ವಿಜಯ ದರ್ಪಣ ನ್ಯೂಸ್…
ಹಸುಗೂಸಿಗೆ “ಬುಕ್ ಆಪ್ ರೆಕಾರ್ಡ್ ಪ್ರಶಸ್ತಿ” ಹುಟ್ಟಿದ
8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್

ಶಿಡ್ಲಘಟ್ಟ : ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಆಸ್ಪತ್ರೆಯಲ್ಲಿ 2026ರ ಆಗಸ್ಟ್-30ರಂದು ಜನಿಸಿದ ಈ ಮಗುವಿಗೆ ಹುಟ್ಟಿದ 8ನೇ ದಿನಕ್ಕೆ ಆಧಾರ್ ನೋಂದಣಿ ಮಾಡಿಸಲಾಯಿತು ,12ನೇ ದಿನಕ್ಕೆ ಕುಟುಂಬದ ರೇಷನ್ ಕಾರ್ಡ್‌ಗೆ ಸೇರಿಸಲಾಯಿತು.

ತಾಲ್ಲೂಕಿನ ಜಂಗಮಕೋಟೆಯ ಜಿ.ಕೆ.ರವಿಕುಮಾರ್ ಹಾಗು ವಿ.ದಾಮಿನಿ ದಂಪತಿಯ ಪುತ್ರ ಜೆ.ಆರ್. ಧನುಂಜಯ್ ,ಹುಟ್ಟಿದ ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾನೆ.
ಜನನ ,2026ರ ಆಗಸ್ಟ್ 30 ,ಆಧಾರ್ ನೋಂದಣಿ ಹುಟ್ಟಿದ 8ನೇ ದಿನ ,ರೇಷನ್ ಕಾರ್ಡ್‌ಗೆ ಸೇರ್ಪಡೆ ಹುಟ್ಟಿದ 12ನೇ ದಿನ. ಕುಟುಂಬದ ಮಾಹಿತಿಯ ಪ್ರಕಾರ ಈ ಸಾಧನೆಯನ್ನು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ (ಅಪ್ರಿಷಿಯೇಶನ್ ಅವಾರ್ಡ್), ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗಳು ಗುರುತಿಸಿ ಪ್ರಮಾಣಪತ್ರ ನೀಡಿವೆ.

ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರದಲ್ಲಿ 2026ರ ಸೆಪ್ಟೆಂಬರ್-18, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರದಲ್ಲಿ ಸೆಪ್ಟೆಂಬರ್-19 ಎಂದು ದಿನಾಂಕ ನಮೂದಾಗಿದೆ ,
ಪುಟ್ಟ ಬಾಲಕ ಹಾಗು ತಂದೆ, ತಾಯಿ ‘ಯ ಈ ಸಾಧನೆಗೆ ಸ್ಥಳೀಯರು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.









