--Ads--

ಸೂಕ್ತ ದಾಖಲೆಗಳಿಲ್ಲದೆ ಉಳಿದಿರುವ ಮನೆ ಕಟ್ಟಡಗಳಿಗೆ ಅಧಿಕೃತ ದಾಖಲೆ ಒದಗಿಸಲು ಸರ್ಕಾರ ಜಾರಿ : ತಾ.ಪಂ. ಇಒ ಆರ್.ಹೇಮಾವತಿ

On: November 27, 2026 4:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸೂಕ್ತ ದಾಖಲೆಗಳಿಲ್ಲದೆ ಉಳಿದಿರುವ ಮನೆ ಕಟ್ಟಡಗಳಿಗೆ ಅಧಿಕೃತ ದಾಖಲೆ ಒದಗಿಸಲು ಸರ್ಕಾರ ಜಾರಿ : ತಾ.ಪಂ.ಇಒ ಆರ್.ಹೇಮಾವತಿ

ಶಿಡ್ಲಘಟ್ಟ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಟ್ಟಡ ಮತ್ತು ನಿವೇಶನಗಳಿಗೆ ಅಧಿಕೃತ 11ಎ ಹಾಗೂ 11ಬಿ ಇ-ಸ್ವತ್ತು ದಾಖಲೆ ವಿತರಿಸುವುದು ಯೋಜನೆಯ ಮುಖ್ಯ ಉದ್ದೇಶ ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಯೋಜನೆಯ ಕುರಿತು ಅವರು ಮಾತನಾಡಿದರು.

ಹಲವು ವರ್ಷಗಳಿಂದ ಸೂಕ್ತ ದಾಖಲೆಗಳಿಲ್ಲದೆ ಉಳಿದಿರುವ ಮನೆ, ನಿವೇಶನ, ಪಿತ್ರಾರ್ಜಿತ ಆಸ್ತಿ ಹಾಗೂ ಕೃಷಿ ಜಮೀನಿನಲ್ಲಿರುವ ಕಟ್ಟಡಗಳಿಗೆ ಅಧಿಕೃತ ದಾಖಲೆ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಭೂ ಗ್ಯಾರಂಟಿ–ಇ-ಸ್ವತ್ತು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕೋರಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 26,754 ಆಸ್ತಿಗಳಿದ್ದು, ಮೊದಲ ಹಂತದಲ್ಲಿ 2026ರ ಡಿಸೆಂಬರ್ 31ರೊಳಗೆ 6,689 ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ವಿತರಿಸುವ ಗುರಿ ಹೊಂದಲಾಗಿದೆ ಇದೇ ಗುರಿಯ ಬಗ್ಗೆ ಶಾಸಕರು ಈ ಹಿಂದೆ ಪ್ರಜಾಸೇವಾ ಕಾರ್ಯಕ್ರಮದಲ್ಲಿ ತಿಳಿಸಿದ್ದರು ,ಇ-ಸ್ವತ್ತು ಖಾತೆ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ಸೂಚಸಿದೆ ಎಂದರು.

ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರ್ಕಾರದ ಮಾರ್ಗಸೂಚಿಗಳ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ ನಿಗದಿತ ಕಾಲಮಿತಿಯೊಳಗೆ ಅರ್ಹ ಆಸ್ತಿ ಮಾಲೀಕರಿಗೆ ದಾಖಲೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ
ಎಂದು ಹೇಳಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಆಸ್ತಿ ದಾಖಲೆಗಳನ್ನು ಕ್ರಮಬದ್ಧಗೊಳಿಸಲು 11 ಎ ,ಗ್ರಾಮಠಾಣಾ ವ್ಯಾಪ್ತಿಯಲ್ಲಿ ನೋಂದಾಯಿತ ದಾಖಲೆ ಇರುವ ನಿವೇಶನ ಮತ್ತು ಕಟ್ಟಡಗಳಿಗೆ ದಾಖಲೆ ಇಲ್ಲದ ಕೆಲವು ಕಟ್ಟಡಗಳಿಗೆ ವಿದ್ಯುತ್ ಬಿಲ್ ಸೇರಿದಂತೆ ನಿಗದಿತ ದಾಖಲೆಗಳ ಆಧಾರದ ಮೇಲೆ ಭೂಪರಿವರ್ತನೆ ಮಾಡಿಸಿಕೊಂಡ ಕೃಷಿ ಜಮೀನಿನ ಆಸ್ತಿಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರ ದೃಢೀಕರಿಸಿದ ಹಕ್ಕುಪತ್ರಗಳ ಆಧಾರದ ಮೇಲೆ ,11 ಬಿ ,ಭೂಪರಿವರ್ತನೆ ಮಾಡಿಸದ ಕೃಷಿ ಜಮೀನಿನಲ್ಲಿರುವ ಕಟ್ಟಡ ಮತ್ತು ನಿವೇಶನಗಳಿಗೆ ನಿಯಮಾನುಸಾರವಾಗಿ ದಾಖಲೆಯನ್ನು ಮಾಡಿಕೊಡಲಾಗುವುದು ಎಂದರು.

ಆಸ್ತಿ ಖರೀದಿ, ಮಾರಾಟ, ವರ್ಗಾವಣೆ ಹಾಗೂ ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿ ಇ-ಸ್ವತ್ತು ದಾಖಲೆಗಳು ಮಹತ್ವದ್ದಾಗಿವೆ ಆದ್ದರಿಂದ ಸಾರ್ವಜನಿಕರು ಭೂ ಗ್ಯಾರಂಟಿ–ಇ-ಸ್ವತ್ತು ಅಭಿಯಾನದ ಸದುಪಯೋಗ ಪಡೆದು ತಮ್ಮ ಆಸ್ತಿಗಳಿಗೆ ಅಧಿಕೃತ ದಾಖಲೆ ಮಾಡಿಸಿಕೊಳ್ಳಬೇಕು ಎಂದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಗಂಗಾಭವಾನಿ ಎಫ್.ಪಿ.ಒ. ರೈತ ಷೇರುದಾರರಿಗೆ ಸೂಕ್ಷ್ಮ ಪೋಷಕಾಂಶ ಬಳಕೆ ಕುರಿತು ತರಬೇತಿ ಹಾಗೂ ಕೃಷಿ ಪರಿಕರ ವಿತರಣೆ

ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಶಾಸಕ ಬಿ.ಎನ್.ರವಿಕುಮಾ‌ರ್

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡಾಗ ಮಾತ್ರ ಸಮಾನತೆ ಸಾಧ್ಯ : ತಹಶೀಲ್ದಾರ್ ಗಗನಸಿಂಧು

ಹಸುಗೂಸಿಗೆ “ಬುಕ್ ಆಪ್ ರೆಕಾರ್ಡ್ ಪ್ರಶಸ್ತಿ” ಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಮಫಲಕ ಕೆಡಿಪಿ ಸಭೆಯಲ್ಲಿ ತೆರವು ಖಂಡನೀಯವಾದುದು ಹಾಗು ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ಶಾಸಕ ಬಿ.ಎನ್.ರವಿಕುಮಾ‌ರ್

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ : ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸ್ವಾಮಿ