--Ads--

ವಿದ್ಯಾವಂತರಾಗಲು ಸಹನೆ, ಶಿಸ್ತು ಮತ್ತು ಸಂಸ್ಕಾರ ಬೆಳೆಸಿಕೊಳ್ಳುವುದು ಮುಖ್ಯ

On: September 10, 2025 3:05 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಿದ್ಯಾವಂತರಾಗಲು ಸಹನೆ, ಶಿಸ್ತು ಮತ್ತು ಸಂಸ್ಕಾರ ಬೆಳೆಸಿಕೊಳ್ಳುವುದು ಮುಖ್ಯ

ಶಿಡ್ಲಘಟ್ಟ : ಪುಸ್ತಕವೇ ನಿಜವಾದ ಸ್ನೇಹಿತ ಜ್ಞಾನ, ಸಂಸ್ಕೃತಿ, ಭಾವನೆಗಳನ್ನೆಲ್ಲ ಪುಸ್ತಕದಿಂದಲೇ ಪಡೆಯಬಹುದು ಆದರೆ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ನಿಜವಾದ ವಿದ್ಯಾವಂತರಾಗಲು ಸಹನೆ, ಶಿಸ್ತು ಮತ್ತು ಸಂಸ್ಕಾರ ಬೆಳೆಸಿಕೊಳ್ಳುವುದು ಮುಖ್ಯ ಎಂದು ಪಿಯು ಉಪ ನಿರ್ದೇಶಕ ಆದಿಶೇಷರಾವ್‌ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಫ್ರೆಷರ್ಸ್ ಡೇ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಾಂಶುಪಾಲ ವೆಂಕಟಶಿವರೆಡ್ಡಿ ಮಾತನಾಡಿ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸಲು ನಿರಂತರ ಪರಿಶ್ರಮ ಅಗತ್ಯ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಮೊಬೈಲ್ ಅನ್ನು ಪಾಸಿಟಿವ್ ರೀತಿಯಲ್ಲಿ ಉಪಯೋಗಿಸಬೇಕು ಪ್ರತಿದಿನ ಕನಿಷ್ಠ ಆರು ಗಂಟೆ ಓದಿದರೆ ಉತ್ತಮ ಫಲಿತಾಂಶವನ್ನು ಸಾಧಿಸಬಹುದು ಎಂದರು.

ಇದೇ ವೇಳೆ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಸನ್ಮಾನ ಸಲ್ಲಿಸಲಾಯಿತು. ಜೊತೆಗೆ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ಫ್ರೆಷರ್ಸ್ ಡೇ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಹಾಡು, ಕಾವ್ಯ ಪಠಣ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಹಿರಿಯರು ಹಾಗೂ ಹೊಸ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮಾಡಿಕೊಂಡು ಸ್ನೇಹದ ಬಾಂಧವ್ಯ ಬೆಳೆಸಿಕೊಂಡರು.

ಕಾಲೇಜು ಆವರಣ ಹಬ್ಬದ ವಾತಾವರಣ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಎಚ್.ಸಿ.ಮುನಿರಾಜು, ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಯ್ಯ, ಉಪನ್ಯಾಸಕರಾದ ಶ್ರೀ ಕೃಷ್ಣ ಪರಮಾತ್ಮ,ಬಾಬಾಜಾನ್, ನರಸಿಂಹರೆಡ್ಡಿ,ನಾಗಾರ್ಜುನ, ಧನುಷ್ ರೆಡ್ಡಿ, ವೈಷ್ಣವಿ,ಶ್ರೀಧ‌ರ್, ಶಾಂತ,ನಯಿದಾ ಬೇಗಂ,ರಾಜೇಶ್,ನಾಗವೇಣಿ, ನವೀನ್, ಚಂದ್ರಶೇಖರ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now