ವಿಜಯ ದರ್ಪಣ ನ್ಯೂಸ್….
ಅಂಬಿಕ ಎನ್.ವೀರಭದ್ರ ರವರಿಗೆ ಪಿಎಚ್.ಡಿ ಪದವಿ ಪ್ರಧಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಅಂಬಿಕ ಎನ್ ವೀರಭದ್ರರವರೆಗೆ ಪಿಎಚ್.ಡಿ ಪದವಿ ಲಭಿಸಿದೆ.
ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ. ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಬಿ.ಎಸ್.ಸ್ವಾಮಿಯವರ ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ (ಮಹಾಕಾವ್ಯಗಳು, ಜನಪದ ಸಾಹಿತ್ಯ, ಸಂಶೋಧನಾ ಸಾಹಿತ್ಯ) ವನ್ನು ಅನುಲಕ್ಷಿಸಿ ಎಂಬ ಸಂಶೋಧನಾ ಮಹಾಪ್ರಬಂದಕ್ಕೆ” ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಅಂಬಿಕಾ ಎನ್ ವೀರಭದ್ರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತತ್ತಮಂಗಲ ಗ್ರಾಮದವರು
ಅಂಬಿಕಾ ಎನ್ ವೀರಭದ್ರ ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು ಹಿರಿಯರು, ಸ್ನೇಹಿತರು ಹಾಗೂ ಜನಪ್ರತಿನಿಧಿಗಳು, ಮುಖಂಡರು, ಸ್ಥಳೀಯ ನಾಯಕರು ಸೇರಿದಂತೆ ಅವರ ಪತಿ ವೀರಭದ್ರ .ಪಿ, ಮಕ್ಕಳಾದ ಮನ್ವಿತ್.ವಿ ಮತ್ತು ಶ್ರೀನಿಧಿ ವಿ. ಹಾಗೂ ತಂದೆ ನಾರಾಯಣಪ್ಪ ತಾಯಿ ವೆಂಕಟಮ್ಮ ಸೇರಿದಂತೆ ಚಿಕ್ಕತತ್ತಮಂಗಲ ಗ್ರಾಮದ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
&&&&&&&&&&&&&&&&&&&&&&&&&&&&&&
“ಹರಿನಾಮ ಸಂಕೀರ್ತನೆ”

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಯಲಹಂಕ ಉಪನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 30, ಗುರುವಾರ ಸಂಜೆ 6-30ಕ್ಕೆ ಶ್ರೀ ರಾಮ್ ರಕ್ಷಿತ್ ಇವರಿಂದ “ಹರಿನಾಮ ಸಂಕೀರ್ತನೆ” ಏರ್ಪಡಿಸಿದ್ದು, ಇವರ ಗಾಯನಕ್ಕೆ ಹಾರ್ಮೋನಿಯಂ ವಾದನದಲ್ಲಿ ಶ್ರೀ ಭರತ್ ದರೋಜಿ, ತಬಲಾ ವಾದನದಲ್ಲಿ ಶ್ರೀ ಶರಣು ಗೋಗಿ ಹಾಗೂ ತಾಳದಲ್ಲಿ ಶ್ರೀ ಸುಧೀಂದ್ರ ಕುಲಕರ್ಣಿ ಸಹಕಾರ ನೀಡಲಿದ್ದಾರೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ ಸಂಚಾಲಕರ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.
.










