--Ads--

ವಿದ್ಯೆಗೆ ಮಹತ್ವ ಕೊಡಿ : ಅಶ್ವಿನಿ ಪುನೀತ್ ರಾಜಕುಮಾರ್ 

On: February 11, 2026 5:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ವಿದ್ಯೆಗೆ ಮಹತ್ವ ಕೊಡಿ : ಅಶ್ವಿನಿ ಪುನೀತ್ ರಾಜಕುಮಾರ್

ಬೆಂಗಳೂರು:ವಿದ್ಯೆಗೆ ಮಹತ್ವ ಕೊಡಿ ವಿದ್ಯಾಭ್ಯಾಸದ ಕಡೆ ಗಮನವಿಡಿ ಉನ್ನತ ಸಾಧನೆ ಮಾಡಿ ಎಂದು ಎಂದು ಅಶ್ವಿನಿ ಪುನೀತ್ ರಾಜಕುಮಾರ್ ನುಡಿದರು.

ಬೆಂಗಳೂರು ನಗರದ ಅವರ ಕಚೇರಿಯಲ್ಲಿ ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪುನೀತ ಪುಸ್ತಕ ಯೋಜನೆಯ ಅನ್ವಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಕೋಶಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ನಾರಾಯಣ ಗುರು ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಪುನೀತ್ ಪುಸ್ತಕ ಯೋಜನೆ, ನಿಜಕ್ಕೂ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಯೋಜನೆಯಾಗಿದ್ದು ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರಬುನಾದಿಯನ್ನು ಹಾಕುತ್ತಿರುವುದು ಸಂತಸ ತಂದಿದೆ ಈ ಯೋಜನೆಯನ್ನು ಪುನೀತರ ಹೆಸರಿನಲ್ಲಿ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉನ್ನತ ವ್ಯಾಸಂಗ ಮಾಡಿ ಸಾಧನೆ ಮಾಡುವಂತಹ ಸಾಗಬೇಕು ಎಂದು ಅವರು ತಿಳಿಸಿದರು.ಅವರ ಕಚೇರಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಪುನೀತ ಪುಸ್ತಕ ಯೋಜನೆಯ ಅನ್ವಯ ಪುಸ್ತಕ ವಿತರಣೆ ಮಾಡಿದರು.

ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿಸಿ ರಮೇಶ್ ಮಾತನಾಡುತ್ತಾ ನಮ್ಮ ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಿತ್ತು ಈಗ ದುಡಿಯುತ್ತಿರುವ ನಾನು ವಿದ್ಯೆಗೆ ಏನನ್ನಾದರೂ ನೀಡಬೇಕು ಎಂಬ ಆಶಯದಿಂದ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಆ ಮೂಲಕ ಪುನೀತ್ ರಾಜಕುಮಾರ್ ರವರ ಸ್ಮರಣೆ ಮಾಡಬೇಕೆಂದು ಇದಕ್ಕೆ ಪುನೀತ ಪುಸ್ತಕ ಯೋಜನೆ ಎಂದು ಹೆಸರಿಟ್ಟಿದ್ದೇನೆ ಎಂದರು.

ಕರ್ನಾಟಕ ರಾಜ್ಯ ಆರ್ಯ ಈಡಿಗ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉದಾ ಸಹಕಾರಿ ಬ್ಯಾಂಕ್ ನ ಐ ಉಪಾಧ್ಯಕ್ಷ ಟಿ.ವಾಸನ್ ರವರು ಮಾತನಾಡುತ್ತ ನಿಜಕ್ಕೂ ನಾರಾಯಣಗುರುಗಳ ಮಾತಿನಂತೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬುದು ನಮ್ಮ ಧ್ಯೇಯ ವಾಕ್ಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ರಂಗ ವಿಜಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮಾಲೂರು ವಿಜಿ, ನಾರಾಯಣ ಗುರು ಮಹಾ ಸಂಸ್ಥಾನದ ಸಂಸ್ಥಾಪಕ ಅಂಬ ಅಂಬರೀಶ್, ವ್ಯವಸ್ಥಾಪಕ ಪಿ.ಶ್ರೀನಿವಾಸ್, ಮಂಜುನಾಥ್, ಆರ್ ರಘು , ಕೆ. ರಮೇಶ್ ಬಾಬು, ಕಿರುತರೆ ನಟಿ ಗೀತಾ ರಾಘವೇಂದ್ರ, ಚೈತ್ರ ಲಕ್ಷ್ಮಣ್ ಮೂರ್ತಿ ಶಶಿಕಲಾ ಹರೀಶ್ ಚಿಕ್ಕ ತಿರುಪತಿ, ಹಸಾಡಂಡಳ್ಳಿ ವಿಜಯ್ ಕುಮಾರ್, ಸುನೀಲ್ ದೊಡ್ಡ ಮನೆ, ಕೃಷ್ಣಮೂರ್ತಿ ಚಿಕ್ಕ ತಿರುಪತಿ, ಮುಂತಾದವರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಮತ್ತು ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರ ಅಭಿನಂದನಾ ಸಮಾರಂಭ ಮತ್ತು ನಾಡಹಣತೆಗಳು ಕೃತಿ ಬಿಡುಗಡೆ

ಯುವ ರೈತರನ್ನ ಉತ್ತೇಜಿಸಲು ನಡಿಗೆ ಜಾಥ, ಆಹಾರ ಸರಪಳಿ ಮತ್ತು ಪ್ರಕೃತಿ, ಆರ್ಥಿಕತೆ ಜನಜಾಗೃತಿ ಕಾರ್ಯಕ್ರಮ 

ಪಾಲಿಕೆ ಚುನಾವಣೆಗಾಗಿ ಮತ್ತು ವಿಶ್ವದ ಅತಿ ದುಬಾರಿ ಟನಲ್ ರೋಡ್ ವಿರುದ್ಧ ಸಂಘ, ಸಂಸ್ಥೆ, ಸಾರ್ವಜನಿಕರು ಧ್ವನಿ ಎತ್ತಬೇಕು-ಸಂಸದ ತೇಜಸ್ವಿ ಸೂರ್ಯ

ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಕಾರ ಅಂತರಾಷ್ಟ್ರೀಯ ಮಟ್ಟದ ಪೋಟೋ ಮತ್ತು ವಿಡಿಯೋ ಪ್ರದರ್ಶನ

ನಮ್ಮ ಕುಲ ಶಿಲ್ಪಿಗಳು ಉಪನ್ಯಾಸ ಮಾಲೆ

ಸುಪ್ರೀಂ ಕೋರ್ಟ್ ‘ಸಮಾಧಾನ್ ಸಮಾರೋಹ್’ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೂಚನೆ