--Ads--

ಜಿಬಿಎ ಬಜಟ್‌ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಪ್ರತಿ ಪಾಲಿಕೆಯಲ್ಲಿ ತಲಾ ಒಂದು ಕೋಟಿ ರೂ ನಿಗದಿಗೆ ಮನವಿ

On: March 27, 2026 7:20 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಜಿಬಿಎ ಬಜಟ್‌ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಪ್ರತಿ ಪಾಲಿಕೆಯಲ್ಲಿ ತಲಾ ಒಂದು ಕೋಟಿ ರೂ ನಿಗದಿಗೆ ಮನವಿ

ಬೆಂಗಳೂರು: ಗೇಟರ್ ಬೆಂಗಳೂರು ಪ್ರಾಧಿಕಾರದ ಬಿಜಿಎ ಬಜೆಟ್ ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಐದು ಪಾಲಿಕೆಗಳಲ್ಲಿ ತಲಾ 1 ಕೋಟಿ ರೂ ನಿಗದಿ ಮಾಡುವಂತೆ ಸ್ಟೇಟ್ ಮೀಡಿಯಾ ಸರ್ಕಲ್ ನ ಪ್ರತಿನಿಧಿಗಳು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರಿಗೆ ಮನವಿ ಸಲ್ಲಿಸಿದೆ.

ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟಿ ನೇತೃತ್ವದ ನಿಯೋಗ ಜಿಬಿಎ ಬಜೆಟ್ ನಲ್ಲಿ ಪತ್ರಕರ್ತರ ಆರೋಗ್ಯ ಯೋಜನೆಯನ್ನು ಮುಂದುವರೆಸುವಂತೆ  ಮನವಿ ಮಾಡಿದ್ದಾರೆ

ಬಿಬಿಎಂಪಿ ಬದಲು ಜಿಬಿಎ ರಚನೆಯಾಗಿ 5 ಪಾಲಿಕೆಗಳು ಅಸ್ಥಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಆರೋಗ್ಯ ಯೋಜನೆಯನ್ನು ಮುಂದುವರೆಸಬೇಕು.

ಚಿಕಿತ್ಸಾ ವೆಚ್ಚ ಆಯಾ ಪಾಲಿಕೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಮೂಲಕ ನಿರ್ವಹಣೆಯಾಗುವಂತೆ ವ್ಯವಸ್ಥೆ ಮಾಡಬೇಕು. ಪತ್ರಕರ್ತರ ತುರ್ತು ಚಿಕಿತ್ಸೆಗೆ ನೆರವು ದೊರೆಯುವಂತೆ ವಿಧಾನವನ್ನು ಸರಳೀಕರಣಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಪತ್ರಕರ್ತರಾದ ನಂಜುಂಡಪ್ಪ.ವಿ,ಎನ್.ಬಿ ಹೊಂಬಾಳ್, ಹಿರಿಯ ಛಾಯಾಗ್ರಾಹಕ ಜಗದೀಶ್, ರವೀಂದ್ರ, ರವಿಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now