ವಿಜಯ ದರ್ಪಣ ನ್ಯೂಸ್….
ಹಂಡಿಗನಾಳ ಮಹಿಳಾ ಡೈರಿ ಕಾಂಗ್ರೆಸ್ ಬೆಂಬಲಿತರ ವಶಕ್ಕೆ

ಶಿಡ್ಲಘಟ್ಟ : ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕಿನ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ
ಚುನಾವಣೆಯಲ್ಲಿ 12 ನಿರ್ದೇಶಕರ ಪೈಕಿ 11 ಸ್ಥಾನಗಳಲ್ಲಿ
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, ಒಂದು ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆ ನಡೆಯಿತು.
ಮಾಜಿ ಸಚಿವ ವಿ.ಮುನಿಯಪ್ಪ ಅವರ ಹುಟ್ಟೂರು ಹಂಡಿಗನಾಳದ ಮಹಿಳಾ ಡೇರಿಯ ಈ ಚುನಾವಣೆ ಜೆಡಿಎಸ್ ಮತ್ತು ಕಾಂಗ್ರೆಸ್ಸಿಗರ ನಡುವೆ ತೀವ್ರ ಪೈಪೋಟಿ, ಪ್ರತಿಷ್ಠೆಗೂಕಾರಣವಾಗಿತ್ತು.
ಬೆಳ್ಳಿಗೆಯಿಂದಲೇ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು.
ಸಂಘದ ಬಳಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ.ಜಾತಿಯ ಅನಸೂಯಮ್ಮ, ಪ.ಪಂಗಡದ ಮುನಿರತ್ನಮ್ಮ, ಹಿಂದುಳಿದ ವರ್ಗ ಎ.ಮೀಸಲು ಕ್ಷೇತ್ರದಿಂದ ಮುನಿರತ್ನಮ್ಮ, ಹಿಂ.ವರ್ಗದ ಬಿ.ಮೀಸಲು ಕ್ಷೇತ್ರದಿಂದ ಪಾರ್ವತಮ್ಮ, ಸಾಮಾನ್ಯ ಕ್ಷೇತ್ರದಿಂದ ಎಸ್.ನಳಿನಾ, ರತ್ನಮ್ಮ, ಕಾಂತಮ್ಮ, ಯಶೋಧಮ್ಮ, ಎನ್.ಜಿ.ಶಾಂತಮ್ಮ, ಅನಸೂಯಮ್ಮ, ಮುನಿರತ್ನಮ್ಮ ಹಾಗೂ ಶಾರದಮ್ಮ ಚುನಾಯಿತರಾದರು.
ಕಾಂಗ್ರೆಸ್ ಬೆಂಬಲಿತರು 11 ಸ್ಥಾನಗಳಲ್ಲಿ ಗೆಲ್ಲುತ್ತಿದ್ದಂತೆ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ,
ಡೇರಿ ಕಾರ್ಯದರ್ಶಿ ರೂಪಾ ಸಹಾಯಕರಾಗಿದ್ದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯರಾಂ, ಅರುಣ್ ಕುಮಾರ್, ಗೋವಿಂದರಾಜು,ಗಜೇಂದ್ರ, ನಾರಾಯಣಸ್ವಾಮಿ, ಮಂಜುನಾಥ್,ಚನ್ನಕೃಷ್ಣಪ್ಪ , ಗೋಪಾಲಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.








