ಮೈಸೂರು ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮಾರುಕಟ್ಟೆಯಲ್ಲಿ ಜನ ಜಂಗುಳಿ, ದೇವಾಲಯಗಳಲ್ಲಿ ವಿಶೇಷ ಪೂಜೆ

ವಿಜಯ ದರ್ಪಣ ನ್ಯೂಸ್….

ಮೈಸೂರು ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮಾರುಕಟ್ಟೆಯಲ್ಲಿ ಜನ ಜಂಗುಳಿ, ದೇವಾಲಯಗಳಲ್ಲಿ ವಿಶೇಷ ಪೂಜೆ

ತಾಂಡವಪುರ ಜನವರಿ 14 ಮೈಸೂರು ಜಿಲ್ಲೆಯಲ್ಲಿ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಕರ ಸಂಕ್ರಾಂತಿ ಹಬ್ಬಕ್ಕೆ ಸಕಲ ರೀತಿಯಲ್ಲಿಯೂ ಸಜ್ಜಾಗಿದ್ದು ದೇವಾಲಯಗಳಲ್ಲಿ ವಿಶೇಷಪೂಜೆ ಸಿದ್ಧತೆ ಕೈಗೊಂಡಿದ್ದರೆ, ಮಾರುಕಟ್ಟೆಗಳಲ್ಲಿ ಹಬ್ಬದ ಪ್ರಯುಕ್ತಜನಜಂಗುಳಿಯ ಜಾತ್ರೆಯೊಂದಿಗೆ ಮಕರ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜಾಗಿದ್ದಾರೆ

ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ, ಗನ್‌ ಹೌಸ್‌ ಸೇರಿ ಮೊದಲಾದ ಕಡೆಗಳಲ್ಲಿ ಕೊಳ್ಳಲು ಜನಜಾತ್ರೆ ಸೇರಿ ಗಮನ ಸೆಳೆದರು. ಕಬ್ಬು ಹಾಗೂ ಹೂವಿಗೆ ಬಾರಿ ಬೇಡಿಕೆ ಹೆಚ್ಚಿದ್ದರೆ, ಎಳ್ಳು, ಬೆಲ್ಲ, ಕಡಲೆ, ಒಣ ಕೊಬ್ಬರಿ, ಕಡಲೇಕಾಯಿ ಮಿಶ್ರಣವನ್ನು ವಿನಿಮಯ ಮಾಡಿಕೊಂಡು “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂದು ಶುಭ ಹಾರೈಸಲಾಗುತ್ತದೆ.

ಸಿದ್ದಲಿಂಗಪುರ ಸೇರಿ ಮೊದಲಾದ ಸ್ಥಳಗಳಲ್ಲಿ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಅಲಂಕರಿಸಿದ ದನ-ಕರುಗಳನ್ನು ಅದರ ಮೇಲೆ ಹಾರಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಜನರು ಸಂಕ್ರಾಂತಿ ಸಂಭ್ರಮಿಸುತ್ತಾರೆ. ಚಾಮುಂಡಿ ಬೆಟ್ಟದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ. ಮಾತ್ರವಲ್ಲದೆ ನಗರದ ವಿವಿಧ ದೇವಾಲಯಗಳಲ್ಲಿಯೂ ಸಂಕ್ರಾಂತಿ ಅಂಗವಾಗಿ ವಿಶೇಷಪೂಜೆ, ಅರ್ಚನೆ, ಅಭಿಷೇಕ ಆಯೋಜಿಸಿಲಾಗಿದೆ.

ನಂಜನಗೂಡು ದಕ್ಷಿಣ ಕಾಶಿ ಶ್ರೀಕಂಠೇಶ್ವರ ಚಿಕ್ಕಯ್ಯನ ಛತ್ರ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯ ಎದುನಾಡು ಗ್ರಾಮದ ಮಾದೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ದೇವಾಲಯಗಳಲ್ಲೂ ಹಾಗೂ ವಿವಿಧ ದೇವಾಲಯಗಳಲ್ಲಿ ಗೋ ಪೂಜೆ (ಜಾನುವಾರುಗಳ ಪೂಜೆ) ಮಾಡಿ ಪ್ರಸಾದ ವಿತರಣೆಗೂ ಸಿದ್ದತೆ ಮಾಡಿಕೊಂಡಿದ್ದಾರೆ.

ಶರಣರ ಇತಿಹಾಸ ಹಾಗೂ ವಚನಗಳ ಅಧ್ಯಯನ ಮಾಡಬೇಕಾಗಿದೆ.
ತಾಲೂಕು ಕಚೇರಿಯಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

ತಾಂಡವಪುರ ಜನವರಿ 14 12ನೇ ಶತಮಾನ ಬಹಳ ಪ್ರಸಿದ್ಧಿ ಪಡೆದಿರುವ ಶತಮಾನವಾಗಿದೆ. ಹಲವಾರು ಶರಣರು ವಚನ ಸಾಹಿತ್ಯಗಳನ್ನು ಕೊಡುಗೆ ನೀಡಿದ್ದಾರೆ. ಶರಣರ ಇತಿಹಾಸ ಹಾಗೂ ವಚನಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಬಸವ ಯೋಗಿ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜದ ಸಂಘಟನೆ ವತಿಯಿಂದ ಬುಧವಾರ ನಂಜನಗೂಡು ತಾಲೂಕು ಕಚೇರಿ ಆವರಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಾ ಸಿದ್ದರಾಮೇಶ್ವರರು 1840 ವಚನಗಳನ್ನು ರಚನೆ ಮಾಡಿದ್ದರು. ಆದರೆ ವಚನಗಳು ಸರಿಯಾಗಿ ಸಿಗಲಿಲ್ಲ. ಇತ್ತೀಚೆಗೆ 23,000 ವಚನಗಳು ಸಿಕ್ಕಿದ್ದು ಇದರಲ್ಲಿ ಸಿಂಹ ಪಾಲು ಸಿದ್ದರಾಮೇಶ್ವರ ರವರದ್ದಾಗಿದೆ. ಮೂಲತಹ ಮರಾಠಿಗರಾಗಿದ್ದರು ಕೂಡ ವಚನಗಳನ್ನು ಕನ್ನಡದಲ್ಲಿ ರಚನೆ ಮಾಡಿದ್ದು, ಯಾವುದೇ ಶರಣರು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದರು.

ಬಳಿಕ ತಾಲೂಕು ದಂಡಾಧಿಕಾರಿ ಶಿವಕುಮಾರ್ ಹಾಸನೂರು ಮಾತನಾಡಿ, 12ನೇ ಶತಮಾನದಲ್ಲಿ ಹಲವಾರು ವಚನಕಾರರು ಹಾಗೂ ಸಂತ ಶ್ರೇಷ್ಠರು ಹುಟ್ಟಿಕೊಂಡಿರುವ ಕಾಲವಾಗಿದೆ. ಪ್ರಸ್ತುತ 21ನೇ ಶತಮಾನದಲ್ಲಿ ವಚನಗಳಿಗೆ ಮಹತ್ವ ಬಂದಿದೆ. ಶರಣರ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಭೋವಿ ಸಂಘದ ಅಧ್ಯಕ್ಷ ಬಾಲಾಜಿ, ಗೌರವಾಧ್ಯಕ್ಷ ಮಹಾದೇವ, ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಲಕ್ಷ್ಮಣ ಭೋವಿ, ಹರೀಶ್ ಕುಮಾರ್, ಕಾಳಪ್ಪ, ಶಿವರಾಜು, ಪಾಪಣ್ಣ ಮಣಿಕಂಠ ಸ್ವಾಮಿ ನರಸಿಂಹ ಉಮೇಶ್ ಲಿಂಗರಾಜು ತಿಮ್ಮರಸು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಜನವರಿ 27 28ರಂದು ತಾಂಡವಪುರದಲ್ಲಿ ಗ್ರಾಮದೇವತೆ ಅಗ್ನಿತ್ರಾಂಬ ಮಾರಮ್ಮನವರ ಜಾತ್ರೆ

ತಾಂಡವಪುರ ಜನವರಿ 14 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಗ್ರಾಮದೇವತೆ ಅಗ್ನಿತ್ರಾಂಬ ಮಾರಮ್ಮನವರ ಜಾತ್ರೆ ಮಹೋತ್ಸವ ಇದೇ ತಿಂಗಳು ಜನವರಿ 27 ಮಂಗಳವಾರ 28ರಂದು ಬುಧವಾರ ಬಹಳ ವಿಜೃಂಭಣೆಯಿಂದ ಜರುಗಲಿದೆ

ಈ ಗ್ರಾಮ ದೇವತೆ ಹಬ್ಬವನ್ನು ತಾಂಡವಪುರ ಬಂಚಳ್ಳಿ ಹುಂಡಿ ಗ್ರಾಮದ ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದು ಮಂಗಳವಾರ ರಾತ್ರಿ ಕೊಂಡೋತ್ಸವ ಬುದುವಾರ ತಂಪಿನ ಪೂಜೆ ನೆರವೇರಲಿದ್ದು ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಎಚ್ಚರ ಸಂಖ್ಯೆಯಲ್ಲಿ ಬಂದು ದೇವಿಗೆ ಪೂಜಿ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಾಂಡವಪುರ ಬಂಚಳ್ಳಿ ಹುಂಡಿ ಗ್ರಾಮದ ಯಜಮಾನರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ