--Ads--

ನೊಣವಿನಕೆರೆ ಅಜ್ಜಯ್ಯ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಸುನಿಲ್ ಬೋಸ್

On: November 17, 2026 4:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ನೊಣವಿನಕೆರೆ ಅಜ್ಜಯ್ಯ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಸುನಿಲ್ ಬೋಸ್

ತಾಂಡವಪುರ ನವೆಂಬರ್ 17 :

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ಧೇಶ್ವರ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರ (ಅಜ್ಜಯ್ಯನವರ) ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದವನ್ನು ಪಡೆದರು.

ರಾಜ್ಯದಲ್ಲಿ ನೊಣವಿನಕೆರೆ ಅಜ್ಜಯ್ಯನ ಪೀಠ ಅಂದರೆ ಕೂಡಲೇ ನೆನಪಿಗೆ ಬರುವುದು  ಮುಖ್ಯಮಂತ್ರಿ, ಡಿಕೆ ಶಿವಕುಮಾರ್, ಅವರಿಗೆ ಆರಾಧ್ಯ ದೈವ, ಅವರು ಹೇಳಿದಂತೆ ನಡೆಯುತ್ತದೆ ಎಂಬ ನಂಬಿಕೆ ಅದೇ ರೀತಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಸದ ಸುನಿಲ್ ಬೋಸ್ ಅವರು ಕೂಡ ಮಠಕ್ಕೆ ಭೇಟಿ ನೀಡಿ ನೋಣವಿನ ಕೆರೆಯ ಅಜ್ಜಯ್ಯನ ಆಶೀರ್ವಾದ ಪಡೆದಿರುವುದು ವಿಶೇಷ .

#############################

ಸಾರಥಿ

ಚತುಶ್ರಯ ಭಾಮಿನೀ ಲಯ

ಜಗದ ನೊಗವನು ಹಿಡಿದ ಸಾರಥಿ
ನಮಿಪೆ ಭುವನ ಮನೋಹರ
ಅಮರ ನಾಯಕ ಲೋಕ ರಕ್ಷಕ
ಭಾನು ತೇಜನೆ ಭಾಸ್ಕರ

ಹೇಮ ದೀವಿಗೆ ಹಿಡಿದ ಭೂಪತಿ
ಆದಿ ವಂದಿತ ಶುಭಕರ
ಸೃಜನ ಪಾಲಕ ಧರಣಿಯಧಿಪತಿ
ಸೌರಗಾತ್ರ ಸುಧಾಕರ

ಅರುಣ ಕಿರಣದಿ ಹೊಳೆಯಲವನಿಗೆ
ಮೆರುಗು ತುಂಬುವ ದಿನಕರ
ತಮವ ನೀಗಿಸಿ ಬುವಿಯನುಳಿಸುವ
ಗಗನ ದೀಪ ವಿಭಾಕರ

ಕೋಟಿ ಕರಗಳ ನಮನ ನಿನಗಿದೆ
ಸಕಲ ಭುಜಬಲ ನೇಸರ
ಮುಗಿಲ ಮಾಂತ್ರಿಕ ಧರಣಿಕಾಂತನೆ
ಶರಣು ಇನನೆ ದಿವಾಕರ

ರಾಧಿಕಾ ವಿಶ್ವನಾಥ್, ಮಡಿಕೇರಿ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮಕ್ಕಳಿಗೆ ಆಸ್ತಿ ಗಿಂತ ವಿದ್ಯೆ ನೀಡಿ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ. ಬಸವರಾಜ್.

ಬೋನಿಗೆ ಸೆರೆ ಸಿಕ್ಕಿದ್ದ ಚಿರತೆ ಬೋನಿನ ಲಾಕ್ ಓಪನ್ ಆಗಿ  ಪರಾರಿ ಗ್ರಾಮಸ್ಥರಲ್ಲ ಭಯದ ವಾತಾವರಣ

ಶ್ರೀ ಕಾರ್ಗಳಮ್ಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರೂ ಕೋಟಿ ಅನುದಾನ ನೀಡುವಂತೆ  ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಬೋನು ಇಟ್ಟಿದ್ದು ಹುಲಿ ರಾಯಣ್ಣ ಸೆರೆಗೆ ಸಿಕ್ಕಿದ್ದು ಚಿರತೆ ಇನ್ನು 3-4 ಚಿರತೆ ಅಥವಾ ಹುಲಿ ಇರುವ ಶಂಖೆ

ಕೆ.ಆರ್. ಆಸ್ಪತ್ರೆಯಲ್ಲಿ ನೂತನ ಸುಸಜ್ಜಿತ ಐಸಿಯು ಘಟಕ ಉದ್ಘಾಟಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಎಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ಸ್ ಕಂಪನಿಯ ನೌಕರನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಕಾಯಂ ಉದ್ಯೋಗ ನೀಡಬೇಕು: ಇಲ್ಲವಾದರೆ ಉಗ್ರವಾದ ಹೋರಾಟ ಮುಖಂಡರ ಎಚ್ಚರಿಕೆ