--Ads--

ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿದರೆ ಹೆಚ್ಚು ನಷ್ಟವಾಗುವುದಿಲ್ಲ: ಸಂಸದ ಡಾ.ಕೆ.ಸುಧಾಕರ್‌ ಸಲಹೆ

On: November 19, 2026 9:19 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿದರೆ ಹೆಚ್ಚು ನಷ್ಟವಾಗುವುದಿಲ್ಲ: ಸಂಸದ ಡಾ.ಕೆ.ಸುಧಾಕರ್‌ ಸಲಹೆ

ಮಣ್ಣಿನ ಪರೀಕ್ಷೆ ಮಾಡಿದಾಗ ಮಾತ್ರ ಯಾವ ಬೆಳೆ ಬೆಳೆಯಬಹುದೆಂದು ಗೊತ್ತಾಗುತ್ತದೆ

ಬೆಂಗಳೂರು, ನವೆಂಬರ್‌ 18

ಮಣ್ಣಿನ ಆರೋಗ್ಯ ಕಾರ್ಡ್‌, ಫಸಲ್‌ ಬಿಮಾ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದಿಂದ ರೈತರಿಗೆ ಉಪಯುಕ್ತವಾದ ಹಲವಾರು ಯೋಜನೆಗಳನ್ನು ನೀಡಲಾಗಿದೆ. ಈ ಎಲ್ಲ ಯೋಜನೆಗಳ ಸದುಪಯೋಗವನ್ನು ರೈತರು ಪಡೆಯಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಮನವಿ ಮಾಡಿದರು.

ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಮೇಳದಲ್ಲಿ ಈ ಬಾರಿ ಬರಗಾಲದ ನಿರ್ವಹಣೆಯ ತಂತ್ರಜ್ಞಾನಗಳ ಮಾಹಿತಿಗೆ ಒತ್ತು ನೀಡಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಮೊದಲಾದ ಬಯಲುಸೀಮೆಯ ಜಿಲ್ಲೆಗಳಿಗೆ ಇದು ಅತ್ಯಂತ ಉಪಯುಕ್ತವಾಗಿದೆ. ದೇಹದ ಆರೋಗ್ಯ ಪರೀಕ್ಷೆ ಮಾಡುವಂತೆಯೇ, ಭೂಮಿಯಲ್ಲಿರುವ ಮಣ್ಣಿನ ಪರೀಕ್ಷೆ ಮಾಡಿದಾಗ ಮಾತ್ರ, ಅದರಲ್ಲಿ ಯಾವ ಬೆಳೆಯನ್ನು ಹೇಗೆ ಬೆಳೆಯಬಹುದು ಎಂದು ತಿಳಿಯಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಣ್ಣಿನ ಪರೀಕ್ಷೆಗಾಗಿ ಯೋಜನೆ ತಂದಿದ್ದು, ಮಣ್ಣಿನ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಬಡ್ಡಿ ರಹಿತವಾಗಿ ಸಾಲ ನೀಡುವ ಯೋಜನೆ ಕೂಡ ಇದೆ. ಈ ಯೋಜನೆಗಳ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಹವಾಮಾನ ವೈಪರೀತ್ಯದಿಂದಾಗಿ, ಕಳಪೆ ಬೀಜದಿಂದಾಗಿ, ಮಾರುಕಟ್ಟೆಯಲ್ಲಿನ ದರ ಏರಿಳಿತದಿಂದಾಗಿ ರೈತರಿಗೆ ನಷ್ಟವಾಗುತ್ತದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಫಸಲ್‌ ಬಿಮಾ ಯೋಜನೆ ತಂದಿದ್ದು, ವಿಮೆ ಮಾಡಿಸಿಕೊಂಡ ರೈತರಿಗೆ ಬಹಳ ಲಾಭವಾಗಲಿದೆ. ಇದರ ಪ್ರೀಮಿಯಂ ಬಹಳ ಕಡಿಮೆ ಇದ್ದು, ನಷ್ಟವಾದಾಗ ಉತ್ತಮ ಪರಿಹಾರ ದೊರೆಯುತ್ತದೆ. ದ್ರಾಕ್ಷಿಯನ್ನು ಒಂದು ಎಕರೆಯಲ್ಲಿ ಬೆಳೆಯಲು ಲಕ್ಷಾಂತರ ರೂಪಾಯಿ ಬಂಡವಾಳ ಬೇಕಾಗುತ್ತದೆ. ನಷ್ಟವಾದರೆ ಅದಕ್ಕೂ ಹೆಚ್ಚಿನ ಮೊತ್ತದ ಹಾನಿಯಾಗುತ್ತದೆ. 7,000 ರೂ. ಗೆ ವಿಮೆ ಪ್ರೀಮಿಯಂ ಪಾವತಿಸಿದರೆ ಉತ್ತಮ ಪರಿಹಾರ ಸಿಗುತ್ತದೆ. ಈ ಯೋಜನೆ ರೈತರ ಪಾಲಿಗೆ ಆಶಾಕಿರಣವಾಗಿದ್ದು, ಎಲ್ಲ ರೈತರು ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

WhatsApp

Join Now

Telegram

Join Now

Instagram

Join Now