ವಿಜಯ ದರ್ಪಣ ನ್ಯೂಸ್…..
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ : ರಾಕೇಶ್ ಶೆಟ್ಟಿ ವಿರುದ್ಧ ಹಾವೇರಿ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ

ರಾಣೇಬೆನ್ನೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಖಾಸಗಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಹಾವೇರಿ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಸೋಮವಾರ ನಗರದ ಪಿ.ಬಿ. ರಸ್ತೆಯ ಪಾಂಡುರಂಗ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಕೇಶ್ ಶೆಟ್ಟಿ ಅವರ ಪ್ರತಿಕೃತಿ ದಹಿಸಿ, ಅವರನ್ನು ತಕ್ಷಣ ಬಂಧಿಸುವಂತೆ ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಆದರೆ, ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಸ್ಟಿಂಗ್ ಆಪರೇಷನ್ ಮೂಲಕ ರಾಜ್ಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಕಲಿ ಸ್ಟಿಂಗ್ ಆಪರೇಷನ್ ಪ್ರಕರಣದ ರೂವಾರಿಯನ್ನು ತಕ್ಷಣ ಬಂಧಿಸದೇ ಪ್ರಕರಣದ ಪ್ರಮುಖ ಆರೋಪಿಯನ್ನು ಬಿಟ್ಟು ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ದೂರಿದರು.

ಸ್ಟಿಂಗ್ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಿ, ಅದರ ಹೊಣೆಯನ್ನು ಜೆಡಿಎಸ್ ಮೇಲೆ ಹೊರಿಸಲು ಗೃಹ ಇಲಾಖೆಯ ಮೂಲಕ ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಆರೋಪಿಸಿದ ಅವರು, ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ನಿಂಗಪ್ಪ ಹೊನ್ನಾಳಿ , ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ, ರಾಜ್ಯ ಕಮಿಟಿ ಸದಸ್ಯೆ ಲಕ್ಷ್ಮೀ ಕದರಮಂಡಲಗಿ , ಉಷಾ ಜಾಡಮಲಿ , ಪೂಜಾ ದೈವಜ್ಞ, ಕಸ್ತೂರಿ ಅರ್ಕಸಾಲಿ, ಆಶಾ, ಲಕ್ಷ್ಮಿ, ಪರಮೇಶ ಚಿನ್ನನವರ, ಮಂಜು ಲಿಂಗದಹಳ್ಳಿ, ಶಿವಪುತ್ರಪ್ಪ ನಡುವಿನಮನಿ, ಮಾಲತೇಶ ಬಡಿಗೇರ, ಮೌನೇಶ್ ಬಡಿಗೇರ, ಶಿವು ಕರಿಯಪ್ಪನವರ, ಸುನ್ನಾಖಾನ್, ಇಬ್ರಾಹಿಂ ಯಲಗಚ್ಚಿ, ರವೀಂದ್ರ ಶಿವಪ್ಪನವರ, ಈರಣ್ಣ ಗೌಡ ಕಡೂರು. ಬಸವರಾಜ್ ಕವಲೆತ್ತು.ಉಮೇಶ ತಳವಾರ, ಮಂಜಣ್ಣ ನಲವಾಗಲ, ನಾಗಭೂಷಣ ಹಲಗೇರಿ, ನಾಗರಾಜ ಲಮಾಣಿ, ಮುಕ್ತಿಯಾರ್ ರಾಣೆಬೆನ್ನೂರ, ಹನುಮಂತಪ್ಪ ಬಿಷ್ಟಣ್ಣನವರ, ಕುಮಾರ ಚಲವಾದಿ, ಬೀರೇಶ್ ಬಾರ್ಕಿ, ನಿಂಗಣ್ಣ ಸಣ್ಣಕೊಟ್ರಪ್ಪನವರ, ಗುರುರಾಜ್ ಗೋಜನವರ, ನಟರಾಜ ಕೋಟಿಹಾಳ, ಪರುಶುರಾಮ ಕಸವಾಳ, ಬಸಣ್ಣ ಗಲಗಲಿ, ಶಿವಾನಂದ ಹಲಗೇರಿ, ರುದ್ರಣ್ಣ ಕೋಡಿಹಳ್ಳಿ, ತಿಮ್ಮಣ್ಣ ವೆಂಕಣ್ಣನವರ, ಚಂದ್ರಪ್ಪ ಕ್ಯಾತಮನೂರು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಮುಖಂಡರು ಇದ್ದರು






