ವಿಜಯ ದರ್ಪಣ ನ್ಯೂಸ್……
ಸರ್ಕಾರದ ವತಿಯಿಂದ ಶ್ರೀ ರಾಮಾನುಜಾಚಾರ್ಯರ ಜಯಂತಿ ಆಚರಿಸಲು ಜಿಲ್ಲಾಡಳಿತಕ್ಕೆ ಬ್ರಾಹ್ಮಣ ಯುವ ವೇದಿಕೆ ಮನವಿ

ತಾಂಡವಪುರ ಏಪ್ರಿಲ್ ಏಳು ಶ್ರೀ ಶಂಕರಾಚಾರ್ಯರ ಜಯಂತಿಯ ಜೊತೆಯಲ್ಲೆ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಸಹ ಸರ್ಕಾರ ಆಚರಣೆ ಜಾರಿಗೆ ತರಲು ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಶಾಸಕ ಟಿ ಎಸ್ ಶ್ರೀವತ್ಸರವರ ಮೂಲಕ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು
ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಂಗಳವಾರ ನಡೆದ ಶ್ರೀ ಶಂಕರಾಚಾರ್ಯರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾರತದ ಅಧ್ಯಾತ್ಮಿಕ ಗೊಂದಲಗಳಿಂದ ಬಿಡುಗಡೆಗೊಳಿಸಿ ಭಕ್ತಿ ಸಿದ್ಧಾಂತದ ಮೂಲಕ ಸಮಾನತೆ ಸಾರುವ ಸಂದೇಶದೊಂದಿಗೆ ಕರ್ನಾಟಕದಲ್ಲಿದ್ದ ಎಲ್ಲಾ 58 ಜನಾಂಗದವರಿಗೂ ಮಂತ್ರ ಮತ್ತು ಸಂಸ್ಕಾರ ಸಮಾಶ್ರಯಣ ನೀಡಿದ ಮಹಾನ್ ವ್ಯಕ್ತಿಯೇ ಶ್ರೀ ರಾಮಾನುಜಾಚಾರ್ಯರು, ದಾಸಯ್ಯರನ್ನು ಧರ್ಮಪ್ರಚಾರಕ್ಕೆ ಮತ್ತು ಸಮಾನತೆಗೆ ಹರಿಕಾರರನ್ನಾಗಿ ನಿಯಮಿಸಿ ರಾಜ ವಿಷ್ಣುವರ್ಧನನ ಮೂಲಕ ಹೊಯ್ಸಳವಂಶದ ಕಲಾಶೈಲಿಯನ್ನು ಭಾರತೀಯ ಇತಿಹಾಸ, ಪುರಾಣಗಳ, ಆಗಮಗಳ ದೃಶ್ಯ ಪರಂಪರೆಗೆ ಬಳಸಿ ಕರ್ನಾಟಕದ ಕೀರ್ತಿ ಪತಾಕೆ ಪ್ರಪಂಚದಾದ್ಯಂತ ವ್ಯಾಪಿಸಲು ಕಾರಣರಾದರಾದರು ಮತ್ತು ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ, ಸಾಹಿತ್ಯಗಳಿಗೆ ಪ್ರೇರಕರಾಗಿದ್ದಾರೆ ಮೇಲುಕೋಟೆಯ ವಿಶಿಷ್ಟ ಸಂಪ್ರದಾಯಗಳಿಗೆ ಹಬ್ಬ ಹರಿದಿನಗಳ ಸ್ಥಾಪಕರಾಗಿ ಪಾಂಡವಪುರದ ತೊಣ್ಣೂರಿನ ಕೆರೆ ನಿರ್ಮಿಸುವ ಮೂಲಕ ಸಾವಿರಾರು ರೈತರ ಕೃಷಿಗೆ ಸಹಾಯ ಮಾಡಿದರು
ಮೈಸೂರು ಅರಸರ ಕಲೆ, ವಾಸ್ತು ಶಿಲ್ಪ, ಸಾಹಿತ್ಯಗಳಿಗೆ ಪ್ರೇರಕರಾದರು ಮೇಲುಕೋಟೆಯಲ್ಲಿ ದಾಸಪರಂಪರೆ ಹುಟ್ಟುಹಾಕಿ ಯತಿರಾಜದಾಸರ ಪರಂಪರೆಯನ್ನು ಸ್ಥಾಪಿಸಿದರು ತಿರುಪತಿ, ಮೇಲುಕೋಟೆ, ಶ್ರೀರಂಗಂ, ಕಾಂಚೀಪುರಂ ಸೇರಿದಂತೆ ನೂರಾರು ದೇವಾಲಯಗಳ ಆಡಳಿತ ನಿರ್ವಹಿಸಿದ್ದಾರೆ ಭಕ್ತಕನಕದಾಸರು, ಸ್ವಾಮಿನಾರಾಯಣ, ರಮಾನಂದ ಮುಂತಾದ ಸಾವಿರಾರು ಭಕ್ತರ ಆರಾಧ್ಯ ದೇವರಾಗಿದ್ದಾರೆ , ಮಾಜಿ ಮುಖ್ಯಮಂತ್ರಿಗಳಾದ ಎಚ್‍ಡಿ ಕುಮಾರಸ್ವಾಮಿ ರವರು ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿರುವುದು ಶಂಕರ ಜಯಂತಿ ಜಾರಿಗೆ ತಂದಿರುವುದು ಸ್ವಾಗತಾರ್ಹ ಹಾಗೆಯೇ ರಾಮಾನುಜರ ಸೇವೆ ಕೊಡುಗೆ ಮತ್ತು ಆದರ್ಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ನಿರ್ಲಕ್ಷ್ಯವನ್ನು ತೋರದೆ ಶಂಕರ ಜಯಂತಿಯ ಜೊತೆಯಲ್ಲೆ ರಾಮಾನುಜರ ಜಯಂತಿಯನ್ನು ಸಹ ಆಚರಣೆ ಜಾರಿಗೆ ತರಲು ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್,ವಿಪ್ರ ಮುಖಂಡರಾದ ನಂ ಶ್ರೀಕಂಠ ಕುಮಾರ್,ರಘುರಾಮ್ ವಾಜಪಾಯಿ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,ಅಜಯ್ ಶಾಸ್ತ್ರಿ,ಎಂ ಆರ್ ಬಾಲಕೃಷ್ಣ, ಹರೀಶ್,ಚಕ್ರಪಾಣಿ ,ಸುಚಿಂದ್ರ ,ಮಿರ್ಲೆ ಪಣೀಶ್ ಹಾಗೂ ಇನ್ನಿತರ ವಿಪ್ರ ಮುಖಂಡರು ಹಾಜರಿದ್ದರು










