--Ads--

ಭೂಮಾಪಕರಿಗೆ ಸಮಾನ ವೇತನ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಬೇಕೆಂದು ಭೂಮಾಪಕರ ಸಂಘದಿಂದ ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ

On: March 25, 2026 2:38 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಭೂಮಾಪಕರಿಗೆ ಸಮಾನ ವೇತನ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಬೇಕೆಂದು ಭೂಮಾಪಕರ ಸಂಘದಿಂದ ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ

ಶಿಡ್ಲಘಟ್ಟ : ಕಳೆದ 20 ವರ್ಷಗಳಿಂದ ಭೂಮಾಪನ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪರವಾನಗಿ ಭೂಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಪರವಾನಗಿ ಭೂ ಮಾಪಕರ ಸಂಘದ ಪದಾಧಿಕಾರಿಗಳಿ
ಶಾಸಕರಾದ ಬಿ.ಎನ್.ರವಿಕುಮಾರ್‌ಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಮೇಲೂರಿನ ಶಾಸಕರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ಪರವಾನಗಿ ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಬಿ.ಟಿ.ವೆಂಕಟೇಶ್ ಮಾತನಾಡಿ,ರಾಜ್ಯದ ಕಂದಾಯ ಇಲಾಖೆ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿರುವ ಪರವಾನಗಿ ಭೂಮಾಪಕರ ದಶಕಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ನ್ಯಾಯ ಕಲ್ಪಿಸಬೇಕು ಎಂದರು.

2002ರಿಂದ ಸೇವೆಯಲ್ಲಿರುವ ಪರವಾನಗಿ ಭೂಮಾಪಕರು ಸರ್ಕಾರದ ಪ್ರಮುಖ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಖಾಸಗಿ ಸರ್ವೇ ಕೆಲಸಗಳಿಗಷ್ಟೇ ಸೀಮಿತವಾಗಿಲ್ಲ ,11ಇ ನಕ್ಷೆ ಸಿದ್ಧಪಡಿಸುವುದು, ತತ್ಕಾಲ್ ಪೋಡಿ, ಕೆರೆ-ಕಾಲುವೆಗಳ ಅಳತೆ, ಅಕ್ರಮ-ಸಕ್ರಮದಂತಹ ಜವಾಬ್ದಾರಿಯುತ ಸರ್ಕಾರಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಇಷ್ಟೆಲ್ಲಾ ಕೆಲಸ ಮಾಡಿದರೂ ಕನಿಷ್ಠ ವೇತನ, ಸೇವಾ ಭದ್ರತೆಯಾಗಲಿ ಇಲ್ಲದಿರುವುದು ಶೋಚನೀಯ ಎಂದರು.

ಈ ಸಂದರ್ಭದಲ್ಲಿ ಪರವಾನಗಿ ಭೂ ಮಾಪಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಟಿ.ವೆಂಕಟೇಶ್, ಪದಾಧಿಕಾರಿಗಳಾದ ಶಿವರಾಮರೆಡ್ಡಿ, ದ್ವಾರಕೀಶ್, ವೆಂಕಟೇಶ್, ರವಿ, ನಾಗರಾಜ್,ಹರಿಲಾಲ್,, ನಾರಾಯಣಪ್ಪ, ಚಂದ್ರಶೇಖರ್, ಶ್ರೀನಾಥ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now