--Ads--

ಶ್ರೀ ಕಾಟೇರಮ್ಮ ಕಾಂತಲಕ್ಷ್ಮಿ ದೇವಿಯ 70ನೇ ವರ್ಷದ ಮಹೋತ್ಸವಕ್ಕೆ ಭಕ್ತಸಾಗರ

On: November 12, 2026 4:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀ ಕಾಟೇರಮ್ಮ ಕಾಂತಲಕ್ಷ್ಮಿ ದೇವಿಯ 70ನೇ ವರ್ಷದ ಮಹೋತ್ಸವಕ್ಕೆ ಭಕ್ತಸಾಗರ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ಶ್ರೀ ಕಾಟೇರಮ್ಮ ಕಾಂತಲಕ್ಷ್ಮಿ ದೇವಿಯ 70ನೇ ವರ್ಷದ ಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯುತ್ತಿದೆ.

ಈ ಕುರಿತು ದೇವಾಲಯದ ಪ್ರಧಾನ ಅರ್ಚಕರು ಹಾಗೂ ತಾವರೆಕೆರೆ ಕರಗದ ಪೂಜಾರಿಗಳಾದ ಲಕ್ಷ್ಮೀನಾರಾಯಣ್ ಅವರು ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ದೇವಾಲಯದಲ್ಲಿ ನಿರಂತರವಾಗಿ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ. ಅವರ ನಂತರವೂ ಅದೇ ಸಂಪ್ರದಾಯ ಮತ್ತು ಭಕ್ತಿಪರಂಪರೆಯನ್ನು ಮುಂದುವರಿಸಿಕೊಂಡು ದೇವಿಯ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತಸಮೂಹವಿದ್ದು, ಹೊರರಾಜ್ಯಗಳಿಂದ ಹಾಗೂ ವಿವಿಧ ನಗರ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಕಾಟೇರಮ್ಮ ಕಾಂತಲಕ್ಷ್ಮಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ದೇವಿಯ ಮೇಲಿನ ಭಕ್ತರ ನಂಬಿಕೆ ಹಾಗೂ ಶ್ರದ್ಧೆ ಹೆಚ್ಚುತ್ತಿದ್ದು, ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಭಕ್ತರ ಜನಸಂದಣಿ ಕಂಡುಬರುತ್ತದೆ ಎಂದರು.

ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಯ ಭಾಗವಾಗಿ ದೇವಿಗೆ ಬಲಿದಾನ ನೆರವೇರಿಸಿದ ಬಳಿಕ ಬೆಳಗಿನ ಜಾವ ಸುಮಾರು 1 ಗಂಟೆಗೆ ಭಕ್ತರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದೇವಿಯ ಪ್ರಸಾದ ಸ್ವೀಕರಿಸುವ ಸಲುವಾಗಿ ಮಧ್ಯರಾತ್ರಿಯಿಂದಲೇ ಅಪಾರ ಸಂಖ್ಯೆಯ ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸುತ್ತಾರೆ. ಈ ಸಂಪ್ರದಾಯವು ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ದೇವಾಲಯದ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾವರೆಕೆರೆ ಪೂಜಾರಿ ಮುನಿಯಪ್ಪನವರ ಕುಟುಂಬಸ್ಥರು, ತಾವರೆಕೆರೆ ಗ್ರಾಮಸ್ಥರು ಹಾಗೂ ದೇವಿಯ ಭಕ್ತ ಸಮೂಹ ಹಾಜರಿದ್ದರು.

WhatsApp

Join Now

Telegram

Join Now

Instagram

Join Now