--Ads--

ಕುಡಿಯುವ ನೀರಿಗೆ ಆದ್ಯತೆ, ಕಸಕ್ಕೂ ಮುಕ್ತಿ : ಡಿ.ಕೆ.ಶಿವಕುಮಾರ್

On: June 21, 2025 6:01 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕುಡಿಯುವ ನೀರಿಗೆ ಆದ್ಯತೆ, ಕಸಕ್ಕೂ ಮುಕ್ತಿ : ಡಿ.ಕೆ.ಶಿವಕುಮಾರ್

ದೊಡ್ಡಬಳ್ಳಾಪುರ ಬೆಂ.ಗ್ರಾ.ಜೂ,21 : ಎತ್ತಿನಹೊಳೆ ನೀರು ಸಂಗ್ರಹದ ಜಲಾಶಯ ನಿರ್ಮಾಣಕ್ತೆ ಭೂಮಿ ನೀಡುವ ಲಕ್ಕೇನಹಳ್ಳಿ ಭಾಗದ ರೈತರ ಹಿತ ಕಾಪಾಡುವುದಾಗಿ ಉಪ ಮುಖ್ಯಮಂತ್ರಿ ಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.

ದೊಡ್ದಬಳ್ಳಾಪುರ ತಾಲೂಕು ಲಕ್ಕೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಡಿಯುವ ನೀರಿಗೆ ಆದ್ಯತೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 14.5 ಟಿ.ಎಂ.ಸಿ ನೀರನ್ನು ನೀಡಬೇಕಾಗಿದೆ ಹಾಗಾಗಿ ಯಾವುದೇ ತಾಲೂಕಿನ ಕೆರೆಗಳನ್ನು ತುಂಬಿಸಬಾರದು.

ಅದಕ್ಕಿಂತ ಮೊದಲು ಲಕ್ಕೇನಹಳ್ಳಿ ಭಾಗದಲ್ಲಿ ಸಮತೋಲನ ಜಲಾಶಯ ಆಗುವುದರಿಂದ ನಿಮ್ಮ ಬೇಡಿಕೆಯ ಕೆರೆಗಳನ್ನು ತುಂಬಿಸಲು ವಿಶೇಷ ಗಮನ ಹರಿಸಲಾಗುವುದು.

ಈ ಭಾಗದ ಪ್ರಮುಖ ಸಮಸ್ಯೆಯಾದ ಕಸ ವಿಲೇವಾರಿಗೆ ಪರಿಹಾರ ಕಂಡುಕೊಳ್ಳಲಾಗುವುದು ಕಸ ವೈಜ್ಞಾನಿಕ ವಿಲೇವಾರಿಗೆ ಒಂದು ದಿನದ ಕಸವನ್ನು ಮೂರು ದಿನದಲ್ಲಿ ಸುಡಲಾಗುವುದು ಅದರಿಂದ ಗ್ಯಾಸ್ ಕರೆಂಟ್ ಉತ್ಪಾದನೆ ಮಾಡಲಾಗುವುದು,

ಈಗಾಗಲೇ ನಗರದ ಒಳಗೆ ಕಸ ಸುಡುವ ಮೂಲಕ ಯಾವುದೇ ರೀತಿಯ ವಾಸನೆ ಪರಿಸರ ಮಾಲಿನ್ಯ ಆಗದಂತೆ ಕಸ ವಿಲೇವಾರಿ ತಂತ್ರಜ್ಞಾನ ಗಳನ್ನು ಕೆಲ ನಗರಗಳಲ್ಲಿ ಚಾಲ್ತಿಯಲ್ಲಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಎತ್ತಿನ ಹೊಳೆ ಯೋಜನೆಗೆ ಜಮೀನು, ಮನೆ ಕಳೆದುಕೊಳ್ಳುವ ರೈತರಿಗೆ ಗರಿಷ್ಠ ಪರಿಹಾರವನ್ನು ಒಂದು ತಿಂಗಳೊಳಗಾಗಿ ನೀಡಬೇಕು ಹಾಗೂ ಭೂಮಿ ಕಳೆದುಕೊಳ್ಳುವ ರೈತರಿಗೆ ಕನಿಷ್ಟ ಎರಡು ಎಕರೆ ಭೊಮಿಯನ್ನು ಲಭ್ಯವಿರುವ ಕಡೆ ನೀಡಬೇಕು ಎಂದರು.

ಶಾಸಕ ಧೀರಜ್ ಮುನಿರಾಜು ಜಲಾಶಯ ನಿರ್ಮಾಣದಿಂದ ಗ್ರಾಮಗಳು ಮುಳುಗಡೆ ಆಗದಂತೆ ಸಹಕರಿಸಿ ಭಾಧಿತರಾಗುವ ರೈತರ ನೆರವಿಗೆ‌ ಸರ್ಕಾರ ನಿಲ್ಲಬೇಕೆಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಮುಖಂಡರುಗಳು, ಅಧಿಕಾರಿಗಳು ಸಾರ್ವಜನಿಕರು ಇದ್ದರು.

WhatsApp

Join Now

Telegram

Join Now

Instagram

Join Now