ವಿಜಯ ದರ್ಪಣ ನ್ಯೂಸ್…..
ಹಿರಿಯ ಯಕ್ಷಗಾನ ಕಲಾವಿದರುಗಳಿಗೆ ಸನ್ಮಾನ
ನಾವು ಹುಟ್ಟಿದ ನಾಡು, ನಾವು ಮರೆಯಬಾರದು, ಎಲ್ಲೆ ಹೋದರು ನಮ್ಮ ನಾಡಿನ ಕುರಿತು ಹೇಳಬೇಕು-ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ
ಬೆಂಗಳೂರು: ರಾಜಾಜಿನಗರ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾಂಗಣದಲ್ಲಿ ಕರಾವಳಿ ಹಿತರಕ್ಷಣಾ ಸಮಿತಿ ಮತ್ತು ಬಹ್ಮಲಿಂಗೇಶ್ವರ ಗೆಳಯರ ಬಳಗದ ವತಿಯಿಂದ 15ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆ ಕಟ್ಟು ನಂದಿ ಮತ್ತು ಕಲಾವಿದರಿಂದ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಯಕ್ಷ ಕವಿ ಪಿ.ವಿ ಆನಂದ ಸಾಲಿಗ್ರಾಮ ವಿರಚಿತ ಮೆಕ್ಕೆ ಕಟ್ಟು ನಂದಿ ಯಕ್ಷಗಾನ ಮತ್ತು ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ.

ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ , ಅಭಯ ಸೇವಾ ಫೌಂಡೇಷನ್ ಅಧ್ಯಕ್ಷ ಎಂ.ಬಿ.ಉಮೇಶ್ ಶೆಟ್ಟಿ, ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ಅಧ್ಯಕ್ಷ ಡಿ.ಬಿ.ಪ್ರತಾಪ್ ಶೆಟ್ಟಿ, ಬ್ರಹ್ಮಲಿಂಗೇಶ್ವರ ಗೆಳಯರ ಬಳಗದ ಅಧ್ಯಕ್ಷ ಮಂಜುನಾಥ್ ಮಾರಣಕಟ್ಟೆರವರು ಜಯಪ್ರಕಾಶ್ ಶೆಟ್ಟಿ, ಮಂಜುನಾಥ್ ರಾವ್, ರಮೇಶ್ ದೇವಾಡಿಗ, ಚಂದ್ರಶೇಖರ್ , ಹರೀಶ್ ಭಟ್ ಧರ್ಮಸ್ಥಳ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹಿರಿಯ ಕಲಾವಿದರುಗಳಿಗೆ ಸನ್ಮಾನಿಸಿದರು.

ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ್ ಗಾಣಿಗ ದಂಪತಿಗಳಿಗೆ ಸನ್ಮಾನಿಸಲಾಯಿತು.
ನಟ ಶೈನ್ ಶೆಟ್ಟಿರವರು ಮಾತನಾಡಿ ರಂಗಭೂಯಿಯಿಂದ ಚಿತ್ರರಂಗಕ್ಕೆ ಬಂದೆ ನಾನು .ನಾವು ಹುಟ್ಟಿದ ನಾಡು, ನಮ್ಮ ಭಾಷೆ ಮರೆಯಬಾರದು ನಾವು ಹೊರದೇಶ, ಹೊರ ರಾಜ್ಯಕ್ಕೆ ಹೋದರು ನಮ್ಮ ನಾಡಿನ ಕುರಿತು ಹೇಳಬೇಕು. ನಮ್ಮತನ ಬಿಟ್ಟುಕೊಡಬಾರದು.
ನಾಡಿನಲ್ಲಿ ಹಲವಾರು ಕಲೆಗಳು ನಾಡಿನ ಇತಿಹಾಸ, ಪುರಾಣ ಪ್ರಸಂಗ ಸಾರುವ ಅಪೂರ್ವವಾದ ಕಲೆಗಳನ್ನು ನಾವು ಕಲಾವಿದರು, ಕಲೆಯನ್ನ ಉಳಿಸಬೇಕು, ಬೆಳಸಬೇಕು.
ನನ್ನ ಚಿತ್ರ ಸ್ಡೂಡಿಯೊ ರಂಗಸ್ಥಳ ಎಂದು ಹೆಸರು ಇಡಲಾಗಿದೆ. ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ಸಹಕಾರ ನೀಡಿ ಎಂದು ಹೇಳಿದರು.
ಆನಂದ್ ಶೆಟ್ಟಿ, ಸೌಂದರ್ಯ ನಾಗರಾಜ್, ವಾಸುದೇವ್ ಐತಾಳ್, ಮಾರುತಿ ರಾಮಪೂಜಾರಿ, ರಂಜೀತ್ ಶೆಟ್ಟಿ, ರವರು ಉಪಸ್ಥಿತರಿದ್ದರು.











