ವಿಜಯ ದರ್ಪಣ ನ್ಯೂಸ್….
ಲೆಕ್ಸಸ್ ಇಂಡಿಯಾ ಗುರುಗ್ರಾಮ್ ನಲ್ಲಿ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಪ್ರಾರಂಭಿಸಿ ಹರಿಯಾಣದಲ್ಲಿ ತನ್ನ ವ್ಯಾಪ್ತಿ ವಿಸ್ತರಣೆ

ಗುರುಗ್ರಾಮ್, ಹರಿಯಾಣ, ನವೆಂಬರ್ 16, 2026:
ಭಾರತದಾದ್ಯಂತ ತನ್ನ ಅತಿಥಿಗಳ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಬ್ರ್ಯಾಂಡ್ನ ನಿರಂತರ ಬದ್ಧತೆಗೆ ಅನುಗುಣವಾಗಿ, ಲೆಕ್ಸಸ್ ಇಂಡಿಯಾ ಇಂದು ಗುರುಗ್ರಾಮ್ ನಲ್ಲಿ ತನ್ನ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ (ಜಿಇಸಿ) ಅನ್ನು ಉದ್ಘಾಟಿಸಿತು.
ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯು ನಿರಂತರವಾಗಿ ಬೆಳೆಯುತ್ತಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಐಷಾರಾಮಿ ಸಂಚಾರ ಆಯ್ಕೆಗಳತ್ತ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಇರುವ ಗ್ರಾಹಕರಿಗೆ ಲೆಕ್ಸಸ್ ಅನುಭವವನ್ನು ಇನ್ನಷ್ಟು ಹತ್ತಿರವಾಗಿಸಲು ಕಂಪನಿಯು ತನ್ನ ಉಪಸ್ಥಿತಿಯನ್ನು ಬಲಪಡಿಸುತ್ತಿದೆ.
ಗುರುಗ್ರಾಮ್ ನಲ್ಲಿರುವ ಈ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಲೆಕ್ಸಸ್ ಭಾರತ್ ಎಂಬ ವ್ಯಾಪಾರದ ಹೆಸರನ್ನು ಹೊಂದಿರುವ ಭಾರತ್ ಟೊಯೋಟಾ ತ್ಸುಶೋ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಬಿಟಿಟಕೆಎಂ) ಸ್ಥಾಪಿಸಿದೆ. ಇದು ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (ಕೆ.ಎಸ್.ಪಿ.ಎಲ್.), ಟೊಯೋಟಾ ತ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟಿಟಿಐಪಿಎಲ್) ಮತ್ತು ಜಪಾನ್ನ ಟೊಯೋಟಾ ತ್ಸುಶೋ ಕಾರ್ಪೊರೇಷನ್ (ಟಿಟಿಸಿ) ನಡುವಿನ ಹೊಸ ಜಂಟಿ ಉದ್ಯಮವಾಗಿದೆ. ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮತ್ತು ಐಷಾರಾಮಿ ವಾಹನ ರೀಟೇಲ್ ಮಾರಾಟದ ಅನುಭವವನ್ನು ಉನ್ನತೀಕರಿಸುವ ಲೆಕ್ಸಸ್ ನ ದೀರ್ಘಕಾಲೀನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಈ ನೂತನ ಕೇಂದ್ರವನ್ನು ಲೆಕ್ಸಸ್ ಭಾರತ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶ್ರೀನಿವಾಸ್ ಚಿವಿಕುಲ ಮತ್ತು ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಶ್ರೀ ಹಿಕಾರು ಇಕೆಯುಚಿ ಅವರು, ಡೀಲರ್ ಪಾಲುದಾರರು, ಲೆಕ್ಸಸ್ ಭಾರತ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಹಿರಿಯ ನಾಯಕರು ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಇತ್ತೀಚೆಗೆ ಅಹಮದಾಬಾದ್, ಸೂರತ್ ಮತ್ತು ಪುಣೆಯಲ್ಲಿ ಆರಂಭವಾದ ಜಿಇಸಿಗಳ ನಂತರ, ಗುರುಗ್ರಾಮ್ ನ ಈ ನೂತನ ಕೇಂದ್ರವು ಲೆಕ್ಸಸ್ ಇಂಡಿಯಾದ ಯೋಜಿತ ಜಾಲ ವಿಸ್ತರಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ದೇಶಾದ್ಯಂತ ಬ್ರ್ಯಾಂಡ್ ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದೆ. ಗುರುಗ್ರಾಮ್ ಭಾರತದ ಪ್ರಮುಖ ವಾಣಿಜ್ಯ ಮತ್ತು ಹಣಕಾಸು ಕೇಂದ್ರಗಳಲ್ಲಿ ಒಂದಾಗಿದ್ದು, ತನ್ನ ಅಭಿವೃದ್ಧಿ ಹೊಂದುತ್ತಿರುವ ಐಟಿ ಮತ್ತು ಹಣಕಾಸು ಸೇವಾ ವಲಯ ಹಾಗೂ ನವದೆಹಲಿಗೆ ಸಮೀಪವಿರುವ ಆಯಕಟ್ಟಿನ ಸ್ಥಳದಿಂದಾಗಿ ಉದ್ಯಮಗಳು, ವೃತ್ತಿಪರರು ಮತ್ತು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಲೆಕ್ಸಸ್ ಇಂಡಿಯಾ ದೇಶಾದ್ಯಂತ ತನ್ನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಜಾಲವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಆ ಮೂಲಕ ಐಷಾರಾಮಿ ಗ್ರಾಹಕರೊಂದಿಗೆ ಆಳವಾದ ಬಾಂಧವ್ಯವನ್ನು ಬೆಳೆಸುವುದರ ಜೊತೆಗೆ ತನ್ನ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆಯನ್ನು ಇನ್ನಷ್ಟು ಸುಲಭಗೊಳಿಸುತ್ತಿದೆ.
“ಸರಳವಾಗಿದ್ದರೂ ಸೊಗಸಾದ” ಮತ್ತು “ಕನಿಷ್ಠವಾಗಿದ್ದರೂ ಶ್ರೀಮಂತ” ಅನುಭವಗಳನ್ನು ನೀಡುವ ಲೆಕ್ಸಸ್ ನ ‘ಯೆಟ್’ ತತ್ವದ ಆಧಾರದ ಮೇಲೆ ವಿನ್ಯಾಸಗೊಳಿಸಲಾದ ಈ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್, ಐಷಾರಾಮಿತನದ ಬಗ್ಗೆ ಲೆಕ್ಸಸ್ ನ ಸಮಕಾಲೀನ ವ್ಯಾಖ್ಯಾನವನ್ನು ಪ್ರತಿನಿಧಿಸುತ್ತದೆ. ಈ ಸ್ಥಳವು ಅತ್ಯಾಧುನಿಕ ವಿನ್ಯಾಸ, ಅಂತರ್ಬೋಧೆಯ ಆತಿಥ್ಯ ಮತ್ತು ಅತ್ಯಂತ ಸೂಕ್ಷ್ಮವಾಗಿ ರೂಪಿಸಲಾದ ಅತಿಥಿ ಅನುಭವಗಳನ್ನು ಮನಮೋಹಕವಾಗಿ ಸಂಯೋಜಿಸಿದ್ದು, ಅತ್ಯಂತ ಸಂತೃಪ್ತಿಕರ ವಾತಾವರಣವನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ, ಈ ಕೇಂದ್ರವು ಅತಿಥಿಗಳ ಅಗತ್ಯಗಳನ್ನು ನೈಜ ಕಾಳಜಿ ಮತ್ತು ಗಮನದಿಂದ ಮುಂಚಿತವಾಗಿಯೇ ಅರಿತು ಸೇವೆ ನೀಡುವ ಜಪಾನಿನ ‘ಒಮೊಟೆನಾಶಿ’ ಮನೋಭಾವವನ್ನು, ಭಾರತದ ಪರಂಪರೆಯ ‘ಅತಿಥಿ ದೇವೋ ಭವ’ ಸಂಪ್ರದಾಯದೊಂದಿಗೆ ಬೆಸೆಯುತ್ತದೆ. ಆ ಮೂಲಕ ಪ್ರತಿಯೊಬ್ಬ ಅತಿಥಿಯು ತಮ್ಮ ಲೆಕ್ಸಸ್ ಪಯಣದುದ್ದಕ್ಕೂ ಆತ್ಮೀಯ ಸ್ವಾಗತ, ಗೌರವ ಮತ್ತು ಕಾಳಜಿಯನ್ನು ಅನುಭವಿಸುವುದನ್ನು ಇದು ಖಚಿತಪಡಿಸುತ್ತದೆ.
ಲೆಕ್ಸಸ್ ಇಂಡಿಯಾದ ಅಧ್ಯಕ್ಷರಾದ ಶ್ರೀ ಹಿಕಾರು ಇಕೆಯುಚಿ ಅವರು, “ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯು ವೇಗವಾಗಿ ವಿಕಸನಗೊಳ್ಳುತ್ತಿದ್ದು, ಗ್ರಾಹಕರು ವಿಶಿಷ್ಟ ಉತ್ಪನ್ನಗಳು, ಅರ್ಥಪೂರ್ಣ ಅನುಭವಗಳು ಮತ್ತು ತಮ್ಮ ಮೌಲ್ಯಗಳಿಗೆ ಸರಿಹೊಂದುವ ಬ್ರ್ಯಾಂಡ್ಗಳನ್ನು ಹೆಚ್ಚಾಗಿ ಬಯಸುತ್ತಿದ್ದಾರೆ. ದೇಶಾದ್ಯಂತ ಇರುವ ಅತಿಥಿಗಳಿಗೆ ಲೆಕ್ಸಸ್ ಅನುಭವವನ್ನು ಇನ್ನಷ್ಟು ಹತ್ತಿರವಾಗಿಸುವುದು ಲೆಕ್ಸಸ್ ನ ಗುರಿಯಾಗಿದೆ. ಗುರುಗ್ರಾಮ್ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಉದ್ಘಾಟನೆಯು ಲೆಕ್ಸಸ್ ಇಂಡಿಯಾ ಪಾಲಿಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಈ ನೂತನ ಗುರುಗ್ರಾಮ್ ಕೇಂದ್ರವು ಉತ್ತರ ಭಾರತದ ಅತ್ಯಂತ ಕ್ರಿಯಾಶೀಲ ಮತ್ತು ವೇಗವಾಗಿ ಬೆಳೆಯುತ್ತಿರುವ ಐಷಾರಾಮಿ ಮಾರುಕಟ್ಟೆಗಳಲ್ಲಿ ಒಂದರೊಂದಿಗೆ ನಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ. ವಿಶಿಷ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಅಸಾಧಾರಣ ಅತಿಥಿ ಅನುಭವಗಳ ಮೂಲಕ ಐಷಾರಾಮಿತನಕ್ಕೆ ಹೊಸ ವ್ಯಾಖ್ಯಾನ ನೀಡುವ ಲೆಕ್ಸಸ್ ನ ಬದ್ಧತೆಗೆ ಗುರುಗ್ರಾಮ್ ನ ಜಾಗತಿಕ ದೃಷ್ಟಿಕೋನ, ನಾವೀನ್ಯತೆಯ ಮನೋಭಾವ, ಮಹತ್ವಾಕಾಂಕ್ಷೆ ಮತ್ತು ಪರಿವರ್ತನೆಯು ನಿಕಟವಾಗಿ ಹೊಂದಿಕೆಯಾಗುತ್ತದೆ. ಕರಕುಶಲತೆ, ನಾವೀನ್ಯತೆ ಮತ್ತು ಒಮೊಟೆನಾಶಿ ಆತಿಥ್ಯಕ್ಕೆ ನಮ್ಮ ಸಮರ್ಪಣೆಯನ್ನು ಪ್ರತಿಬಿಂಬಿಸುವ ಈ ಸ್ಥಳಕ್ಕೆ ಅತಿಥಿಗಳನ್ನು ಸ್ವಾಗತಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ. ಈ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಮೂಲಕ, ಲೆಕ್ಸಸ್ ನ ವಿಶಿಷ್ಟ ಐಷಾರಾಮಿ ಅನುಭವವನ್ನು ನೀಡುವುದರ ಜೊತೆಗೆ ನಮ್ಮ ಅತಿಥಿಗಳೊಂದಿಗೆ ಇನ್ನಷ್ಟು ಆಳವಾದ ಸಂಬಂಧಗಳನ್ನು ಬೆಳೆಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.
ಲೆಕ್ಸಸ್ ಭಾರತ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶ್ರೀನಿವಾಸ್ ಚಿವಿಕುಲ ಅವರು, “ಗುರುಗ್ರಾಮ್ ನಲ್ಲಿ ನಮ್ಮ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ನ ಉದ್ಘಾಟನೆಯು ಭಾರತದಲ್ಲಿ ಲೆಕ್ಸಸ್ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ದೇಶದ ಅತ್ಯಂತ ಪ್ರಗತಿಪರ ನಗರ ಕೇಂದ್ರಗಳಲ್ಲಿ ಒಂದಾಗಿರುವ ಗುರುಗ್ರಾಮ್ ಲೆಕ್ಸಸ್ ಅನುಭವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ವಿಶ್ವದರ್ಜೆಯ ಐಷಾರಾಮಿ ರೀಟೇಲ್ ಮಾರಾಟದ ಗುಣಮಟ್ಟವನ್ನು ನೀಡಲು ಮತ್ತು ವಿಶಿಷ್ಟವಾದ ಲೆಕ್ಸಸ್ ಅನುಭವವನ್ನು ಪ್ರತಿಬಿಂಬಿಸುವ ಅತ್ಯಂತ ವೈಯಕ್ತೀಕರಿಸಿದ, ಅರ್ಥಪೂರ್ಣ ಅತಿಥಿ ಅನುಭವಗಳನ್ನು ಸೃಷ್ಟಿಸಲು ನಾವು ಸದಾ ಬದ್ಧರಾಗಿದ್ದೇವೆ” ಎಂದು ಹೇಳಿದರು.
ಗುರುಗ್ರಾಮ್ ನಲ್ಲಿರುವ ಈ ನೂತನ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಗೆ ಭೇಟಿ ನೀಡುವ ಅತಿಥಿಗಳು ಲೆಕ್ಸಸ್ನ ಐಷಾರಾಮಿ ವಾಹನಗಳನ್ನು ವೀಕ್ಷಿಸಬಹುದು ಹಾಗೂ ಬ್ರ್ಯಾಂಡ್ ನ ಹೆಸರುವಾಸಿ ಕರಕುಶಲತೆ, ಸುಧಾರಿತ ತಂತ್ರಜ್ಞಾನಗಳು ಮತ್ತು ಎಲೆಕ್ಟ್ರಿಫೈಡ್ ಮೊಬಿಲಿಟಿ ಪರಿಹಾರಗಳನ್ನು ನೇರವಾಗಿ ಅನುಭವ ಪಡೆಯಬಹುದು. ಅಲ್ಲದೆ, ಗುರುಗ್ರಾಮ್ ನಲ್ಲಿಇ ಕಾರ್ಯನಿರ್ವಹಿಸುತ್ತಿರುವ ಲೆಕ್ಸಸ್ ಸರ್ವಿಸ್ ಪಾಯಿಂಟ್ನಲ್ಲಿ (ಎಲ್.ಎಸ್.ಪಿ) ತಮ್ಮ ವಾಹನಗಳಿಗೆ ಸೇವೆಯನ್ನು ಸಹ ಪಡೆಯಬಹುದು.
ಪ್ರಸ್ತುತ, ಪ್ರಮುಖ ಐಷಾರಾಮಿ ಮಾರುಕಟ್ಟೆಗಳಲ್ಲಿನ ಗ್ರಾಹಕರಿಗೆ ತನ್ನ ಅತಿಥಿ ಅನುಭವವನ್ನು ಇನ್ನಷ್ಟು ಹತ್ತಿರವಾಗಿಸುವ ನಿರಂತರ ಗಮನದೊಂದಿಗೆ ಲೆಕ್ಸಸ್ ಇಂಡಿಯಾ ಮುಂಬೈ, ನವದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಚಂಡೀಗಢ, ಕೊಚ್ಚಿ, ಅಹಮದಾಬಾದ್, ಸೂರತ್, ಪುಣೆ ಮತ್ತು ಗುರುಗ್ರಾಮ್ ಗಳಲ್ಲಿ ಗೆಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ನಿರ್ವಹಿಸುತ್ತಿದೆ. ಲೆಕ್ಸಸ್ ಇಂಡಿಯಾ ತನ್ನ ಮಾರಾಟದ ನಂತರದ ಸೇವಾ ವ್ಯವಸ್ಥೆಯನ್ನು ಸಹ ಬಲಪಡಿಸುತ್ತಿದೆ. ಗುರುಗ್ರಾಮ್ ದಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸುವುದರ ಜೊತೆಗೆ, ಬ್ರ್ಯಾಂಡ್ 20 ಲೆಕ್ಸಸ್ ಸರ್ವಿಸ್ ಪಾಯಿಂಟ್ (ಎಲ್.ಎಸ್.ಪಿ.) ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳು ಲೆಕ್ಸಸ್ ಗ್ರಾಹಕರಿಗೆ ತಮ್ಮ ವಾಹನ ಮಾಲೀಕತ್ವದ ಪಯಣದುದ್ದಕ್ಕೂ ಹೆಚ್ಚಿನ ಅನುಕೂಲತೆ, ಸುಲಭ ಲಭ್ಯತೆ ಮತ್ತು ಮನಃಶಾಂತಿಯನ್ನು ಖಚಿತಪಡಿಸುತ್ತವೆ.
ಇದಲ್ಲದೆ, ತಡೆರಹಿತ ವಾಹನ ಮಾಲೀಕತ್ವದ ಪಯಣವನ್ನು ಖಚಿತಪಡಿಸಿಕೊಳ್ಳಲು ಲೆಕ್ಸಸ್ ಇಂಡಿಯಾ ಸಮಗ್ರ ಮೌಲ್ಯವರ್ಧಿತ ಸೇವೆಗಳು ಮತ್ತು ಉನ್ನತೀಕರಿಸಿದ ರೋಡ್ಸೈಡ್ ಅಸಿಸ್ಟೆನ್ಸ್ ಸೌಲಭ್ಯಗಳನ್ನು ಒದಗಿಸುತ್ತದೆ. ಇದು ಟೋಯಿಂಗ್, ಟ್ಯಾಕ್ಸಿ ಸೇವೆ ಮತ್ತು ವಾಹನವನ್ನು ಮರಳಿ ತಲುಪಿಸುವಂತಹ ಸೇವೆಗಳನ್ನು ಒಳಗೊಂಡಿರುವ 5-ವರ್ಷಗಳ ರೋಡ್ಸೈಡ್ ಅಸಿಸ್ಟೆನ್ಸ್ (ಆರ್.ಎಸ್.ಎ) ಪ್ಯಾಕೇಜ್ ಅನ್ನು ಒಳಗೊಂಡಿದೆ. ಇದರ ಜೊತೆಗೆ, ಎಲ್ಲಾ ಮಾದರಿಗಳಿಗೆ ಲೆಕ್ಸಸ್ ಇಂಡಿಯಾ 8-ವರ್ಷ/2,00,000 ಕಿ.ಮೀ ವಾಹನ ಮತ್ತು ಹೈಬ್ರಿಡ್ ಬ್ಯಾಟರಿ ವಾರಂಟಿಯ** ಮೂಲಕ ಉನ್ನತ ಮಾಲೀಕತ್ವದ ಅನುಭವವನ್ನು ನೀಡುತ್ತಿದ್ದು, ಮಾಲೀಕತ್ವದ ಪಯಣದುದ್ದಕ್ಕೂ ಹೆಚ್ಚಿನ ಮನಃಶಾಂತಿಯನ್ನು ಒದಗಿಸುತ್ತದೆ. ಅಲ್ಲದೆ, ಆರ್.ಎಕ್ಸ್., ಎನ್.ಎಕ್ಸ್. ಮತ್ತು ಇ.ಎಸ್.ಮಾದರಿಗಳಿಗೆ ಅನ್ವಯವಾಗುವಂತೆ ಕಡಿಮೆ ಇಎಂಐ ಮತ್ತು ಖಾತರಿಯ ಭವಿಷ್ಯದ ಉಳಿಕೆ ಮೌಲ್ಯದೊಂದಿಗೆ ಕೂಡಿರುವ ಅಶ್ಯೂರ್ಡ್ ಬೈ ಬ್ಯಾಕ್ ಪ್ರೋಗ್ರಾಂ ಅನ್ನು ಆರ್ಥಿಕ ಅನುಕೂಲ ಹಾಗೂ ಪ್ರೀಮಿಯಂ ಮಾಲೀಕತ್ವದ ಅನುಭವವನ್ನು ಬಯಸುವ ಅತಿಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್ ಆಯ್ಕೆಗಳೊಂದಿಗೆ ಬರುವ ವಿಶಿಷ್ಟ ಲೆಕ್ಸಸ್ ಲಕ್ಸುರಿ ಕೇರ್ ಸೇವಾ ಪ್ಯಾಕೇಜ್ ಗಳು ಸಹ ಲಭ್ಯವಿವೆ.
**ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ದಯವಿಟ್ಟು ನಿಮ್ಮ ಸ್ಥಳೀಯ ಲೆಕ್ಸಸ್ ಡೀಲರ್ ಅನ್ನು ಸಂಪರ್ಕಿಸಿ ಅಥವಾ ವಾರಂಟಿ ಕೈಪಿಡಿಯನ್ನು ಪರಿಶೀಲಿಸಿ.
About Lexus India:
Lexus launched globally in 1989 with a flagship sedan and a guest experience that helped define the premium automotive industry. In 1998, Lexus introduced the luxury crossover category with the launch of the Lexus RX. The luxury hybrid sales leader, Lexus delivered the world’s first luxury hybrid and has since sold over 3 million hybrid vehicles. A global luxury automotive brand with an unwavering commitment to bold, uncompromising design, exceptional craftsmanship, and exhilarating performance, Lexus has developed its lineup to meet the needs of the next generation of global luxury guests and is currently available in over 90 countries worldwide. Lexus associates, team members across the world, are dedicated to crafting amazing experiences that are uniquely Lexus, and that excite and change the world. Ever since its debut in India in March 2017, Lexus has aimed to craft a better tomorrow and redefine luxury in the world’s fastest-growing major economy. The brand strives to consistently deliver exceptional design and quality to the discerning Indian guest with a portfolio of 5 models. In 2020, Lexus’ presence in the Indian market was further strengthened with the introduction of its first locally produced model, ES 300h and it continues to be the most popular model amidst Lexus’ India line-up. Recently Lexus Inda launched the All-New ES500e, Lexus first Battery Electric Vehicle and All-New ES 350h for the Indian market.
Website: www.lexusindia.co.in
Facebook: LexusIndia
Instagram: @lexus_india









