ವಿಜಯ ದರ್ಪಣ ನ್ಯೂಸ್….
ಎಚಗಳ್ಳಿ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷರಾಗಿ ಗಾಯತ್ರಿ ಹಾಗೂ ಉಪಾಧ್ಯಕ್ಷರಾಗಿ ತಮ್ಮಣ್ಣ ಆಯ್ಕೆ
ತಾಂಡವಪುರ ನವೆಂಬರ್ 17: ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಎಚಗಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಒಪ್ಪಂದ ಪ್ರಕಾರ ಕೊನೆಯ ಅವಧಿಯ ಚುನಾವಣೆಯಲ್ಲಿ ಗೊದ್ದನಪುರ ಮರಳೂರು ಗ್ರಾಮದ ಗಾಯತ್ರಿ ಹಾಗೂ ಉಪಾಧ್ಯಕ್ಷರಾಗಿ ಎಚಗಳ್ಳಿ ಗ್ರಾಮದತಮ್ಮಣ್ಣ ರವರು ಅವಿರಧವಾಗಿ ಆಯ್ಕೆಯಾದರು.
ನೂತನವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಗಾಯತ್ರಿ ಹಾಗೂ ತಮ್ಮಣ್ಣನವರನ್ನು ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಜಿಎಂ ಸೂರಿ ರವರು ಸನ್ಮಾನಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದರು ಹಾಗೂ ಸಂಘಕ್ಕೆ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಕಾರಣಕರ್ತರಾದ ಸಂಘದ ಎಲ್ಲಾ ಸದಸ್ಯರಿಗೂ ಇದಕ್ಕೆ ಸಹಕರಿಸಿದ ಎಲ್ಲಾ ಸಂಘದ ನಿರ್ದೇಶಕರುಗಳಿಗೆ ಅಭಿನಂದನೆ ಸರಿಸುತ್ತೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಿರ್ದೇಶಕರಾದ ಗುರು ಮಹದೇವು ರವಿ, ಮಾದಪ್ಪ ,ಶಿವಕುಮಾರ್, ಮಹದೇವಸ್ವಾಮಿ ,ಮಹದೇವಸ್ವಾಮಿ ಕುಮಾರ್ ಗೋಪಾಲನಾಯಕ ರಾಜಮ್ಮ ಕಾಮರಾಜು ಮಾಲೆಗೌಡರು ಕೃಷ್ಣ ಶಿವಕುಮಾರ್ ಚಂದ್ರೇಗೌಡರು ಈ ಸಂದರ್ಭದಲ್ಲಿ ಹಾಜರಿದ್ದರು
#####@@@@@@@#########
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನ.17 :












