ವಿಜಯ ದರ್ಪಣ ನ್ಯೂಸ್…..
2026-27ನೇ ಸಾಲಿನ ವಾರ್ಷಿಕ ವಸೂಲಾತಿ ಹಕ್ಕನ್ನು 12.67 ಲಕ್ಷಕ್ಕೆ ಹರಾಜು : ಪೌರಾಯುಕ್ತೆ ಅಮೃತಾ ಗೌಡ

ಶಿಡ್ಲಘಟ್ಟ : ನಗರಸಭೆಗೆ ಸೇರಿದ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣದ ಶುಲ್ಕ, ಒಳಚರಂಡಿ ಶುದ್ದೀಕರಣ ಘಟಕದ ಶುಲ್ಕ ,ಇವುಗಳ 2026-27ನೇ ಸಾಲಿನ ವಾರ್ಷಿಕ ವಸೂಲಾತಿ ಹಕ್ಕನ್ನು ನಗರಸಭೆ ಸಮುದಾಯ ಭವನದಲ್ಲಿ ಬಹಿರಂಗ ಹರಾಜು ನಡೆಸಲಾಯಿತು.
ನಗರದಲ್ಲಿ ನಡೆದ ನಗರಸಭೆ ವಸೂಲಾತಿ ಹಕ್ಕು ಬಹಿರಂಗ ಹರಾಜು ಪ್ರಕ್ರಿಯೆ ಬಗ್ಗೆ ಪೌರಾಯುಕ್ತ ಅಮೃತಾ ಅವರು ಮಾಹಿತಿ ನೀಡಿದರು.
ಸಂತೆ ಮಾರುಕಟ್ಟೆಯನ್ನು ನವೀನ್ ಕುಮಾರ್ ಅವರು ಹರಾಜಿನಲ್ಲಿ 3,91,000 ಸಾವಿರ ರೂಪಾಯಿಗಳಿಗೆ ಹರಾಜು ಕೂಗಿದರು, ದಿನವಹಿ ಮಾರುಕಟ್ಟೆಯನ್ನು ಅಂಬರೀಶ್ ಅವರು, 4,70,000 ಸಾವಿರ ರೂಪಾಯಿಗಳಿಗೆ ಮತ್ತು ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣದ ಶುಲ್ಕ ವಸೂಲಿಯನ್ನು ನರಸಿಂಹ ಅವರು, 4,06,000 ರೂಪಾಯಿಗಳಿಗೆ ಹರಾಜು ಕೂಗಿದರು.
ನಗರಸಭೆ ಪೌರಾಯುಕ್ತ ಜಿ.ಅಮೃತಾ ಅವರು ಮಾತನಾಡಿ, ಕಳೆದ ವರ್ಷ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣದ ಶುಲ್ಕ ಹರಾಜಿನಿಂದ 8,70,000 ರೂ.ಗಳು ಆದಾಯ ಬಂದಿತ್ತು,
ಈ ಬಾರಿ 12,67,000 ರೂ.ಗಳು ಆದಾಯ ಬರುತ್ತಿದೆ, ಹಾಗಾಗಿ ಸುಮಾರು 4 ಲಕ್ಷ ರೂ.ಗಳಷ್ಟು ಆದಾಯ ನಗರಸಭೆಗೆ ಹೆಚ್ಚಾಗಿದೆ.
“ಒಳಚರಂಡಿ ಶುದ್ದೀಕರಣ” ಘಟಕದ ಶುಲ್ಕದ ಮರು ಹರಾಜನ್ನು ಆನ್ ಲೈನ್” ಮೂಲಕ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.











