಡ ರಮೇಶ್ ಉತ್ತಪ್ಪ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಕೆ ದೀಪಕ್ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ್ ತಾಲೂಕು ಸಂಘದ ಅಧ್ಯಕ್ಷ ಎಚ್ ಡಿ ರಂಗಸ್ವಾಮಿ ಕಾರ್ಯಕಾರಿಣಿ ಸಮಿತಿಯ ಸದಸ್ಯ ಹುಲ್ಲಹಳ್ಳಿ ಮೋಹನ್ ಕಾರ್ಯಕಾರಣಿ ಸಮಿತಿಯ ಸದಸ್ಯರಾದ ಮಧು ಕೆಂಪೇಗೌಡ ಶ್ರೀನಿವಾಸ್ ಎಂ ಪ್ರಕಾಶ್ ಪ್ರತಾಪ್ ಮಹಾದೇವಸ್ವಾಮಿ ಕೃಷ್ಣಪ್ಪಗೌಡ ಅಧ್ಯಕ್ಷ ಎಚ್ ಡಿ ರಂಗಸ್ವಾಮಿ ಉಪಾಧ್ಯಕ್ಷ ಜಿಎಂ ವೇಣುಗೋಪಾಲ್ ಪ್ರಧಾನ ಕಾರ್ಯದರ್ಶಿ ಎನ್‌ಪಿ ದೀಪಕ್ ಪ್ರಸಾದ್ ಸಹ ಕಾರ್ಯದರ್ಶಿ ತಾಂಡವಪುರದ ಟಿ ಕೆ ಬಸವರಾಜು ಖಜಾಂಚಿ ಎನ್ ಭಾಗ್ಯರಾಜು ಮಹದೇವಸ್ವಾಮಿ ರಾಘವೇಂದ್ರನಂಜುಂಡ ನಾಯಕ ಮುಖಂಡರಾದ ಪದ್ಮನಾಭ ಪುರಸಭೆ ನಂಜುಂಡಸ್ವಾಮಿ ಕೊರಟ್ಟಿ ಮಹೇಶ್ ಸಿಎಂ ಶಂಕರ್ ಕುರಿಹುಂಡಿ ರಾಜು ಕಡಕೋಳ ಶ್ರೀಕಂಠ ತಾಂಡವಪುರ ದ ಎನ್ ಚಂದ್ರು ಬೇಕರಿ ಮಹಾದೇವ್ ಗಾಣಿಗ ಮಹದೇವು ರೈತ ಸಂಘದ ಮುಖಂಡರಾದ ಸತೀಶ್ ರಾವ್ ಬುಕ್ಕ ಹಳ್ಳಿ ನಂಜುಂಡಸ್ವಾಮಿ ಮಾಕನಹುಂಡಿ ಪುಟ್ಟಸ್ವಾಮಿ ಎಸ್ ಚಂದ್ರು ತಾಲೂಕು ಕುರುಬ ಸಮಾಜದ ಮುಖಂಡ ಕೆಂಪಣ್ಣ ಶಿವಪ್ಪ ಸೇರದಂತೆ ಅನೇಕ ಮುಖಂಡರುಗಳು ಸಂಘದ ಸದಸ್ಯರುಗಳು ಈ ಸಂದರ್ಭದಲ್ಲಿ ಹಾಜರಿದ್ದರು

:

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಗಾಂಧಿ ಸ್ಪರ್ಶಿಸಿದ ನೆಲವನ್ನು ಸಂರಕ್ಷಿಸಿ, ಪ್ರವಾಸೋದ್ಯಮವನ್ನಾಗಿ ಮಾಡಲಾಗುವುದು: ಶಾಸಕ ದರ್ಶನ್ ದೃವನಾರಾಯಣ್

ಶಾಸಕ ದರ್ಶನ್ ಧ್ರುವನಾರಾಯಣ್ ಅವರಿಂದ ಮಹಾತ್ಮ ಗಾಂಧೀಜಿ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ

ಅಕ್ಟೋಬರ್ ಒಳಗೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದಾಗಿ ಶಾಸಕ ದರ್ಶನ್ ಧ್ರುವ ನಾರಾಯಣ್ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭರವಸೆ

ಕಲ್ಬುರ್ಗಿ ಜಿಲ್ಲಾಡಳಿತದಿಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಮೆಯನ್ನು ಪುನಃ ನಿರ್ಮಾಣ ಮಾಡಿದದಿದ್ದರೆ ಸಿದ್ದು ಅಭಿಮಾನಿಗಳಿಂದ  ಪಾದಯಾತ್ರೆ

ತಾಂಡವಪುರ ಗ್ರಾಮದ ಶ್ರೀ ಬಸವೇಶ್ವರ ಯುವಕರ ಸಂಘದ ವತಿಯಿಂದ ಅದ್ದೂರಿ ಗಣೇಶೋತ್ಸವ ಕಪಿಲ ನದಿಯಲ್ಲಿ ವಿಸರ್ಜನೆ