ವಿಜಯ ದರ್ಪಣ ನ್ಯೂಸ್…..
ವಿಜಯಪುದಲ್ಲಿ ತ್ರಯೋದಶಿ ವ್ಯಾಸ ಹುಣ್ಣಿಮೆ ಪೂಜಾ ಕಾರ್ಯಕ್ರಮ

ದೇವನಹಳ್ಳಿ ತಾಲ್ಲೂಕು: ವಿಜಯಪುರ ಪಟ್ಟಣದ ಶ್ರೀ ಸಂಗಮ ಶಾಂತಾಶ್ರಮದಲ್ಲಿ ಇಂದು ಮಾಸಿಕ ತ್ರಯೋದಶಿ ವ್ಯಾಸ ಹುಣ್ಣಿಮೆಯ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಠಾಧೀಶ ಶ್ರೀ ಜೆ ಎಸ್ ರಾಮಚಂದ್ರ ಸ್ವಾಮಿಗಳು ಮಾತನಾಡುತ್ತಾ ವೇದ ವ್ಯಾಸರ ಬಗ್ಗೆ ಮಾತನಾಡುತ್ತಾ
ವ್ಯಾಸರು ಬಹು ಮುಖ್ಯ ಹಿಂದೂ ಮಹಾಕಾವ್ಯವಾದ ಮಹಾಭಾರತದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ. ಮಹಾಭಾರತದ ಪ್ರಕಾರ, ವ್ಯಾಸರು ಪರಾಶರ ಮುನಿ ಮತ್ತು ಮೀನುಗಾರನ ಮಗಳಾದ ಮತ್ಸ್ಯಗಂಧಿನಿ ಅಥವಾ ಸತ್ಯವತಿಯ ಪುತ್ರ. ಜನ್ಮ ಯಮುನಾ ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ ‘ಕಲ್ಪಿ’ ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ ‘ಕೃಷ್ಣ’ ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ ‘ದ್ವೈಪಾಯನ’ ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು “ಕೃಷ್ಣ-ದ್ವೈಪಾಯನ” ಎಂದೂ ಕರೆಯಲಾಗುತ್ತದೆ.
ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ. ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು. ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾಕಾವ್ಯವನ್ನು ರಚಿಸಲು ಗಣೇಶನನ್ನು ಕೇಳಿಕೊಂಡರು.
ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಅವರು ಆಧ್ಯಾತ್ಮ, ಇತಿಹಾಸ, ಜ್ಞಾನ, ವಿಜ್ಞಾನಗಳ ಕಣಜವಾಗಿದ್ದರು. ವ್ಯಾಸ ಮಹರ್ಷಿ ಎಂದು ಪ್ರಸಿದ್ಧರಾದ ಕೃಷ್ಣ ದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು.

ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ ಎಂಬ ಬಿರುದಾಂಕಿತರಾದರು. ಈ ಮಹತ್ಕಾರ್ಯದ ಸಲುವಾಗಿ ಅವರು ಮಹಾಗುರು ಎಂಬ ಕೀರ್ತಿಗೆ ಪಾತ್ರರಾದರು
ಈ ಗುರು ಪೂರ್ಣಿಮಾ ದಿವಸದಂದು , ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಂಗನಾಥಪುರದ ಆಧ್ಯಾತ್ಮಿಕ ಚಿಂತಕರಾದ ಶ್ರೀಮತಿ ಶಾರದನಮ್ಮ ಮಾತನಾಡುತ್ತಾ ಋಷಿಗಳಿಗೆ ಮಾತ್ರವಲ್ಲದೇ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಶೇಷವಾದ ಗೌರವ ಸ್ಥಾನವಿರುವುದರಿಂದ ಗುರು ಪೂರ್ಣಿಮಾ ಸರ್ವರಿಗೂ ಪವಿತ್ರವಾಗಿದೆ. ಈ ದಿವಸ ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಬೇಕಾದುದು ಧಾರ್ಮಿಕ ಕರ್ತವ್ಯವಾಗಿದೆ. ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಮಠಾಧೀಶರಾದ ಡಿ ಎಂ ಮುನಿಯಪ್ಪ, ಪೂಜಾ ಸೇವಕರ್ತರಾದ ಶ್ರೀಮತಿ ಲಕ್ಷ್ಮಮ್ಮ, ಆಧ್ಯಾತ್ಮಿಕ ಚಿಂತಕರಾದ ಗೋಪಾಲಪ್ಪ, ಚನ್ನಪ್ಪ ಸ್ವಾಮಿಗಳು,ನಂಜುಂಡಪ್ಪ, ಎಂ ವಿ ನಾಯ್ಡು, ಜೆ ಎಸ್ ನಾಗರಾಜು, ಜೆ ಎಸ್ ಮುನಿನಾರಾಯಣ, ಗಾಯಕ ನರಸಿಂಹಪ್ಪ, ಎ ಶ್ರೀರಾಮ್, ಪಿ ಸೀತಾರಾಮಣ್ಣ, ಜೆ ಆರ್ ಮುನಿವೀರಣ್ಣ, ಕೆ ವಿ ಮುನಿರಾಜ್, ವಿ ಎನ್ ವೆಂಕಟೇಶ್, ತರಕಾರಿ ಆರ್ ರಮೇಶ್,ಎನ್ ಅಂಜಿನಪ್ಪ, ಗಣಾಚಾರಿ ರವಿ,ಟಿ ಎಸ್ ವಿಜಯ್,ಡಿ ಎಲ್ ಲಕ್ಷ್ಮೀನಾರಾಯಣ, ಡಿ ಆರ್ ಚನ್ನಕೃಷ್ಣ, ಅಮರನಾರಾಯಣ, ಪಿ ಕೇಶವ್, ಎಸ್ ಪ್ರಕಾಶ್,ಜಗನಾಥ್,ಡಿ ಎಂ ಮುಕುಂದ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.










