--Ads--

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ  ಅದ್ದೂರಿ ಕನ್ನಡ ರಾಜ್ಯೋತ್ಸವ  ಆಚರಣೆ 

On: November 16, 2026 5:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ  ಅದ್ದೂರಿ ಕನ್ನಡ ರಾಜ್ಯೋತ್ಸವ  ಆಚರಣೆ 

ಚನ್ನರಾಯಪಟ್ಟಣ: ಪಟ್ಟಣದ ರೈಲ್ವೆ ನಿಲ್ದಾಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಸಂಗೊಳ್ಳಿ ರಾಯಣ್ಣ, ಕನ್ನಡಾಂಬೆ ಭಾವ ಚಿತ್ರಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ, ಬಿಜೆಪಿ ಮುಖಂಡ ಚಿದಾನಂದ ಹಾಗೂ ಸನ್ಮಾ ತಿರು ಮತ್ತು ಸಂಘದ ಎಲ್ಲಾ ಸದಸ್ಯರುಗಳಿಂದ ಪುಪ್ಪಾರ್ಚನೆ ಮಾಡಿ. ಭರತ ನಾಟ್ಯದೊಂದಿಗೆ ಉದ್ಘಾಟಿಸಿ ಮಾತನಾಡುತ್ತ ನಾಡು-ನುಡಿ- ನೆಲ – ಜಲ- ಕನ್ನಡ ಭಾಷೆಗೆ ಆದ್ಯತೆ, ಶ್ರದ್ಧೆ ಭಕ್ತಿಭಾವದಿಂದ ಗೌರವ ನೀಡುತ್ತ, ಪ್ರತಿ ವರ್ಷ ಈ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತ ಬಂದಿರುವವರೆಂದರೆ ಅದು ಆಟೋ ಚಾಲಕರು ಮತ್ತು ಮಾಲೀಕರೆನ್ನ ಬಹುದಾಗಿದೆ. ಜೀವನ ಸಾಗಿಸಲು ವೃತ್ತಿ ಜೀವದಾರಿತವಾಗಿ ಆಟೋ ಓಡಿಸಿಕೊಂಡು ಇದ್ದುದರಲ್ಲೆ ತೃಪ್ತಿ ಪಡುತಿರುವುದು ಬಹಳ ಸಂತೋಷವಾಗಿರುತ್ತದೆಂದೆ ರು. ಶ್ರಮ ಜೀವಿಗಳು ಕನ್ನಡಾಂಬೆ ಮಡಿಲ ಮಕ್ಕಳ೦ತೆ ದುಡಿಯುತ್ತಿದ್ದಾರೆ. ಆಟೋ ನಿಲ್ಲುವ ಜಾಗ ಚಿಕ್ಕದಾಗಿರುವುದನ್ನು ಇನ್ನು ಸ್ವಲ್ಪ ವಿಸ್ತಾರವಾಗಿ ಮಾಡಿಕೊಡುವುದಾಗಿ ಆಶ್ವಾ ನೆ ನೀಡಿದರು.

ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು, ಹಾಗೂ ಹೋಗುಗಳಿಗೆ ಸಂಬಂದಿಸಿದಂತೆ ನಾಡ ಹಬ್ಬಗಳ ಬಗ್ಗೆ ಕಾಳಜಿ ವಹಿಸುವರುವುದು ಸಂತೋಷವೆಂದಲ್ಲದೆ. ಸಂಘದ ಸರ್ವ ಸದಸ್ಯರ ಪದ್ಧತಿಯಂತೆ ಜಾತಿ- ಭೇದವಿಲ್ಲದಂತೆ ಒಗ್ಗೂಡಿ ಬರುತ್ತಿರುವಂತವರಿಗೆ ಆರೋಗ್ಯ ತೊಂದರೆಯಿಂದ ಸಾವನಪ್ಪಿದಂತವರಿಗೆ ಸಂಘದಿಂದ ಹತ್ತು ಸಾವಿರ ಹಣ ನೀಡುತ್ತಿದ್ದು, ಜೊತೆಗೆ, ನನ್ನಿಂದ ಹತ್ತು ಸಾವಿರ ಹಣವನ್ನು ನೀಡುತ್ತೇನೆಂದೆಂದರು.

ಮಾಜಿ ಶಾಸಕ ಎಂ.ಎ. ಗೋಪಾಲಸ್ವಾಮಿ ಮತ್ತು ಡಾ. ಮಹೇಶ್ ಮಾತನಾಡಿ ಸನ್ಮಾನಿತರಿಗೆ ಸನ್ಮಾನಿಸಿ ಶಿಕ್ಷಣ: ಕುಮಾರಿ ಲಕ್ಷ್ಮೀ, ಕುಮಾರಿ ಪಲ್ಲವಿ ಕ್ರೈಸ್ತ ಕಿಂಗ್ ಕಾಲೇಜ್ ಅತಿ ಹೆಚ್ಚು ಅಂಕ, ಸಾಹಿತ್ಯ: ಶ್ರೀಮತಿ ಜಯಂತಿ ಚಂದ್ರಶೇಖರ್, ಸಾಹಿತ್ಯ – ಪತ್ರಕರ್ತ: ಪಾಂಡುರಂಗ.ವಿ. ನಿವೃತ್ತ ಶಿಕ್ಷಕ: ಶಿವನಗೌಡ ಪಾಟೀಲ್, ಪ್ರಗತಿ ಪರ ರೈತರು: ರಾಘವೇಂದ್ರ ಸಾವಯವ, ಸಂತು ಜನೀವಾರ, ಸುಭಾಸ್ ಬರಗೂರು – ಕುರಿ ಸಾಗಣಿಕೆ, ಸಿ.ಟಿ.ಕುಮಾರಸ್ವಾಮಿ ಅನಾಥ ಶವಗಳ ಮುಕ್ತಿ ದತ್ತ, ವೆಂಕಟೇಶ್ ನಿವೃತ್ತ ವೀರ ಯೋಧ, ಆಟೋಮ್ಯಾಕಾನಿಕ್ ಹಬೀಬ್, ಮತ್ತಿನ್, ಜಬೀ ಹುಲ್ಲ ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆಯೋಜಕರು ಸಂದೀಪ್, ನವೀನ್ ಕುಮಾರ್, ಸಂಘದ ಅಧ್ಯಕ್ಷ: ಶುಭಾಸ್, ಉಪಾಧ್ಯಕ್ಷ: ಜಗಣ್ಣ, ಕಾರ್ಯದರ್ಶಿ ಮುಕ್ತಾರ್ ಪಾಷ, ಖಜಾಂಚಿ ಚಿಕ್ಕಯ್ಯ ಸ್ವಾಗತ, ವಂದನಾರ್ಪಣೆ: ಜಾವಿದ್ ಪಾಷ ನಡೆಸಿಕೊಟ್ಟರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವತಂತ್ರ ಹೋರಾಟಗಾರರ, ಸಾಹಿತಿ, ಕವಿಗಳ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ್ದು, ಕರಾರಾ ಸಾರಿಗೆ ಸಂಸ್ಥೆಯ ಬಸ್ ಕನ್ನಡದ ಬಸ್ ಎಂದು ಸಿಂಗಾರಗೊಳಿಸಿದ್ದ ಬಸ್ ಕಾರ್ಯಕ್ರಮಕ್ಕೆಬಂದಿದ್ದು ಆಕರ್ಷಕವಾಗಿ ಚಾಲಕ-ನಿರ್ವಹಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

WhatsApp

Join Now

Telegram

Join Now

Instagram

Join Now