ವಿಜಯ ದರ್ಪಣ ನ್ಯೂಸ್…
ಪ್ರತಿಯೊಬ್ಬರಲ್ಲಿಯೂ ಪುಸ್ತಕ ಸಂಸ್ಕೃತಿ ಬೆಳೆಸುವ ಅಗತ್ಯತೆ : ಎಸ್.ವಿ.ನಾಗರಾಜರಾವ್

ಶಿಡ್ಲಘಟ್ಟ : ಜನರು ಕನ್ನಡ ಭಾಷೆ ಮಾತನಾಡಿದಾಗ ಮಾತ್ರ ಸಾವಿರಾರು ವರ್ಷಗಳ ಕಾಲ ಉಳಿಯಬಲ್ಲದು ಪ್ರತಿಯೊಬ್ಬರಲ್ಲಿಯೂ ಪುಸ್ತಕ ಸಂಸ್ಕೃತಿ
ಬೆಳೆಸುವ ಅಗತ್ಯತೆ ಇದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್ ತಿಳಿಸಿದರು.
ನಗರದ ಸಂಗೀತ ವಿದೂಷಿ ಮಂಜುಳಾ ಜಗದೀಶ್ ಅವರ ಮನೆಯಲ್ಲಿ ತಾಲ್ಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮನೆ,ಮನಗಳಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಗುರಿ ಹೊಂದಿರುವ ಕಸಾಪ ಮನೆಯಂಗಳದಲ್ಲಿ ಕವಿಗೋಷ್ಠಿ ಆಚರಿಸುವ ಮೂಲಕ ಕನ್ನಡ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ ಎಂದರು.
ಕವಿಗೋಷ್ಠಿಯಲ್ಲಿ ಶ್ಯಾಮ್ ಸುಂದರ್,ಜಗದೀಶ್ ಕುಮಾರ್, ರೂಪಸಿ ರಮೇಶ್, ಹರೀಶ್ ಬಾಬು, ಸತ್ಯನಾರಾಯಣ ರಾವ್, ವಿ.ಕೃಷ್ಣ,ಪಟೇಲ್ ನಾರಾಯಣಸ್ವಾಮಿ,ಎನ್.ಸುಂದರ್, ಶ್ರೀನಿವಾಸ್ ವಿಶ್ವಕರ್ಮ ಕವನಗಳನ್ನು ವಾಚಿಸಿದರು.
ಇದೇ ವೇಳೆ ನಿವೃತ್ತ ಉಪನ್ಯಾಸಕ ಮಹಮ್ಮದ್ಖಾಸಿಂ ಕನ್ನಡಭಾಷೆ, ವಚನ ಸಾಹಿತ್ಯದ ಬಗ್ಗೆ ಮಾತನಾಡಿದರು, ಮಾರುತಿ ಗಾಯನ ಸಮಾಜದವರು ಹನುಮ ಸ್ತುತಿ ಹಾಡಿದರು.
ತಾಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕವಿಗೋಷ್ಠಿಯಲ್ಲಿ ಸಂಗೀತ ವಿದೂಷಿ ಮಂಜುಳಾ ಜಗದೀಶ್ ದಂಪತಿಯನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ವಿ.ಕೃಷ್ಣ,ಆರ್.ಸುದರಾಚಾರಿ, ಮುನಿನಾರಾಯಣಪ್ಪ,ಟಿ.ಟಿ.ನರಸಿಂಹಪ್ಪ,ಅಂಬಾರಿ ಮಂಜುನಾಥ್, ಹಿತ್ತಲಹಳ್ಳಿ ಸುರೇಶ್, ಧನುಶ್ರೀ ,
ಮುಕ್ತಾಂಭ ಮತ್ತಿತರರು ಹಾಜರಿದ್ದರು.








