--Ads--

ಯುಗಾದಿ ಹಬ್ಬಕ್ಕೆ ಸಂಭ್ರಮದ ಹೊಸತೊಡಕು : ಭರ್ಜರಿ ಕುರಿ-ಕೋಳಿ ವ್ಯಾಪಾರ

On: March 22, 2026 5:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಯುಗಾದಿ ಹಬ್ಬಕ್ಕೆ ಸಂಭ್ರಮದ ಹೊಸತೊಡಕು : ಭರ್ಜರಿ ಕುರಿ-ಕೋಳಿ ವ್ಯಾಪಾರ

ಹುಳಿಯಾರು, ಮಾ 22: ಯುಗಾದಿ ಹಬ್ಬದ ಸಡಗರ ಹಾಗೂ ಹೊಸ ವರ್ಷದ ಸ್ವಾಗತದ ಅಂಗವಾಗಿ ಹುಳಿಯಾರು ಪಟ್ಟಣದಲ್ಲಿ ‘ಹೊಸ ತೊಡಕು’ ಅತ್ಯಂತ ಸಂಭ್ರಮದಿಂದ ನಡೆಯಿತು.

ಸಿಹಿ ಹೋಳಿಗೆ ಸವಿದಿದ್ದ ಜನತೆ ಬಯಲು ಸೀಮೆಯ ಸಾಂಪ್ರದಾಯಿಕ ಶೈಲಿಯ ಖಾರವಾದ ಮಾಂಸದೂಟವನ್ನು ಸವಿಯುವ ಮೂಲಕ ಹಬ್ಬವನ್ನು ಆಚರಿಸಿದರು.

ಯುಗಾದಿಯ ಮರು ದಿನವನ್ನು ‘ವರ್ಷದ ತೊಡಕು’ ಅಥವಾ ‘ಹೊಸತೊಡಕು’ ಎಂದು ಕರೆಯಲಾಗುತ್ತದೆ ವರ್ಷದ ಆರಂಭದಲ್ಲಿ ಭರ್ಜರಿ ಮಾಂಸದೂಟ ಮಾಡುವುದರಿಂದ ಇಡೀ ವರ್ಷ ಯಾವುದೇ ಅಡೆತಡೆಗಳಿಲ್ಲದೆ ಸುಖವಾಗಿ ಸಾಗುತ್ತದೆ ಎಂಬುದು ಜನರ ನಂಬಿಕೆ. ಈ ಹಿನ್ನೆಲೆಯಲ್ಲಿ ಮಾಂಸದೂಟದ ಪ್ರೇಮಿಗಳು ಯುಗಾದಿಗಿಂತಲೂ ಈ ದಿನಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಮನೆಗೆ ಕರೆದು ಬಾಡೂಟ ಬಡಿಸುವ ಸಂಪ್ರದಾಯ ಇಂದಿಗೂ ಇಲ್ಲಿ ಜೀವಂತವಾಗಿದೆ.

ಹಬ್ಬದ ಪ್ರಯುಕ್ತ ಕುರಿ ಮತ್ತು ಕೋಳಿ ಮಾಂಸಕ್ಕೆ ಭಾರೀ ಬೇಡಿಕೆ ಕಂಡು ಬಂದಿತು ಪಟ್ಟಣದ ಮಾಂಸದ ಅಂಗಡಿಗಳ ಮುಂದೆ ನೂಕು ನುಗ್ಗಲು ಕಂಡು ಬಂದವು. ಅತಿಯಾದ ಬೇಡಿಕೆಯಿಂದಾಗಿ ಕೋಳಿ ದರವು ಸಾಮಾನ್ಯ ದರಕ್ಕಿಂತ ಹೆಚ್ಚಾಗಿತ್ತು. ಆದರೂ ಗ್ರಾಹಕರು ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಮಾಂಸ ಖರೀದಿಯಲ್ಲಿ ತೊಡಗಿದ್ದರು ಅಕ್ಕಪಕ್ಕದ ಹಳ್ಳಿಗಳಿಂದ ನೂರಾರು ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಕೋಳಿ ಅಂಗಡಿಗಳ ಮುಂದೆ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ರೈತರು ತಮ್ಮ ಕೈಯಲ್ಲಿ ಮೂರ್ನಾಲ್ಕು ಕೋಳಿಗಳನ್ನು ಹಿಡಿದು ಹೋಗುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು ಗ್ರಾಮೀಣ ಭಾಗದಲ್ಲಿ ವರ್ಷದ ತೆ-ಡಕಿಗಾಗಿಯೇ ವಿಶೇಷ ತಯಾರಿ ನಡೆಸಲಾಗುತ್ತದೆ. ಸ್ನೇಹಿತರು ಗುಂಪುಗಳನ್ನು ಮಾಡಿಕೊಂಡು ಗುಡ್ಡೆ ಮಾಂಸ ಹಂಚಿಕೊಳ್ಳುವ ಪದ್ಧತಿ ಇಂದಿಗೂ ಜನಪ್ರಿಯವಾಗಿದೆ.

ಎಲ್ಲರೂ ಸಮಾನವಾಗಿ ಹಣ ಹಾಕುವುದು, ಅನುಭವಿಯೊಬ್ಬರು ಸಂತೆಗಳಿಗೆ ಹೋಗಿ ದಷ್ಟ ಪುಷ್ಟವಾದ ಕುರಿ-ಮೇಕೆಗಳನ್ನು ಆರಿಸಿ ತರುವುದು. ಹಬ್ಬದ ದಿನ ಕಡಿದು ಸಮಾನವಾಗಿ ಮಾಂಸವನ್ನು ಹಂಚಿಕೊಳ್ಳುವುದು ಈ ಗುಡ್ಡೆ ಮಾಂಸದ ಪರಿಕಲ್ಪನೆಯಾಗಿದೆ.

ಚಿಕ್ಕನಾಯಕನಹಳ್ಳಿ ಜ್ಯೋತಿ ಬಾಪುಲೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಈ ವರ್ಷ ಗುಡ್ಡೆ ಮಾಂಸ ಮಾರಾಟ ಸಹ ಮಾಡಿದ್ದು ಭಾರಿ ಬೇಡಿಕೆಯಿತ್ತು.

ಒಟ್ಟಾರೆಯಾಗಿ, ಹುಳಿಯಾರಿನಲ್ಲಿ ಯುಗಾದಿಯ ಹೊಸ ವರ್ಷದ ಸಂಭ್ರಮವು ಸಿಹಿಯೊಂದಿಗೆ ಆರಂಭವಾಗಿ, ಭರ್ಜರಿ ಬಾಡೂಟದೊಂದಿಗೆ ಸಂಪನ್ನಗೊಂಡಿತು.

WhatsApp

Join Now

Telegram

Join Now

Instagram

Join Now