ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕಿನೆಡೆ ಚಿಂತಿಸಲು ಬೃಹತ್ ಸಮಾವೇಶ ಆಯೋಜನೆ: ಕೋಡಿಹಳ್ಳಿ ಚಂದ್ರಶೇಖರ್ 

ವಿಜಯ ದರ್ಪಣ ನ್ಯೂಸ್…..

ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕಿನೆಡೆ ಚಿಂತಿಸಲು ಬೃಹತ್ ಸಮಾವೇಶ ಆಯೋಜನೆ: ಕೋಡಿಹಳ್ಳಿ ಚಂದ್ರಶೇಖರ್

ಶಿಡ್ಲಘಟ್ಟ : ಹೆಚ್ಚು ಹಣ ಖರ್ಚು ಮಾಡಬಲ್ಲವನು ಅಭ್ಯರ್ಥಿಯಾಗಲಿಕ್ಕೆ ಯೋಗ್ಯ ಎಂದು ರಾಜಕೀಯ ಪಕ್ಷಗಳು ತೀರ್ಮಾನಕ್ಕೆ ಬಂದಿವೆ ಗೆಲ್ಲಲು ಎಷ್ಟು ಬಂಡವಾಳ ಹಾಕಬಲ್ಲ, ಧರ್ಮ, ಜಾತಿಯನ್ನು ಹೇಗೆಲ್ಲಾ ಪ್ರಚೋದಿಸಬಲ್ಲ ಎಂಬುದು ಮಾನದಂಡವಾಗಿದೆ ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕಿನೆಡೆ ಚಿಂತಿಸಲು ಮಾರ್ಚ್ ಕೊನೆಯಲ್ಲಿ ಕಲ್ಬುರ್ಗಿಯಲ್ಲಿ ರೈತ ಸಂಘದಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದ ವಾಯುಪುತ್ರ ಹೋಟೆಲ್ ಪಕ್ಕದ ಶ್ರೀರಾಮ ಪ್ಯಾಲೆಸ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ “ಮಣ್ಣಿನ ಆರೋಗ್ಯ ಮತ್ತು ರೈತರ ಭೂಮಿ ರೈತರಿಂದ ಕಳೆದುಹೋಗುತ್ತಿರುವ ಬಗ್ಗೆ” ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.

ರೈತರಿಂದ ನೇರವಾಗಿ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡಲು ಹೊರಟಿರುವುದು 2013 ರ ಭೂಸ್ವಾಧೀನ ಕಾಯ್ದೆಯ ವಿರುದ್ಧ ನಡವಳಿಕೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರೋಧಪಕ್ಷದಲ್ಲಿದ್ದಾಗ ಇದನ್ನು ವಿರೋಧಿಸಿದ್ದವರು, ಈಗ ಇದನ್ನು ಮುಂದುವರೆಸಿದ್ದಾರೆ ರಾಜಕೀಯ ಉದ್ದೇಶದಲ್ಲಿ ಅವರು ಅನ್ನದಾತನನ್ನು ಕಡೆಗಣಿಸಿದ್ದಾರೆ ಇದರಿಂದ ಕೃಷಿ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದು ರೈತರು ಕಳೆದುಹೋಗುತ್ತಿದ್ದಾರೆ ಎಂದು ಹೇಳಿದರು.

ಗಾಂಧಿಯ ಹೆಸರನ್ನು ತೆಗೆದು ರಾಮನ ಹೆಸರನ್ನು ಇಡುವುದರಿಂದ ಕ್ರಾಂತಿಯಾಗುತ್ತದೆ ಎಂಬ ಭ್ರಮೆಯಿದ್ದರೆ ಅದು ಅವರ ಮೂರ್ಖತನ ಯೋಜನೆಯ ಮುಖ್ಯ ಉದ್ದೇಶ ದುಡಿಯುವ ವರ್ಗಕ್ಕೆ ನೆರವಾಗಬೇಕು ಮತ್ತು ಹೆಚ್ಚು ಆರ್ಥಿಕ ಸಹಾಯ ಸಿಗುವಂತಿರಬೇಕು ಈ ಯೋಜನೆಯನ್ನು ವಿರೋಧಿಸುತ್ತಿರುವವರು ಯಾವುದೇ ಪರ್ಯಾಯ ಕಾರ್ಯಕ್ರಮ ರೂಪಿಸುತ್ತಿದ್ದಾರೆಯೇ ಎಂದು ನೋಡಿದರೆ ಅದೂ ಇಲ್ಲ ಒಟ್ಟಾರೆ ಎರಡೂ ಪಕ್ಷಗಳು ಬಡವರ, ಶ್ರಮಿಕರನ್ನು ಮೇಲೆತ್ತುವ ಬಗ್ಗೆ ಚಿಂತಿಸದೇ ಯೋಜನೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ದುರ್ದೈವ ಎಂದರು.

ತಹಶೀಲ್ದಾರ್ ಗಗನಸಿಂಧು ಮಾತನಾಡಿ, ನಮ್ಮ ತಾಲ್ಲೂಕು ಕಚೇರಿಯಲ್ಲಿ ರೈತರ ಕೆಲಸವನ್ನು ದೇವರ ಕೆಲಸದಂತೆ ಭಾವಿಸಿ ಮೊದಲ ಆದ್ಯತೆ ನೀಡಿದ್ದೇವೆ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳಿಂದಲೂ ಇದೇ ಸ್ಪಂದನೆಯಿದೆ ರೈತರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ ಎಂದು ರೈತಬಾಂದವರಲ್ಲಿ ಅವರು ಮನವಿ ಮಾಡಿದರು.

ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ.ಎಸ್.ಅನಿಲ್ ಕುಮಾರ್ ಮಾತನಾಡಿ,
ಭೂಮಿಯು ಆಹಾರ ಬೆಳೆಯುವ ಕಾರ್ಖಾನೆಯಲ್ಲ ನಮ್ಮ ಸಂಸ್ಕೃತಿ, ಪರಂಪರೆ, ಪೂರ್ವಜರ ರಕ್ತ, ಬೆವರು ಇದರಲ್ಲಿದೆ ಮಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ,ಭೂತಾಯಿಗೆ ಎಷ್ಟು ಆಹಾರ ಮತ್ತು ಯಾವ ರೀತಿಯ ಆಹಾರ ಕೊಡಬೇಕು ಎಂಬ ತಿಳಿವಳಿಕೆ ಇರಬೇಕು,ಅಸಮರ್ಪಕವಾಗಿ ಭೂಮಿಗೆ ರಾಸಾಯನಿಕಗಳನ್ನು ಸುರಿದರೆ ಭೂಮಿಯಲ್ಲಿ ಉಂಟಾಗುವ ಅಸಮತೋಲನದಿಂದ ಮಣ್ಣಿನ ಆರೋಗ್ಯ ಕೆಡುತ್ತದೆ, ಇದರಿಂದ ಉತ್ಪಾದನೆ ಮತ್ತು ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ರೈತಸಂಘಟನೆಯಿಂದ ಕೃಷಿ ಪ್ರವಾಸೋದ್ಯಮವನ್ನು ಮಾಡಬಹುದು ನಗರ ಪ್ರಾಂತ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರ, ಕೃಷಿ, ಪರಿಕರಗಳು, ವಿವಿಧ ಬೆಳೆಗಳನ್ನು ತೋರಿಸಿ ವಿವರಿಸಿ, ಗ್ರಾಮೀಣ ಖಾದ್ಯವನ್ನು ಉಣಬಡಿಸಿ, ಕೃಷಿಯ ಬಗ್ಗೆ ಮುಂದಿನ ಪೀಳಿಗೆಗೆ ಸಕಾರಾತ್ಮಕ ಅನುಭವವನ್ನು ನೀಡುವ ಮೂಲಕ, ಆರ್ಥಿಕತೆಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ನುಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ವಿಜ್ಞಾನಿ ಡಾ.ತನ್ವೀರ್ ಅಹಮದ್, ಚಿಂತಕ ಕೆ.ಎಸ್.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಶಶಿಧರ್, ವೇಣು, ರೈತ ಮುಖಂಡರಾದ ವೇಣುಗೋಪಾಲ್, ರಾಮನಾಥನ್, ಮುನಿನಂಜಪ್ಪ,ತಾದೂರು ತಾದೂರು ಮಂಜುನಾಥ್, ಹಿತ್ಲಳ್ಳಿ ರಮೇಶ್, ಎನ್.ಗೋಪಾಲ್,ಹೀರೆಬಲ್ಲ ಕೃಷ್ಣಪ್ಪ, ನರಸಿಂಹರೆಡ್ಡಿ, ಕುಪ್ಪಳ್ಳಿ ಶ್ರೀನಿವಾಸ್,ಸಿ.ರಮಣಾರೆಡ್ಡಿ, ಬಿ.ನಾರಾಯಣಸ್ವಾಮಿ, ವೈ.ಎ.ರಾಮಕೃಷ್ಣಪ್ಪ, ಸೀಕಲ್ ರಮಣಾರೆಡ್ಡಿ, ರಾಮಾಂಜಿನಪ್ಪ, ಅಗ್ನೇಶಿ,ಸೋಮಶೇಖರ್, ಸುಬ್ರಮಣಿ,ನಾಗಪ್ಪ, ರಘುನಾಥರೆಡ್ಡಿ, ನೇರಳೆಮರದಹಳ್ಳಿ ಎ.ಜಿ.ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.