ವಿಜಯ ದರ್ಪಣ ನ್ಯೂಸ್……
ವ್ಯಾಪಾರಸ್ಥರಿಗೆ ದಂಡದ ಎಚ್ಚರಿಕೆ: ₹2 ಕೋಟಿ ದಸರಾ ಅನುದಾನ ಏನಾಯಿತು?

ಮಡಿಕೇರಿ: ದಸರಾ ಹಾಗೂ ಆಯುಧ ಪೂಜೆಯ ಹಿನ್ನೆಲೆಯಲ್ಲಿ ನಗರದ ಮಹದೇವಪೇಟೆಯಲ್ಲಿ ಅಂಗಡಿ ಅಂಗಡಿಗೆ ತೆರಳುತ್ತಿರುವ ನಗರಸಭೆಯ ಅಧಿಕಾರಿಗಳು, ಕಡ್ಡಾಯವಾಗಿ ವಿದ್ಯುತ್ ದೀಪಾಲಂಕಾರ ಮಾಡಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ದೂರುಗಳು ವ್ಯಾಪಾರಸ್ಥರಿಂದ ಕೊಡಗು ಜನ ಅಭಿವೃದ್ಧಿ ಸಮಿತಿಗೆ ದೂರವಾಣಿ ಮೂಲಕ ಬಂದಿವೆ
ದಸರಾ ಮಡಿಕೇರಿಯ ಹೆಮ್ಮೆ ಕೊಡಗಿನ ಸಂಸ್ಕೃತಿಯ ಪ್ರತೀಕ ದಸರಾ ಸಂಭ್ರಮದಲ್ಲಿ ವ್ಯಾಪಾರಸ್ಥರ ಸಹಕಾರ ಪಡೆಯುವ ಬದಲು ದಂಡದ ಎಚ್ಚರಿಕೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವುದು ಏಕೆ?
ಇಲ್ಲಿ ಸಾರ್ವಜನಿಕರ ನೇರ ಪ್ರಶ್ನೆ: ದಸರಾಕ್ಕೆ ಮೀಸಲಾದ ₹2 ಕೋಟಿ ಅನುದಾನ ಎಲ್ಲಿಗೆ ಬಂತು? ಯಾರಿಗೆ ಬಂತು? ದಸರಾ ಆಚರಣೆಗೆ ಅನುದಾನವಿರುವಾಗ ವ್ಯಾಪಾರಸ್ಥರ ಮೇಲೆ ಕಡ್ಡಾಯದ ಒತ್ತಡ ಹೇರುವ ಅಗತ್ಯವೇನು?
ದಸರಾ ಯಶಸ್ವಿಗೊಳಿಸುವುದು ನಗರಸಭೆಯ ಜವಾಬ್ದಾರಿ ವ್ಯಾಪಾರಸ್ಥರು ಸಹಕರಿಸಬೇಕೆಂಬ ನಿರೀಕ್ಷೆ ಸಹಜ. ಸಹಕಾರವನ್ನು ಮನವಿಯ ಮೂಲಕ ಪಡೆಯಬೇಕೇ ಹೊರತು ದಂಡದ ಭಯ ಹುಟ್ಟಿಸುವ ಮೂಲಕವಲ್ಲ ವಿದ್ಯುತ್ ದೀಪಾಲಂಕಾರ ಕಡ್ಡಾಯವೆಂದಾದರೆ ಅದರ ಹಿಂದಿರುವ ನಿಯಮವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು
ಕೊಡಗು ಜನ ಅಭಿವೃದ್ಧಿ ಸಮಿತಿಯ ಆಗ್ರಹವೇನೆಂದರೆ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ನಗರಸಭೆ ಕ್ರಮ ಕೈಗೊಳ್ಳಬೇಕು ದಸರಾ ಹೆಸರಿನಲ್ಲಿ ಅನಗತ್ಯ ಒತ್ತಡ ಹೇರುವ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು.
ದಸರಾ ಹೆಸರಿನಲ್ಲಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡುವ ಮೊದಲು ₹2 ಕೋಟಿ ಅನುದಾನದ ಉದ್ದೇಶ ಮತ್ತು ಬಳಕೆಯ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವುದು ಆಡಳಿತದ ಹೊಣೆಗಾರಿಕೆಯಲ್ಲವೇ?
ದಸರಾ ಜನರ ಹಬ್ಬ ವ್ಯಾಪಾರಸ್ಥರು ಆಡಳಿತದ ಒತ್ತಡಕ್ಕೆ ಒಳಗಾಗುವ ಸಂದರ್ಭವಲ್ಲ ಸಹಕಾರ ಕೇಳಿ ಬೆದರಿಕೆ ಬೇಡ ಇದೇ ಕೊಡಗು ಜನ ಅಭಿವೃದ್ಧಿ ಸಮಿತಿಯ ಸ್ಪಷ್ಟ ನಿಲುವು
ಕೊಡಗು ಜನ ಅಭಿವೃದ್ಧಿ ಸಮಿತಿ











