--Ads--

ಅವಧಿ ಮುಗಿದ ಮದ್ಯ ನಾಶ ಪಡಿಸಿದ ಅಬಕಾರಿ ಇಲಾಖೆ

On: February 26, 2026 12:44 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಅವಧಿ ಮುಗಿದ ಮದ್ಯ ನಾಶ ಪಡಿಸಿದ ಅಬಕಾರಿ ಇಲಾಖೆ

ದೇವನಹಳ್ಳಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕರ್ನಾಟಕ ಪಾನೀಯ ನಿಗಮದ (KSBCL) ಗೋದಾಮಿನಲ್ಲಿ ಇದ್ದ ಅವಧಿ ಮುಗಿದ  ಮಾರಾಟಕ್ಕೆ ಯೋಗ್ಯವಲ್ಲದ ಮದ್ಯವನ್ನು ನಾಶಪಡಿಸಲಾಯಿತು. ಅವಧಿ ಮುಗಿದ ಮದ್ಯಗಳನ್ನು ಹಳ್ಳ ತೆಗೆದು ಬಾಟಲ್‌ಗಳಲ್ಲಿ ಇದ್ದ ಮದ್ಯವನ್ನು ಸುರಿದು ನಾಶಪಡಿಸಿದರು.

ಹೊಸಕೋಟೆ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಚಂದ್ರಮೋಹನ್ ಮಾತನಾಡಿ, ಅವಧಿ ಮುಗಿದ ವಿವಿಧ ಬ್ರಾಂಡ್‌ಗಳ ಬಿಯರ್, ವೈನ್ಸ್ ಅನ್ನು ಪ್ರಕೃತಿಗೆ ಮಲಕವಾಗದಂತೆ ಮುಂಜಾಗ್ರತೆ ಕ್ರಮವಹಿಸಿ ನಾಶಪಡಿಸಲಾಗಿದೆ. ಮಾರಾಟಕ್ಕೆ ಯೋಗ್ಯವಲ್ಲದ 1011 ಬಾಕ್ಸ್ 310 ಬಾಟಲ್ ಮದ್ಯವನ್ನು ಸರಕಾರದ ನಿರ್ದೇಶನದಂತೆ ಅಧಿಕಾರಿಗಳ ಸಮ್ಮುಖದಲ್ಲಿ ನಾಶಮಾಡಲಾಗಿದೆ. ಅವಧಿ ಮುಗಿದ ಮದ್ಯವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದರು.

ಬಿಯರ್‌ಬಾಟಲ್ ಹಾಗೂ ಲ್ಯಾಬ್‌  ಬಾಕ್ಸ್‌ಗಳನ್ನು ಸರ್ಕಾರದ ನಿರ್ದೇಶನದಂತೆ ನಾಶ ಮಾಡಲಾಗುತ್ತಿದೆ. ಅವಧಿ ಮುಗಿದ ಮದ್ಯವನ್ನು ಸೇವಿಸುವುದರಿಂದ ವಾಂತಿ ಭೇದಿ ಹಾಗೂ ಇತರೆ ಕಾಯಿಲೆಗಳಿಗೆ ಒಳಗಾಗುತ್ತೇವೆ ಗೋದಾಮಿನಲ್ಲಿ ಹೊಸದಾಗಿ ಬರುವ ಮದ್ಯವನ್ನು ಶೇಖರಣೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೆಎಸ್‌ಬಿಸಿಎಲ್ ಮಳಿಗೆ ಅಬಕಾರಿ ನಿರೀಕ್ಷಕ ಅರುಣ್.ಎಂ.ಜೆ.,  ಕೆಎಸ್‌ಬಿಸಿಎಲ್  ಮಳಿಗೆ ವ್ಯವಸ್ಥಾಪಕ ತಿಮ್ಮಪ್ಪ ಎಸ್.ಡಿ., ಮೇಲ್ವಿಚಾರಕ ಬಾಲಾಜಿ ಹಾಗೂ ಸಿಬ್ಬಂದಿ ಇದ್ದರು.

 

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ: ಸಚಿವ ಕೆ.ಹೆಚ್ ಮುನಿಯಪ್ಪ

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ತಾವರೆಕೆರೆಯಲ್ಲಿ ಅದ್ಧೂರಿ ಗಣೇಶೋತ್ಸವ ಜೈ ಭೀಮ್ ವಿನಾಯಕ ಗೆಳೆಯರ ಬಳಗದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ರಸಮಂಜರಿ ಕಾರ್ಯಕ್ರಮಕ್ಕೆ ಮೆರುಗು

ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ: ಮತದಾರರ ನೋಂದಣಾಧಿಕಾರಿ (ERO) 

ಪ್ರಜಾಪ್ರಭುತ್ವ ಪ್ರತಿಯೊಬ್ಬರ ಆಶಯಗಳಿಗೆ ಧ್ವನಿ: ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ