--Ads--

ಸಂಕ್ರಾತಿ  ವ್ಯಾಪಾರ ಭರಾಟೆ ಹಬ್ಬಕ್ಕೆ ಸಿದ್ಧತೆ ಜೋರು

On: January 14, 2026 4:41 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್..,.

ಸಂಕ್ರಾತಿ  ವ್ಯಾಪಾರ ಭರಾಟೆ ಹಬ್ಬಕ್ಕೆ ಸಿದ್ಧತೆ ಜೋರು

ವಿಜಯಪುರ,ದೇವನಹಳ್ಳಿ ತಾಲ್ಲೂಕು : ಪ್ರಸ್ತಕ ಸಾಲಿನ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬಕ್ಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ ಮಂಗಳವಾರ ವಿಜಯಪುರ ಪಟ್ಟಣದ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ, ಹೂವಿನ ಮಾರಾಟ ಜೋರಾಗಿ ಕಂಡು ಬಂತು. ಆದರೆ ಹೂವಿನ ಬೆಲೆಗಳು ಗಗನ ಮುಖಿಯಾಗಿದೆ.

ಒಂದು ಕೆ.ಜಿ ಗೆ ಕನಕಾಂಬರ ₹1,200 , ಮಲ್ಲಿಗೆ ₹1,600, ಸೇವಂತಿಗೆ ₹120, ರೋಜಾ ₹150, ಚೆಂಡು ಹೂವು ₹40, ಕಾಕಡ ₹800ಗೆ ಮಾರಾಟವಾದವು.

ವಿಜಯಪುರ ಪಟ್ಟಣದ ಶಿವಗಣೇಶ ವೃತ್ತ, ಹಳೆ ಸರ್ಕಾರಿ ಆಸ್ಪತ್ರೆ ರಸ್ತೆ, ಬಸ್ ನಿಲ್ದಾಣ, ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ರಸ್ತೆ , ಗಾಂಧಿ ಚೌಕ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಭರಾಟೆ ಜೋರಾಗಿತ್ತು. ಶಿವಗಣೇಶ ಸರ್ಕಲ್‌ನಲ್ಲಿ ಕಬ್ಬು ಮತ್ತು ಕಡಲೆಕಾಯಿ, ಅವರೆಕಾಯಿ ರಾಶಿಗಟ್ಟಲೇ ತಂದಿಡಲಾಗಿತ್ತು. ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ತಾವು ತಂದಿದ್ದ ವಸ್ತುಗಳ ರಾಶಿ ಹಾಕಿಕೊಂಡು ಗ್ರಾಹಕರನ್ನು ಸೆಳೆಯುವ ಕಸರತ್ತು ನಡೆಸಿದ್ದರು.

ಬಾಗಿನ ಸಾಮಾಗ್ರಿಗಳ ಜತೆಗೆ ಎಳ್ಳು, ಅಚ್ಚು ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆ, ಎಳ್ಳು-ಬೆಲ್ಲ ಮಿಶ್ರಣ ಮಾಡಿದ ಪ್ಯಾಕೆಟ್‌ಗೆ ಬೇಡಿಕೆ ಇತ್ತು. ಹಬ್ಬದ ಖರೀದಿಗೆ ಬಂದ ಜನರ ದಟ್ಟಣೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಮಾರುಕಟ್ಟೆಯಲ್ಲಿ ಜೋಡಿ ಕಬ್ಬು ₹100 ರಿಂದ ₹120 ರವರೆಗೆ ಮಾರಾಟವಾಗುತ್ತಿತ್ತು ಕಡಲೆಕಾಯಿ ಕೆ.ಜಿಗೆ ₹100, 2.5 ಕೆ.ಜಿ ಅವರೆಕಾಯಿ ₹100, ಗೆಣಸು ಕೆ.ಜಿಗೆ ₹50 ಇದ್ದರೆ ಹೂವಿನ ಬೆಲೆ ಸ್ವಲ್ಪ ಏರಿಕೆಯಾಗಿತ್ತು ಇನ್ನು ಹಣ್ಣುಗಳಾದ ದಾಳಿಂಬೆ ಕೆ.ಜಿ ₹140, ಸೇಬು ₹180, ಮೂಸಂಬಿ ₹100, ದ್ರಾಕ್ಷಿ ₹80, ಏಲಕ್ಕಿ ಬಾಳೆ ಹಣ್ಣು ₹60, ಅನಾನಸ್ ₹70 ಗಳಂತೆ ಮಾರಾಟವಾಗುತ್ತಿದ್ದವು.

WhatsApp

Join Now

Telegram

Join Now

Instagram

Join Now