ವಿಜಯ ದರ್ಪಣ ನ್ಯೂಸ್…..
ಹಸಿರು ಪರಿಸರ ನಿರ್ಮಾಣ ಮಾಡಲು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ
ಕ್ಯಾಚ್ ಫೌಂಡೇಶನ್, ಎಸ್‌ಬಿಐ ಫೌಂಡೇಶನ್, ಸಿಎಸ್‌ಆರ್ ಸಂಸ್ಥೆಗಳ ಅನುದಾನದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

ತಾಂಡವಪುರ ನವಂಬರ್ 13 :
ಹಸಿರು ಪರಿಸರ ನಿರ್ಮಾಣ ಮಾಡಲು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಲಲಿತಾದ್ರಿಪುರದ ಬಳಿ ಕ್ಯಾಚ್ ಫೌಂಡೇಶನ್, ಎಸ್‌ಬಿಐ ಮತ್ತು ಎಸ್‌ಬಿಐ ಫೌಂಡೇಶನ್ ಸಿಎಸ್‌ಆರ್ ಸಂಸ್ಥೆಗಳ ಅನುದಾನದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ರವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ರವರು ಹಸಿರು ಪರಿಸರ ನಿರ್ಮಾಣ ಮಾಡಲು ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಇರುವ ನಮ್ಮ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಲಲಿತಾದ್ರಿಪುರದ ಬಳಿ ಕ್ಯಾಚ್ ಫೌಂಡೇಶನ್, ಎಸ್‌ಬಿಐ ಮತ್ತು ಎಸ್‌ಬಿಐ ಫೌಂಡೇಶನ್ ಸಿಎಸ್‌ಆರ್ ಸಂಸ್ಥೆಗಳ ಅನುದಾನದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಾನೂ ಭಾಗಿಯಾಗಿ ಗಿಡ ನೀಡವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಪರಿಸರಕ್ಕೆ ಉತ್ತಮವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು
ಜಪಾನ್‌ನ ಪ್ರಸಿದ್ಧ ‘ಮಿಯಾವಾಕಿ’ ಮಾದರಿಯಲ್ಲಿ ಭಾರತ ವನ ಯೋಜನೆಯಡಿ ಇಂದು 40 ಸಾವಿರ ಗಿಡಗಳನ್ನು ನೆಡಲಾಗಿದೆ. ಸ್ಥಳೀಯ ತಳಿಯ ಗಿಡಗಳಿಗೆ ಆದ್ಯತೆ ನೀಡಿರುವುದು ಯೋಜನೆಯ ವಿಶೇಷತೆಯಾಗಿದೆ. ಮುಂದೆ ಇದು ಸುಂದರವಾದ ನಗರ ಕಾಡಾಗಿ ರೂಪುಗೊಳ್ಳಲಿದ್ದು, ಪರಿಸರ ಸಮತೋಲನ ಕಾಪಾಡುವ ಜೊತೆಗೆ ಹಕ್ಕಿ-ಪಕ್ಷಿಗಳು ಹಾಗೂ ವಿವಿಧ ಪ್ರಾಣಿ ಸಂಕುಲಗಳಿಗೆ ನೈಸರ್ಗಿಕ ಆವಾಸಸ್ಥಾನವಾಗಲಿದೆ. ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಹಾಗೂ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಟ್ಟಿರುವುದು ಎಲ್ಲರೂ ಮೆಚ್ಚುವಂತ ವಿಚಾರ ಎಂದು ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು
ಹಸಿರು ಪರಿಸರ ನಿರ್ಮಾಣ ಮುಂದಿನ ಪೀಳಿಗೆಗೆ ನಾವು ನೀಡಬೇಕಾದ ಅಮೂಲ್ಯ ಕೊಡುಗೆ. ಇಂತಹ ಸಾಮೂಹಿಕ ಪ್ರಯತ್ನಗಳ ಮೂಲಕ ಮೈಸೂರನ್ನು ಇನ್ನಷ್ಟು ಹಸಿರು ಮತ್ತು ಪರಿಸರಸ್ನೇಹಿ ನಗರವನ್ನಾಗಿ ರೂಪಿಸೋಣ. ಎಂದು ಹೇಳಿದರು
ಕೇಂದ್ರ ಸಚಿವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳ ಈ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಶಾಸಕರಾದ ಸಿ ಎನ್ ಮಂಜೇಗೌಡ ಶ್ರೀವತ್ಸ, ಪರಿಸರವಾದಿ ಡಾ. ರಾಧಾಕೃಷ್ಣ ನಾಯರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್‌ಬಿಐ ಫೌಂಡೇಶನ್‌ನ ಪ್ರಧಾನ ಮುಖ್ಯ ವ್ಯವಸ್ಥಾಪಕ ದೀಪಕ್ ಕೌಶಿಕ್ ಹಾಗೂ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಸುಮಾರು 4.5 ಎಕರೆ ಪ್ರದೇಶದಲ್ಲಿ 45,000 ಸ್ಥಳೀಯ ತಳಿಯ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಗಿಡ ನೆಡುವುದು ಮುಖ್ಯವಲ್ಲ ಗಿಡವನ್ನು ನೀರಾಗಿ ಚೆನ್ನಾಗಿ ಬೆಳೆಸುವುದು ಬಹಳ ಮುಖ್ಯ ಗಿಡಗಳನ್ನು ಯಾವ ರೀತಿ ಕಾಪಾಡುತ್ತಾರೆ ಎಂಬುದನ್ನು ಕಾದು ನೋಡೋಣ
@@@@@@@@@@@@@@@@
ಎಲ್ಲ ನಿನ್ನ ಲೀಲೆ

ರೆಪ್ಪೆ ತೆರೆಯಲು ನೀನೆ
ರೆಪ್ಪೆ ಮುಚ್ಚಲು ನೀನೆ
ನೀನೆ ತಾನೇ ನೋಟ ನಿನ್ನಿಂದಲೇನೆ
ಅಳಲು ಸ್ವರವನು ಕೊಟ್ಟೆ
ನಗಲು ದಾರಿಯಕೊಟ್ಟೆ
ನೀನೆ ತಾನೇ ಮಾತೂ ನಿನ್ನಿಂದಲೇನೆ
ಹೃದಯಕೆ ಬಡಿತವನಿಟ್ಟೆ
ಮನಸಿಗೆ ತುಡಿತವನಿಟ್ಟೆ
ನೀನೆ ತಾನೇ ಬೆಸುಗೆ ನಿನ್ನಿಂದಲೇನೆ
ಮೆದುಳಿಗೆ ಗ್ರಹಿಸುವ ಶಕ್ತಿ
ನಾಲಿಗೆ ನುಡಿಯಲು ಶಕ್ತಿ
ನೀನೆ ತಾನೇ ಅರಿವು ನಿನ್ನಿಂದಲೇನೇ
ನೋವಿಗೆ ಸ್ಪಂದಿಸ ಬಲ್ಲೆ
ನೆರವಿಗೆ ಧಾವಿಸ ಬಲ್ಲೆ
ನೀನೆ ತಾನೇ ನಡತೆ ನಿನ್ನಿಂದಲೇನೆ
ರೆಪ್ಪೆ ಮುಚ್ಚುವ ಮುನ್ನ
ಸ್ವರವು ಅಡಗುವ ಮುನ್ನ
ಹೃದಯ ನಿಲ್ಲುವ ಮುನ್ನ
ಒದಗು ನೀನೇ ಮೋಕ್ಷ ನಿನ್ನಿಂದಲೇನೆ
ರಾಧಿಕಾ ವಿಶ್ವನಾಥ್, ಮಡಿಕೇರಿ










