--Ads--

ಕರಾಟೆ ಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಭಾರತದ ಕೀರ್ತಿ ಬೆಳಗಲಿ : ಸೋಮತ್ತನಹಳ್ಳಿ ಚಂದ್ರು 

On: May 17, 2025 1:10 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕರಾಟೆ ಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಭಾರತದ ಕೀರ್ತಿ ಬೆಳಗಲಿ : ಸೋಮತ್ತನಹಳ್ಳಿ ಚಂದ್ರು 

ದೇವನಹಳ್ಳಿ : ಕರಾಟೆ ಆತ್ಮ ರಕ್ಷಣೆಗೆ ಇರುವ ಪ್ರಮುಖ ಪಂದ್ಯಾವಳಿಯಾಗಿದ್ದು, ಕಲಿಕೆಯ ಜೊತೆಗೆ ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಏಕಾಗ್ರತೆ ಶಿಸ್ತು ಹೆಚ್ಚಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಸುವರ್ಣ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಸೋಮತ್ತನಹಳ್ಳಿ ಚಂದ್ರು ಅವರು  ತಿಳಿಸಿರುತ್ತಾರೆ.

ದೇವನಹಳ್ಳಿ ಪಟ್ಟಣದ ಆನಂದ್ ಅವರ ಮನೆಯಲ್ಲಿ  ಮಲೇಷ್ಯಾದಲ್ಲಿ ನಡೆಯುತ್ತಿರುವ ಮುಕ್ತ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಭಾರತದ 6  ಜನ ಕರಾಟೆ ಪಟುಗಳಾದ ಸೂರಜ್ ಗೌಡ, ಶ್ರೀ ವರ್ಷಿಣಿ, ಪವೀಣ್, ನಿತ್ಯ, ವಿನಯ್ ಯಾದವ್, ದಿಗಂತ್ ತೆರಳುತಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಕನ್ನಡ ಪರ ಹೋರಾಟಗಾರರ ಮಕ್ಕಳಾಗಿ ತಾಲೂಕು ಜಿಲ್ಲೆ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಕರಾಟೆಯ ಪಂದ್ಯಾವಳಿಗೆ ಸ್ಪರ್ಧೆ ಮಾಡಲು ತೆರುಳುತ್ತಿರುವುದು ಪ್ರಶಂಸನೀಯ. ವಿದೇಶದಲ್ಲಿ ಸ್ಪರ್ಧೆ ಮಾಡುವ ಕ್ರೀಡಾಪಟುಗಳಿಗೆ ಸುವರ್ಣ ಜನಶಕ್ತಿ ವೇದಿಕೆಯಿಂದ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸುವರ್ಣ ಜನಶಕ್ತಿ ವೇದಿಕೆ ಪದಾಧಿಕಾರಿಗಳಾದ ಗಂಗಾಧರ್, ಶ್ರೀನಿವಾಸ್ ಮೂರ್ತಿ, ಮಂಜಣ್ಣ, ರಾಜಣ್ಣ, ವರುಣ್, ಬಾಲ ಮುರಳಿ, ಹೆಮಾಂತ್, ಕ್ರೀಡಾಭಿಮಾನಿಗಳಾದ ಮುತ್ತು, ಪ್ರಶಾಂತ್, ವೆಂಕಟೇಶ್ ಇತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಪಿಒಪಿ ಗಣೇಶ ವಿಗ್ರಹಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ನಿಷೇಧ, ಜಿಲ್ಲೆಯಾದ್ಯಾಂತ ಪಟಾಕಿ, ಡಿಜೆ ಸಂಪೂರ್ಣ ನಿಷೇಧ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಕರೆ

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳು ವಶ, ಓರ್ವ ಬಂಧನ

ಅಮಾವಾಸ್ಯೆ ಪ್ರಯುಕ್ತ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ವಿಶೇಷ ಪೂಜೆ ಹಾಗೂ ಮಹಾ ಪ್ರತ್ಯಂಗಿರಾ ಹೋಮ

ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಭಾಗವಾಗಿ ಯುವಜನತೆಗೆ ಕ್ವಿಜ್ ಸ್ಪರ್ಧೆ ಆಯೋಜನೆ

ಶಾಸಕ ಶರತ್ ಬಚ್ಚೇಗೌಡರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಅಭಿವೃದ್ಧಿ: 3,78,00,000 ರೂಪಾಯಿ ವೆಚ್ಚದಲ್ಲಿ 12,000 ಅಜೋಲಾ ಘಟಕಗಳ ಸ್ಥಾಪನೆಗೆ ಚಾಲನೆ