--Ads--

ಶಿಡ್ಲಘಟ್ಟದಲ್ಲಿ, ಕಾಂಗ್ರೆಸ್ ಪಕ್ಷದವರೇ, ಪಕ್ಷವನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿರುವ ಪರ್ವ ಶುರುವಾಗಿದೆ.

On: February 24, 2026 6:12 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಶಿಡ್ಲಘಟ್ಟದಲ್ಲಿ, ಕಾಂಗ್ರೆಸ್ ಪಕ್ಷದವರೇ, ಪಕ್ಷವನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿರುವ ಪರ್ವ ಶುರುವಾಗಿದೆ.

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲೂಕು, ರಾಜಕೀಯವಾಗಿ, ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕಾಲವೊಂದಿತ್ತು. ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ನಡೆಸುವುದು ಎಂದರೆ, ಅಸಾಧ್ಯವಾದ ಕೆಲಸ ಆದರೂ, ಪಕ್ಷದ ಗೌರವ ಉಳಿಸುವುದಕ್ಕಾದರೂ ಸ್ಪರ್ಧಿಸಬೇಕು ಎನ್ನುವಷ್ಟರ ಮಟ್ಟಿಗೆ, ವಿರೋಧ ಪಕ್ಷದ ನಾಯಕರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಕಾಲವಿತ್ತು. ಆದರೆ, ಕಾಲಚಕ್ರ ಉರುಳುತ್ತಿದ್ದಂತೆ, ಕಾಂಗ್ರೆಸ್ ಪಕ್ಷದವರೇ ಪಕ್ಷವನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿರುವ ಕಾಲ ಬಂದಿದೆ.

ಇತ್ತಿಚೆಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಕಾಂಗ್ರೆಸ್ ಪಕ್ಷದ ನಾಯಕರ ಬಾಯಲ್ಲಿ ಬರುತ್ತಿರುವ ಮಾತುಗಳು, ಅವರು ನಡೆದುಕೊಳ್ಳುತ್ತಿರುವ ರೀತಿ ಎಲ್ಲವೂ ಇಂತಹ ಅನುಮಾನಗಳನ್ನು ಹುಟ್ಟುಹಾಕಿದೆ.
ಕಾಂಗ್ರೆಸ್ ಪಕ್ಷವನ್ನು ಸಧೃಢವಾಗಿ ಕಟ್ಟುವುದಕ್ಕಾಗಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಹಗಲಿರುಳು ಶ್ರಮಿಸಿದ್ದಾರೆ. ಬ್ಯಾನರುಗಳು ಕಟ್ಟುವುದರಿಂದ ಹಿಡಿದು, ಪಕ್ಷದ ಪ್ರಣಾಳಿಕೆಗಳನ್ನು ಮನೆ, ಮನೆಗೆ ಹೋಗಿ ತಲುಪಿಸಿ, ಮತಗಟ್ಟೆಯಲ್ಲಿ ಮತ ಹಾಕಿಸುವ ತನಕ ಕಾರ್ಯಕರ್ತರು, ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದರು.
ಬಹಳಷ್ಟು ಮಂದಿ ಚುನಾವಣೆಗಳ ಸಮಯದಲ್ಲಿ ಪಕ್ಷದ ಹಿತ ಕಾಪಾಡುವುದಕ್ಕಾಗಿ ತಮ್ಮ ಕುಟುಂಬದವರನ್ನೂ ವಿರೋಧ ಮಾಡಿಕೊಂಡು ಅಣ್ಣ ತಮ್ಮಂದಿರು ಬದ್ಧವೈರಿಗಳಾಗಿ ಉಳಿದಿದ್ದಾರೆ. ಅವರ ಮಕ್ಕಳಂತೂ ಶತ್ರುಗಳಂತೆ ವರ್ತನೆ ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು, ಒಂದೇ ಊರಿನಲ್ಲಿದ್ದರೂ ಪರಸ್ಪರ ಮಾತನಾಡುವುದು ಸಹಾ ಅಪರಾಧವೆಂಬಂತೆ ಬಿಂಬಿತವಾಗಿ ಬಿಡುತ್ತದೆ.

ಇಂತಹ ಲಕ್ಷಾಂತರ ಮಂದಿ ನಿಷ್ಟಾವಂತ ಕಾರ್ಯಕರ್ತರ ಶ್ರಮವನ್ನು ಮರೆತಿರುವ ಕಾಂಗ್ರೆಸ್ ನಾಯಕರು, ಬಣಗಳನ್ನು ವಿಂಗಡಣೆ ಮಾಡಿ, ಒಟ್ಟಿಗೆ ಪಕ್ಷ ಸಂಘಟನೆ ಮಾಡುತ್ತಿದ್ದ ಕಾರ್ಯಕರ್ತರನ್ನೆ ಪರಸ್ಪರ ಎತ್ತಿಕಟ್ಟಿ ಬದ್ಧವೈರಿಗಳನ್ನಾಗಿ ಮಾಡುತ್ತಿದ್ದಾರೆ.

ಕೋರ್ಟ್ಗಳಿಗೆ ಅಲೆದಾಟ: ಚುನಾವಣೆಗಳ ಸಮಯದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೇ ಬೇಕು ಎಂದು ಹಳ್ಳಿಗಳಲ್ಲಿ ತೊಡೆ ತಟ್ಟಿ ನಿಂತು, ವಿರೋಧ ಪಕ್ಷಗಳ ಕಾರ್ಯಕರ್ತರೊಂದಿಗೆ ಜಗಳ ಮಾಡಿಕೊಂಡು, ರಕ್ತದೊಳುಕುಳಿ ಹರಿಸಿಕೊಂಡು, ತಮ್ಮ ಮಕ್ಕಳ ಮುಂದಿನ ಭವಿಷ್ಯ ಏನಾಗಲಿದೆ ಎಂದು ಕಿಂಚಿತ್ತೂ ಆಲೋಚಸದೇ ಪಕ್ಷದ ನಾಯಕರಿಗಾಗಿ ಬಡಿದಾಡಿಕೊಂಡವರು, ಇಂದು, ಕೇಸುಗಳನ್ನು ಎದುರಿಸಲು ಕೋರ್ಟ್ ಗಳಿಗೆ ಅಲೆದಾಡುತ್ತಿದ್ದರೆ, ಅವರ ಮಕ್ಕಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗಬೇಕಾದಂತಹ ಪರಿಸ್ಥಿತಿ ಎದುರಾದಾಗ, ಇಲ್ಲವೇ ಸರಕಾರಿ ಉದ್ಯೋಗಕ್ಕೆ ಹೋಗಬೇಕಾದಾಗ, ಪೋಷಕರ ಕೇಸುಗಳ ಕುರಿತು, ಪೊಲೀಸ್ ತಪಾಸಣೆಯಲ್ಲಿ, ತಡೆಯಾಗುವ ಕಾರಣ, ಉನ್ನತ ವ್ಯಾಸಂಗಕ್ಕೂ ಕುತ್ತು ಬರುತ್ತಿದೆ. ಈ ವೇಳೆ ಯಾವ ರಾಜಕೀಯ ನಾಯಕರೂ ಸಹಾಯಕ್ಕೆ ಬರುವುದಿಲ್ಲ. ತಮ್ಮ ಕೈಲಾದ ಸಹಾಯ ಮಾಡುವುದನ್ನು ಹೊರತುಪಡಿಸಿದರೆ, ಕಾನೂನಾತ್ಮಕವಾಗಿ ಯಾವುದೇ ಸಹಾಯವಾಗುವುದಿಲ್ಲ. ಕಾರ್ಯಕರ್ತರು, ಮುಖಂಡರು, ಯಾರಿಗಾಗಿ ಬಡಿದಾಡಿಕೊಂಡಿದ್ದರೋ ಅವರು,ಅಧಿಕಾರ ಅನುಭವಿಸಿಕೊಂಡು, ವಿರೋಧ ಮಾಡಿದವರನ್ನೂ ತಮ್ಮ ಜೊತೆಗೆ ಸೇರಿಸಿಕೊಂಡು, ಆರಾಮಾಗಿದ್ದಾರೆ.

ರಾಜ್ಯ

ನಾಯಕರಿಂದ ಗೊಂದಲ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ನಾಯಕರು, ಶಿಡ್ಲಘಟ್ಟದ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷ ಸಂಘಟನೆಗೆ ಒತ್ತುಕೊಡುವುದರ ಬದಲಿಗೆ, ಅವರೇ ನೇರವಾಗಿ ನಾಯಕರನ್ನು ಇಬ್ಭಾಗ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಗೊಂದಲದ ಜೊತೆಗೆ, ಪರಸ್ಪರ ಧ್ವೇಷ ಭಾವನೆ ಬೆಳೆಯುತ್ತಿದೆ. ಇದರಿಂದ ನಿಷ್ಟಾವಂತ ಕಾರ್ಯಕರ್ತರು, ತಟಸ್ಥವಾಗಿರುವುದು ಉತ್ತಮ. ಪಕ್ಷದಿಂದ ಯಾರಿಗೆ ಟಿಕೆಟ್ ಕೊಡುತ್ತಾರೋ. ಅವರಿಗೆ ಓಟ್ ಹಾಕಿಸೋಣವೆನ್ನುವ ನಿಲುವಿಗೆ ಬರುತ್ತಿದ್ದಾರೆಂದು ಕೆಲ ನೊಂದ ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಬ್ಬಿಣ ಕಡಲೇ: ಮುಂದಿನ ಕೆಲವೇ ತಿಂಗಳುಗಳಲ್ಲಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗುವುದರಿಂದ ಕಾಂಗ್ರೆಸ್ ಪಕ್ಷದ ಪಾಲಿಗೆ ಈ ಚುನಾವಣೆಗಳು ಕಬ್ಬಿಣದ ಕಡಲೇಯಾಗಲಿವೆ. ಜೆಡಿಎಸ್ ಪಕ್ಷದ ಸಂಘಟತ ಹೋರಾಟದ ಮುಂದೆ, ಕೈ ಛಿದ್ರವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಹಿಂದೆಲ್ಲಾ ಹಳ್ಳಿಗಳಲ್ಲಿ ಪ್ರಭಾವಿ ಮುಖಂಡರೊಬ್ಬರು ಹೇಳಿದರೆ ಸಾಕು, ಮತ ಚಲಾವಣೆಯಾಗುತ್ತಿತ್ತು. ಈಗ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಕ್ಷಣಾರ್ಧದಲ್ಲಿ ಗಮನಿಸುತ್ತಿರುವ ಜನರು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮುಖಭಂಗವಾಗುವ ರೀತಿಯಲ್ಲಿ ತೀರ್ಪು ನೀಡಿದರೂ ಅಚ್ಚರಿಯಿಲ್ಲ.

ನಾಯಕರು ಯಾರು ಬೇಕಾದರೂ ಆಗಬಹುದು: ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ, ಹಣವಿದ್ದರೆ, ಯಾರು ಬೇಕಾದರೂ ನಾಯಕರಾಗುತ್ತಾರೆ, ಎಲ್ಲಿಂದ ಬಂದಾದರೂ ಇಲ್ಲಿ ನಾಯಕರಾಗಿ ಬೆಳೆಯಬಹುದು, ಆದರೆ, ಇಲ್ಲಿನ ಮುಖಂಡರು, ಕಾರ್ಯಕರ್ತರು, ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಮತದಾನದ ಹಕ್ಕನ್ನು ತಮಗೆ ಇಷ್ಟವಾದ ಅಭ್ಯರ್ಥಿಗೆ ಚಲಾಯಿಸುವ ಮೂಲಕ ತಮ್ಮ ಜೀವನ ಕಟ್ಟಿಕೊಳ್ಳುವ ಕಡೆಗೆ ಚಿತ್ತ ಹರಿಸುವುದು ಒಳಿತು.

WhatsApp

Join Now

Telegram

Join Now

Instagram

Join Now