ವಿಜಯ ದರ್ಪಣ ನ್ಯೂಸ್….
ಒಳಚರಂಡಿ ಉಪಕರ (ಸ್ಯಾನಿಟರಿ ಸೆಸ್ )ಆದೇಶ ಹಿಂಪಡೆಯಿರಿ: ಎನ್. ಆರ್. ರಮೇಶ್

ಬೆಂಗಳೂರು: ಪ್ರತಿ 3 ತಿಂಗಳಿಗೊಮ್ಮೆ ಒಳಚರಂಡಿ ಉಪಕರವನ್ನು (ಸ್ಯಾನಿಟರಿ ಸೆಸ್) ಶೇ.3 ಹೆಚ್ಚಿಸುವ ಬೆಂಗಳೂರು ನೀರು ? ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು 2024 ಡಿಸೆಂಬರ್‌ನಲ್ಲಿ ಜಲಮಂಡಳಿಯು ಕುಡಿಯುವ ನೀರಿನ ದರವನ್ನು ಏರಿಕೆ ಮಾಡಿದ್ದಲ್ಲದೆ, ಒಳಚರಂಡಿ ಉಪಕರವನ್ನು ಆಯಾ ತಿಂಗಳ ನೀರಿನ ಶುಲ್ಕದ ಮೇಲೆ ಶೇ.25 ಹೆಚ್ಚಳ ಮಾಡಿ ಅದೇಶಿಸಿತ್ತು. 2025ರ ಪ್ರಾರಂಭ ದಲ್ಲಿ ಇದರ ಪ್ರಮಾಣವನ್ನು ಶೇ.31.25 ಏರಿಕೆ ಮಾಡಿತ್ತು ಎಂದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಮಂಡಳಿಯ ಅಧ್ಯಕ್ಷರು, ನಗರಾಭಿವೃದ್ಧಿ ಇಲಾಖೆಯ ದಾಖಲೆ ಪ್ರದರ್ಶಿಸಿದ ಎನ್.ಆರ್. ರಮೇಶ್, ಅಪರ ಮುಖ್ಯ ಕಾರ್ಯದರ್ಶಿಗಳು ಸೇರಿ ಮತ್ತಿತರ ಹಿರಿಯ ಅಧಿಕಾರಿಗಳು ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಕುಡಿಯುವ ನೀರಿನ ಶುಲ್ಕದ ಏರಿಕೆ ಮತ್ತು ಒಳಚರಂಡಿ ಉಪಕರದ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು.
ಸಭೆಯ ನಡಾವಳಿಯನ್ನು ಆಧರಿಸಿ, ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಪ್ರತೀ ವರ್ಷವೊಂದಕ್ಕೆ ಕುಡಿಯುವ ನೀರಿನ ಶುಲ್ಕವನ್ನು ಶೇ.3 ಹೆಚ್ಚಳ ಮಾಡಬಹುದೆಂದು ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಶುಲ್ಕದ ಶೇ.3 ಪ್ರಮಾಣದಲ್ಲಿ ಒಳಚರಂಡಿ ಉಪಕರವನ್ನು ಏರಿಕೆ ಮಾಡಬಹುದು ಎಂದು ಶಿಫಾರಸು ಮಾಡಿತ್ತು.
ಉಪಕರದ ಪ್ರಮಾಣವನ್ನು ಏರಿಕೆ ಮಾಡುತ್ತಾ ಬಂದಿದ್ದು, 2026ರ ಫೆಬ್ರವರಿಯಲ್ಲಿ ಶೇ.43.75 ಏರಿಕೆ ಮಾಡುವ ಮೂಲಕ ಬೆಂಗಳೂರಿನ ನಾಗರಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸನ್ನೇ ನೆಪವಾಗಿ ಇರಿಸಿಕೊಂಡು ಕುಡಿಯುವ ನೀರಿನ ಶುಲ್ಕವನ್ನು ಪ್ರತೀ ವರ್ಷಕ್ಕೊಮ್ಮೆ ಶೇ.3 ಹೆಚ್ಚಳ ಮಾಡಲು ಹಾಗೂ ಪ್ರತೀ ಮೂರು ತಿಂಗಳಿಗೊಮ್ಮೆ ಕುಡಿಯುವ ನೀರಿನ ಶುಲ್ಕದ ಶೇ.3 ಒಳಚರಂಡಿ ಉಪಕರವನ್ನು ಹೆಚ್ಚಳ ಮಾಡಲು ಮುಂದಾಗಿರುವ ಅಡಳಿತ ಮಂಡಳಿಯ ಜನವಿರೋಧಿ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು. ಅಲ್ಲದೆ ಈ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.











